Video: ಆಹಾ! ಎಂತ ಜೋಡಿ; ಚಿಂತೆಯನ್ನೆಲ್ಲಾ ಬಿಟ್ಟು ಬೀಡಿ ಸೇದುತ್ತಾ ಕುಳಿತ ವೃದ್ಧ ದಂಪತಿ

ಸಣ್ಣ ಸಣ್ಣ ವಿಷಯಕ್ಕೂ ಜಗಳ ಮಾಡಿ ದೂರಾಗುವ ಯುವ ಜೋಡಿಗಳ ನಡುವೆ ನಮ್ಮ ಸುತ್ತಮುತ್ತಲಿನಲ್ಲಿರುವ ವೃದ್ಧ ದಂಪತಿಗಳ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ. ಇದೀಗ ಈ ವೃದ್ಧ ದಂಪತಿಯ ಶೇರಿಂಗ್ ಹಾಗೂ ಕೇರಿಂಗ್ ನೋಡಿದ್ರೆ ನೀವು ಶಾಕ್ ಆಗ್ತೀರಾ. ಯಾವುದೇ ಟೆನ್ಶನ್ ಇಲ್ಲದೇ, ಬೀಡಿ ಸೇದುತ್ತಾ ಕುಳಿತ ಈ ಆದರ್ಶ ದಂಪತಿಯ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್‌ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Video: ಆಹಾ! ಎಂತ ಜೋಡಿ; ಚಿಂತೆಯನ್ನೆಲ್ಲಾ ಬಿಟ್ಟು ಬೀಡಿ ಸೇದುತ್ತಾ ಕುಳಿತ ವೃದ್ಧ ದಂಪತಿ
ವೈರಲ್‌ ವಿಡಿಯೋ
Image Credit source: Instagram

Updated on: Mar 12, 2026 | 3:24 PM

ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡ ತನ್ನನ್ನು ಪ್ರೀತಿಸಲಿ, ಕಾಳಜಿ ವಹಿಸಲಿ ಎಂದು ಬಯಸುವುದು ಸಹಜ. ಅಂತಹ ಜೀವನ ಸಂಗಾತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ. ಈ ವೃದ್ಧ ದಂಪತಿಯನ್ನು (elderly couple) ನೋಡಿದ್ರೆ  ನೀವು ಕೂಡ ಎಂತಹ ಜೋಡಿ ಇವರದ್ದು ಅನ್ನುತ್ತೀರಾ.  ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ದಂಪತಿಯೂ ಚಿಂತೆಯನ್ನೆಲ್ಲಾ ಬದಿಗೆ ಇಟ್ಟು  ಬೀಡಿ ಸೇದುತ್ತಾ ಕುಳಿತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

Naveen_gowda_1983 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೃದ್ಧ ದಂಪತಿ ಮನೆಯ ಹೊರಗಡೆ ಕುಳಿತಿರುವುದನ್ನು ಕಾಣಬಹುದು. ಇತ್ತ ವೃದ್ಧ ಮಹಿಳೆ ಬೀಡಿಗೆ ಬೆಂಕಿ ಹಚ್ಚಿ ಸೇದುತ್ತಿದ್ದಾಳೆ. ಆ ಬಳಿಕ ತನ್ನ ಕೈಯಲ್ಲಿದ್ದ ಬೀಡಿಯನ್ನು ಪತಿಗೆ ನೀಡಿದ್ದು, ಆ ವೃದ್ಧ ವ್ಯಕ್ತಿಯೂ ಬೀಡಿ ಸೇದುವುದನ್ನು ನೀವು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿ ಪ್ರೀತಿ ವ್ಯಕ್ತಪಡಿಸಿದ ಆಟೋ ಡ್ರೈವರ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೀಡಿಸಲಾಗದ ಬಂಧನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಂತಹ ಜೋಡಿ, ಅಜ್ಜ ನಿಜಕ್ಕೂ ಭಾಗ್ಯವಂತ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಧರ್ಮ ಪತ್ನಿ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:53 pm, Thu, 5 March 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us