Video: ಹಾಡು ಹಾಡುತ್ತಿದ್ದ ಮಹಿಳೆಯನ್ನು ಖುಷಿಯಲ್ಲಿ ತಬ್ಬಿ ನಿಂತ ಆನೆ, ಹೃದಯಸ್ಪರ್ಶಿ ದೃಶ್ಯ ವೈರಲ್

ಮಾತು ಬಾರದ ಮೂಕ ಪ್ರಾಣಿಗಳು ಕೂಡ ಮನುಷ್ಯರೊಂದಿಗೆ ಪ್ರೀತಿ, ಸಲುಗೆಯಿಂದಲೇ ವರ್ತಿಸುತ್ತದೆ. ತನ್ನ ಮುದ್ದಾದ ನಡವಳಿಕೆಯಿಂದಲೇ ತನ್ನನ್ನು ಕಾಳಜಿ ವಹಿಸುವ ಜೀವವನ್ನು ಕಟ್ಟಿ ಹಾಕುತ್ತವೆ. ಇದೀಗ ಇಲ್ಲೊಂದು ವಿಡಿಯೋ ನೋಡಿದರೆ ನಿಮ್ಮ ಮನಸ್ಸು ಕರಗಿ ಹೋಗುವುದಂತೂ ಖಂಡಿತ. ಹಾಡು ಹಾಡಿದ ಮಹಿಳೆಯನ್ನು ಹೋಗದಂತೆ ತಡೆದು ಪ್ರೀತಿಯಿಂದ ತನ್ನ ಸೊಂಡಿಲನ್ನು ಬಳಸಿ ನಿಂತಿದೆ. ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ.

Video: ಹಾಡು ಹಾಡುತ್ತಿದ್ದ ಮಹಿಳೆಯನ್ನು ಖುಷಿಯಲ್ಲಿ ತಬ್ಬಿ ನಿಂತ ಆನೆ, ಹೃದಯಸ್ಪರ್ಶಿ ದೃಶ್ಯ ವೈರಲ್
ವೈರಲ್‌ ವಿಡಿಐೋ
Image Credit source: Instagram

Updated on: Aug 07, 2025 | 4:52 PM

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ತುಂಬಾ ವಿಶೇಷವಾದದ್ದು. ಈ ಪ್ರಾಣಿಗಳಿಗೆ ಮಾತು ಬಾರದೆ ಹೋದರೂ ತನ್ನ ನಡವಳಿಕೆ ಹಾಗೂ ವರ್ತನೆಯಿಂದಲೇ ತನ್ನ ಮಾಲೀಕನನ್ನು ತಾನೆಷ್ಟು ಪ್ರೀತಿಸುತ್ತೇನೆಂದು ತೋರ್ಪಡಿಸುತ್ತದೆ. ಹೀಗಾಗಿ ಹೆಚ್ಚಿನವರು ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು (elephant) ತನಗಾಗಿ ಹಾಡು ಹಾಡಿದ ಮಹಿಳೆಯನ್ನು ತನ್ನ ಪ್ರೀತಿಯಿಂದಲೇ ಹೋಗದಂತೆ ಕಟ್ಟಿ ಹಾಕಿದೆ. ಆನೆ ಹಾಗೂ ಮಹಿಳೆಯ ಬಾಂಧವ್ಯ ಸಾರುವ ಈ ವಿಡಿಯೋವನ್ನು ಸೇವ್ ಎಲಿಫೆಂಟ್ ಫೌಂಡೇಷನ್ ನ ಸಂಸ್ಥಾಪಕಿ ಲೆಕ್ ಚೈಲೆರ್ಟ್ (Lek chailert) ಹಂಚಿಕೊಂಡಿದ್ದಾರೆ. ಈ ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರು ಕರಗಿ ಹೋಗಿದ್ದಾರೆ.

lek-chailert ಹೆಸರಿನ ಖಾತೆಯಲ್ಲಿ ಮಹಿಳೆಯೂ ಆನೆಗಾಗಿ ಇಂಪಾದ ಹಾಡು ಹಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ, ನನ್ನ ಹಾಡನ್ನು ಕೇಳಿ ಖುಷಿ ಪಟ್ಟ ಈ ಆನೆ ಎಷ್ಟರ ಮಟ್ಟಿಗೆ ತಲ್ಲೀನತೆಯಿಂದ ಸಂಗೀತ ಆಲಿಸಿತು, ನಾನು ಅಲ್ಲಿಂದ ಹೊರಹೋಗಲು ಅವಕಾಶ ನೀಡಲಿಲ್ಲ ಎಂದು ಶಿರ್ಷಿಕೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ
ಪ್ರವಾಹದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಆನೆ
ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ತಬ್ಬಿಕೊಂಡ ಮರಿಯಾನೆ
ಮಾಧುರಿಗಾಗಿ ಮಿಡಿದ ಕರ್ನಾಟಕದ ಜೈನ ಸಮುದಾಯ, ಜಿಯೋಗೆ ಗುಡ್​​ಬೈ ಹೇಳಿದ ಜನ
ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಪ್ರತಿ ಸಂಜೆಯೂ ಆರಾಮದ ಸಮಯ. ಮರದ ನೆರಳಿನಲ್ಲಿ ಆನೆಗಳು ಸೇರುತ್ತವೆ. ಅವುಗಳ ಜತೆ ಪ್ರಶಾಂತವಾಗಿ ಸಮಯ ಕಳೆಯುವ ಕ್ಷಣ ಅದು. ಆನೆಗಳ ಫೇವರಿಟ್ ಅಂಶವೆಂದರೆ ನನ್ನ ಜತೆಗೆ ನಿಲ್ಲುವುದು ಮತ್ತು ಹಾಡು ಕೇಳುವುದು; ಅದರಲ್ಲೂ ಮುಖ್ಯವಾಗಿ ಫಾ ಮಾಯಿ ಎಂಬ ಆನೆ. ಅದು ಸಂತೋಷದಿಂದ ಸಂಗೀತ ಆಸ್ವಾದಿಸುತ್ತಾ ನನ್ನನ್ನು ಹೋಗಲು ಬಿಡುವುದಿಲ್ಲ. ನಾನು ಅಲ್ಲೇ ನಿಂತಿರಬೇಕು ಎಂದು ಬಯಸುತ್ತದೆ. ಆನೆಯ ಫೇವರಿಟ್ ಹಾಡು ಮುಗಿಯುವವರೆಗೂ ನನ್ನನ್ನು ಬಿಡುವುದಿಲ್ಲ ಎಂದು ಲೆಕ್ ಚೈಲೆರ್ಟ್ ಹೇಳಿದ್ದಾರೆ.

ಈ ವಿಡಿಯೋದಲ್ಲಿ ಆನೆಯೊಂದಿಗಿರುವ ಲೆಕ್ ಚೈಲರ್ಟ್ ಇಂಪಾಗಿ ಹಾಡುಹಾಡುತ್ತಿದ್ದು, ಆನೆಯೂ ಅವರನ್ನು ಆತ್ಮೀಯವಾಗಿ ಸೊಂಡಿಲಿನಿಂದ ಸುತ್ತಿರುವ ಎಲ್ಲಿಯೂ ಹೋಗದಂತೆ ತಡೆದು ನಿಂತಂತಿದೆ. ತನ್ನ ಎರಡು ಕಿವಿಗಳನ್ನು ಅಲ್ಲಾಡಿಸುತ್ತ ಸಂಗೀತವನ್ನು ಆಸ್ವಾದಿಸುವುದನ್ನು ನೀವು ನೋಡಬಹುದು.

ಇದನ್ನೂ ಓದಿ:Video: ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ತಬ್ಬಿಕೊಂಡ ಮರಿಯಾನೆ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ವಿಡಿಯೋಗೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, ನೀವು ನಿಮ್ಮ ಇಂಪಾದ ಸಂಗೀತದಿಂದ ಆಕೆಯನ್ನು ಖುಷಿ ಪಡಿಸಿದ್ದಂತಿದೆ ಎಂದಿದ್ದಾರೆ. ನಿಮ್ಮನ್ನು ಎಷ್ಟು ಪ್ರೀತಿಸುತ್ತದೆ ಹಾಗೂ ಸಮಯ ಕಳೆಯಲು ಬಯಸುತ್ತದೆ ಎನ್ನುವುದನ್ನು ಇಷ್ಟ ಪಡುತ್ತದೆ ಎಂದು ನೀವು ನೋಡಿ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ನಾವೆಲ್ಲರೂ ನಿಮ್ಮ ಹಾಡು ಕೇಳಬಹುದೇ ಎಂದು ಕಾಮೆಂಟ್‌ನಲ್ಲಿ ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Thu, 7 August 25