
ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಅವರ ಕೆಲವೊಂದು ಹಾಸ್ಯಮಯ ಟ್ವೀಟ್ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಜೊತೆಗೆ ವೈರಲ್ ಕೂಡಾ ಆಗಿವೆ. ಅದರಂತೆ ಭಾನುವಾರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಬಾಲಕನೊಬ್ಬ ಕೆಸರುಮಯ ರಸ್ತೆಯಲ್ಲಿ ತನ್ನ ಪುಟ್ಟ ಟ್ರ್ಯಾಕ್ಟರ್ನ ಓಡಿಸುವ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.
ನಿಮ್ಮ ಮಗುವಿನ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಆದರೆ ಟ್ರಾಕ್ಟರ್ನೊಂದಿಗೆ ಆಟವಾಡುವಾಗ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕು ಅಂತ ಕ್ಯಾಪ್ಶನ್ ಬರೆದು ಟ್ರಾಕ್ಟರ್ನೊಂದಿಗೆ ಆಟವಾಡುವ ಮಗುವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಮಹೀಂದ್ರಾ ಅವರು ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆನಂದ್ ಮಹೀಂದ್ರಾ ಅವರು ಇದೀಗೆ ಕೇವಲ ಉದ್ಯಮಿಯಾಗಿಲ್ಲ. ಯಶಸ್ವಿ ಉದ್ಯಮಿ ಜೊತೆಗೆ ಟ್ವಿಟರ್ನಲ್ಲಿ ರಾಕ್ ಸ್ಟಾರ್ ಆಗಿದ್ದಾರೆ. ಬಾಲಕ ತನ್ನ ಪುಟ್ಟ ಆಟಿಕೆ ಟ್ರಾಕ್ಟರ್ ಸಹಾಯದಿಂದ ಮಣ್ಣಿನ ರಸ್ತೆಯಲ್ಲಿ ಸಿಲುಕಿರುವ ಅಗೆಯುವ ಯಂತ್ರವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವ ಮುದ್ದಾದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬಾಲಕ ತನ್ನ ಆಟಿಕೆ ಟ್ರ್ಯಾಕ್ಟರ್ಗೆ ಅಗೆಯುವ ಯಂತ್ರವನ್ನು ಹಗ್ಗದಿಂದ ಕಟ್ಟಿ ಎಳೆಯಲು ಪ್ರಯತ್ನಿಸುತ್ತಿದ್ದಾನೆ. ಈ ವೇಳೆ ಅಗೆಯುವ ಯಂತ್ರದ ಚಾಲಕನೂ ಕೂಡಾ ಬಾಲಕನಿಗೆ ಪ್ರೋತ್ಸಾಹಿಸಲು ನಿಧಾನವಾಗಿ ಚಲಿಸುತ್ತಾನೆ.
ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸುಮಾರು 4.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡಿದ್ದು, 30,000 ಲೈಕ್ಗಳನ್ನು ಗಳಿಸಿದೆ.
ಇದನ್ನೂ ಓದಿ
Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳ ಡೆಲಿವರಿ ಇಂದಿನಿಂದ ಶುರು
ವರನಿದ್ದ ಕುದುರೆ ಗಾಡಿಗೆ ಬೆಂಕಿ! ತಪ್ಪಿತು ಬಾರಿ ದೊಡ್ಡ ಅನಾಹುತ; ವಿಡಿಯೋ ವೈರಲ್
Published On - 12:23 pm, Wed, 15 December 21