Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ

ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲ ಘಟನೆಗಳನ್ನು ನೋಡಿದಾಗ ಈ ಪ್ರಪಂಚದಲ್ಲಿ ಇಂತಹ ಜನರು ಇರ್ತಾರಾ ಎಂದೆನಿಸುತ್ತದೆ. ಗರ್ಭಿಣಿ ಮಹಿಳೆಯೊಬ್ಬಳು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಲಭ್ಯವಿರಲಿಲ್ಲ. ಹೀಗಾಗಿ ಶೌಚಾಲಯದಲ್ಲಿ ಗರ್ಭಿಣಿ ಮಹಿಳೆಯೂ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ
ಬಾತ್‌ರೂಮ್‌ನಲ್ಲೇ ಮಹಿಳೆಗೆ ಹೆರಿಗೆ
Image Credit source: Google

Updated on: Sep 23, 2025 | 6:15 PM

ಆಂಧ್ರ ಪ್ರದೇಶ, ಸೆಪ್ಟೆಂಬರ್ 23: ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ತಾರೆ, ಆದರೆ ಕೆಟ್ಟ ತಾಯಿ ಇರಲ್ಲ, ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಹೌದು, ಗರ್ಭಿಣಿ ಮಹಿಳೆಯೊಬ್ಬಳು (Pregnant women) ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಾಳೆ. ಆ ವೇಳೆ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಲಭ್ಯವಿರದ ಕಾರಣ ಆಸ್ಪತ್ರೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವನ್ನು ಶೌಚಾಲಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆಯೂ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಗಿಡ್ಡಲೂರಿನಲ್ಲಿರುವ (Giddalur in Prakasam district) ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಶೌಚಾಲಯದಲ್ಲಿದ್ದ ನವಜಾತ ಶಿಶುವಿನ ರಕ್ಷಣೆ

ಗರ್ಭಿಣಿ ಮಹಿಳೆಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮನೀಡಿ ನವಜಾತ ಶಿಶುವನ್ನು ಸ್ನಾನಗೃಹದ ಬಕೆಟ್‌ನಲ್ಲಿ ಬಿಟ್ಟು ಹೋಗಿದ್ದಾಳೆ. ಮಗು ಅಳುತ್ತಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿಗಳು ಬಾತ್ರೂಮ್ ಬಾಗಿಲು ತೆರೆದು ನೋಡಿದಾಗ ಬಕೆಟ್‌ನಲ್ಲಿ ನವಜಾತ ಶಿಶು ಇರುವುದು ತಿಳಿದಿದೆ. ಮಗುವನ್ನು ರಕ್ಷಿಸಿದ ಸಿಬ್ಬಂದಿಗಳು ವೈದ್ಯರು ಲಭ್ಯವಿಲ್ಲದ ಕಾರಣ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಪೊಲೀಸರಿಂದ ತನಿಖೆ ಆರಂಭ

ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿ ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದ ಮಹಿಳೆಯ ಜೊತೆಗೆ ವ್ಯಕ್ತಿಯೊಬ್ಬನು ಬಂದಿರುವುದು ತಿಳಿದು ಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳ ಮೂಲಕ ಪೊಲೀಸರು ಮಹಿಳೆಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ
ಪೊಲೀಸ್ ಜೀಪ್ ಮೇಲೇರಿ ಪ್ರೇಮಿಗಳಿಬ್ಬರ ರಂಪಾಟ
ಬಸ್ ಸ್ಟ್ಯಾಂಡ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು
ಗೆಳೆಯನ ಹೆಂಡತಿಯ ಬದಲಾಗಿ ತನ್ನ ಹೆಂಡತಿಯನ್ನು ಕೊಟ್ಟ ಯುವಕ!

ಇದನ್ನೂ ಓದಿ:Video: ಓಡಿ ಹೋಗಿ ಸಿಕ್ಕಿ ಹಾಕಿಕೊಂಡ ಜೋಡಿ, ಪೊಲೀಸ್ ಜೀಪ್ ಮೇಲೇರಿ ರಂಪಾಟ

ಪೊಲೀಸರಿಗೆ ತನಿಖೆಯ ವೇಳೆ ಗರ್ಭಿಣಿ ಮಹಿಳೆ ಹೆರಿಗೆಗೆ ಬಂದಾಗ ಯಾವುದೇ ವೈದ್ಯರು ಲಭ್ಯವಿರಲಿಲ್ಲ. ಹೀಗಾಗಿ ಈ ಗರ್ಭಿಣಿ ಮಹಿಳೆ ಶೌಚಾಲಯಕ್ಕೆ ಹೋಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಮಗು ಆರೋಗ್ಯವಾಗಿದೆ ಮತ್ತು ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಆರೈಕೆಗಾಗಿ ಮಗುವನ್ನು ಐಸಿಡಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಸಿಐ ಸುರೇಶ್ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Tue, 23 September 25