Viral News: 500ರೂಗಳ ಕಂತೆ ಕಂತೆ ನೋಟಿನ ಜೊತೆ ಪೊಲೀಸ್​​​​​​​ ಅಧಿಕಾರಿಯ ಹೆಂಡತಿ ಮಕ್ಕಳ ಸೆಲ್ಫಿ

|

Updated on: Jun 30, 2023 | 4:58 PM

ಕಂತೆ ಕಂತೆ ನೋಟುಗಳ ಫೋಟೋಗಳು ಎಲ್ಲೆಡೆ ವೈರಲ್​ ಆಗಿದ್ದು, ಹೆಂಡತಿ ಮಕ್ಕಳ ಸೆಲ್ಫಿ ಪೊಲೀಸ್ ಅಧಿಕಾರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

Viral News: 500ರೂಗಳ ಕಂತೆ ಕಂತೆ ನೋಟಿನ ಜೊತೆ ಪೊಲೀಸ್​​​​​​​ ಅಧಿಕಾರಿಯ ಹೆಂಡತಿ ಮಕ್ಕಳ ಸೆಲ್ಫಿ
ಕಂತೆ ಕಂತೆ ನೋಟಿನ ಜೊತೆ ಪೊಲೀಸ್​​​​​​​ ಅಧಿಕಾರಿಯ ಹೆಂಡತಿ ಮಕ್ಕಳ ಸೆಲ್ಫಿ
Image Credit source: twitter/@Benarasiyaa
Follow us on

ಉತ್ತರ ಪ್ರದೇಶ : ಉನ್ನಾವೋ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಕ್ಕಳು 500ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ರಾಶಿ ಹಾಕಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗಾ ಈ ಫೋಟೋಗಳು ಎಲ್ಲೆಡೆ ವೈರಲ್​ ಆಗಿದ್ದು, ಹೆಂಡತಿ ಮಕ್ಕಳ ಸೆಲ್ಫಿ ಪೊಲೀಸ್ ಅಧಿಕಾರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪೊಲೀಸ್​​ ಅಧಿಕಾರಿಯ ಮನೆಯಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಪ್ರಶ್ನಿಸಲು ತೊಡಗಿದ್ದಾರೆ.

ಅಷ್ಟೊಂದು ನಗದು ಕಂಡು ಬಂದಿರುವುದು ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಮೇಶ್ ಚಂದ್ರ ಸಹಾನಿ ಅವರ ಮನೆಯಲ್ಲಿ ಎಂದು ತಿಳಿದುಬಂದಿದೆ. ಈ ಕುರಿತು ರಮೇಶ್ ಚಂದ್ರ ವಿರುದ್ಧ ಈಗಾಗಲೇ ತನಿಖೆ ಆರಂಭಿಸಲಾಗಿದೆ. 500 ರೂ ಮುಖ ಬೆಲೆಯ 27 ಕಂತೆಗಳು ಅಂದರೆ ಸುಮಾರು 14 ಲಕ್ಷ ರೂ ಇರುವುದು ತಿಳಿದುಬಂದಿದೆ.

ಇದನ್ನೂ ಓದಿ: ಎರಡೂ ಕಡೆಯಿಂದಲೂ ಗುಂಡಿನ ದಾಳಿ ಪ್ರತಿ ದಾಳಿ, ಮಧ್ಯೆ ಕುಳಿತು ಏನೂ ಆಗಿಲ್ಲವೆಂಬಂತೆ ಸ್ಯಾಂಡ್​ವಿಚ್ ತಿನ್ನುತ್ತಿರುವ ವ್ಯಕ್ತಿ

ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಸಮರ್ಥನೆ ನೀಡಿದ ಪೊಲೀಸ್​​ ಅಧಿಕಾರಿ ರಮೇಶ್ ಚಂದ್ರ ಸಹಾನಿ “ನವೆಂಬರ್ 14, 2021 ರಂದು ನಮ್ಮ ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗ ಸಿಕ್ಕಿರುವ ಹಣ ಮತ್ತು ಆಗ ಫೋಟೋ ತೆಗೆಯಲಾಗಿದೆ” ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: