ಶ್ರೀಮಂತಿಕೆಯ ದರ್ಪದಿಂದ ಮೆರೆದಾಡುವವರು ಅದೆಷ್ಟೋ ಜನರಿದ್ದಾರೆ. ಹಣದ ಮದದಲ್ಲಿ ಇತರರನ್ನು ಕೀಳಾಗಿ ನೋಡುತ್ತಾ ಅಹಂಕಾರದಿಂದ ಮೆರೆದಾಡುತ್ತಿರುತ್ತಾರೆ. ಕೆಲವರಂತೂ ತಾವೇ ತಪ್ಪು ಮಾಡಿದ್ರು, ಆ ತಪ್ಪನ್ನು ಅಮಾಯಕನ ಮೇಲೆ ಹೊರಿಸಿ, ದರ್ಪ ತೋರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹಿಂದಿನಿಂದ ಬಂದ ತಮ್ಮ ಕಾರಿಗೆ ಮುಂದೆ ನಿಂತಿದ್ದ ಫುಡ್ ಡೆಲಿವರಿ ಹುಡುಗನ ಬೈಕ್ ಟಚ್ ಆಯಿತೆಂದು, ಕಾರಿನಿಂದ ಇಳಿದ ತಂದೆ ಮಗ ಫುಡ್ ಡೆಲಿವರಿ ಬ್ಯಾಗ್ ಅನ್ನು ರಸ್ತೆಗೆಸೆದು, ಆ ಯುವಕನ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಅಮಾನವೀಯ ಘಟನೆ ಆಂಧ್ರಪ್ರದೇಶದ ಗಾಜುವಾಕದಲ್ಲಿ ನಡೆದಿದ್ದು, ಶ್ರೀಮಂತಿಕೆಯ ಮದದಲ್ಲಿ ತಂದೆ-ಮಗ ಡೆಲಿವರಿ ಬಾಯ್ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನಡು ರಸ್ತೆಯಲ್ಲಿ ಡೆಲಿವರಿ ಬಾಯ್ ಬೈಕ್‌ಗೆ ಕಾರೊಂದು ಹಿಂದಿನಿಂದ ಬಂದು ಟಚ್ ಆಗಿದೆ. ಇದೆಲ್ಲಾ ಫುಡ್ ಡೆಲಿವರಿ ಹುಡುಗನದ್ದೇ ತಪ್ಪೆಂದು ಕಾರಿನಿಂದ ಇಳಿದು ಬಂದ ತಂದೆ ಮಗ, ಆ ಯುವಕನ ಜೊತೆ ಸೊಕ್ಕಿನಿಂದ ಮಾತನಾಡಿದ್ದಲ್ಲದೆ, ಸಹಾನುಭೂತಿಯನ್ನೂ ತೋರದೆ ಬೈಕ್‌ನ ಹಿಂಬದಿಯಲ್ಲಿದ್ದ ಫುಡ್ ಡೆಲಿವರಿ ಬ್ಯಾಗ್ ಅನ್ನು ನಡು ರಸ್ತೆಗೆ ಎಸೆದು ಅಟ್ಟಹಾಸ ಮೆರೆದಿದ್ದಾರೆ. ಈ ಕ್ರೌರ್ಯವನ್ನು ವಾಹನ ಸವಾರರೊಬ್ಬರು ಪ್ರಶ್ನಿಸಿದ್ದಕ್ಕೆ ತಂದೆ ನಾನು ಸಬ್ ಇನ್ಸ್‌ಪೆಕ್ಟರ್ ಎಂದು ದರ್ಪದಿಂದ ಮಾತನಾಡಿದ್ದಾನೆ.
Road-Rage Kalesh (Andhra Pradesh: The delivery boy was punched from behind in Gajuwaka, the owner of the car who threw the delivery boy’s bags away as he was across the road again)
pic.twitter.com/dANfSpnYKu— Ghar Ke Kalesh (@gharkekalesh) September 1, 2024
ಈ ಕುರಿತ ಪೋಸ್ಟ್ ಒಂದನ್ನು Ghar Ke Kalesh ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಡೆಲಿವರಿ ಬಾಯ್ ಬೈಕ್‌ಗೆ ಹಿಂದಿನಿಂದ ಗುದ್ದಿದ್ದು ಮಾತ್ರವಲ್ಲದೆ ಆ ಕಾರ್ ಮಾಲೀಕರು ಡೆಲಿವರಿ ಬಾಯ್ ಮೇಲೆ ದರ್ಪ ತೋರುವ ದೃಶ್ಯವನ್ನು ಕಾಣಬಹುದು. ಸೀದಾ ಕಾರಿನಿಂದ ಇಳಿದು ಬಂದು ಮಾನವೀಯತೆಯನ್ನೂ ತೋರದೆ ಕಾರ್ ಮಾಲೀಕ ಫುಡ್ ಡೆಲಿವರಿ ಬ್ಯಾಗ್ ಅನ್ನೇ ನಡು ರಸ್ತೆಗೆ ಎಸೆದು ಅಹಂಕಾರದಿಂದ ವರ್ತಿಸಿದ್ದಾನೆ.
ಇದನ್ನೂ ಓದಿ: ತಿಂಡಿಗೆ ಅವಲಕ್ಕಿ ಬದಲು ಡ್ರೈ ಫ್ರೂಟ್ಸ್ ಕೊಟ್ಟ ಗಂಡ, ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಸೆಪ್ಟೆಂಬರ್ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಹೀಗೆ ದರ್ಪ ತೋರಿಸುವವರ ಡ್ರೈವಿಂಗ್ ಲೈಸನ್ಸ್‌ಗಳನ್ನು ರದ್ದುಗೊಳಿಸಬೇಕುʼ ಎಂದು ಹೇಳಿದ್ದಾರೆ, ಮತ್ತೊಬ್ಬ ಬಳಕೆದಾರರು ʼಫುಡ್ ಡೆಲಿವರಿ ಬ್ಯಾಗ್ ಅನ್ನು ರಸ್ತೆಗೆಸೆಯುವ ಅವಶ್ಯಕತೆ ಏನಿತ್ತʼ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ