ಇಂಟರ್ನೆಟ್ನಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ನಗಿಸುವುದಂತೂ ಸುಳ್ಳಲ್ಲ. ಹಾಗೇ, ಇದೀಗ ಬ್ಯೂಟಿ ಪಾರ್ಲರ್ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನ ನೋಡಿದರೆ ನಿಮಗೂ ನಗು ಬಾರದೆ ಇರದು.
ಮಹಿಳೆಯೊಬ್ಬರು ತನ್ನ ಸ್ನೇಹಿತೆಯೊಂದಿಗೆ ಬ್ಯೂಟಿಪಾರ್ಲರ್ಗೆ ಹೋಗಿದ್ದಾರೆ. ಆಕೆಯನ್ನು ಕುರ್ಚಿಯ ಮೇಲೆ ಕೂರಿಸಿ, ಬ್ಯೂಟಿಷಿಯನ್ ಯುವಕ ಅವರ ಕೂದಲು ತೊಳೆಯುತ್ತಿದ್ದಾರೆ. ಮಹಿಳೆ ಬಹುಶಃ ಹೇರ್ ಕಟ್ಗೆ ಹೋಗಿದ್ದರಬೇಕು ಹೋಗಿದ್ದರಬೇಕು. ಸಾಮಾನ್ಯವಾಗಿ ಕೂದಲು ಕತ್ತರಿಸುವ ಮೊದಲು ಅದನ್ನು ಸ್ವಚ್ಛವಾಗಿ ತೊಳೆಯಲಾಗುತ್ತದೆ. ಹೀಗೆ ಈ ಮಹಿಳೆಯನ್ನು ನೇರವಾಗಿ ಮಲಗಿಸಿ, ತಲೆಯನ್ನು ಸಿಂಕ್ ಬಳಿ ಇಟ್ಟು ಆತ ಕೂದಲು ತೊಳೆಯುತ್ತಿದ್ದಾರೆ. ಆದರೆ ಈಕೆ ತಲೆಯನ್ನು ಸರಿಯಾಗಿ ಇಟ್ಟುಕೊಳ್ಳುತ್ತಿಲ್ಲ. ತನ್ನ ಪಕ್ಕದಲ್ಲಿ, ನಾಯಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿರುವ ಸ್ನೇಹಿತೆಯ ಬಳಿ ಮಾತನಾಡುತ್ತ, ಮೊಬೈಲ್ ನೋಡುತ್ತ ಪದೇಪದೆ ತಲೆಯನ್ನು ಅಲ್ಲಾಡಿಸುತ್ತಲೇ ಇದ್ದರು. ಇದರಿಂದ ಬ್ಯೂಟಿಷಿಯನ್ಗೆ ಆಕೆಯ ತಲೆಕೂದಲು ತೊಳೆಯುವುದು ತೀರ ಕಷ್ಟವಾಗುತ್ತಿತ್ತು.
ಪ್ರಾರಂಭದಲ್ಲಿ ಆತ ತಾಳ್ಮೆಯಿಂದಲೇ ಇದ್ದ. ಆದರೆ ಪದೇಪದೆ ತನ್ನ ಕೆಲಸಕ್ಕೆ ಅಡಚಣೆ ಆಗುತ್ತಿದ್ದಂತೆ ಅವನು ಕೈಯಲ್ಲಿದ್ದ ಶೋವರ್ನಿಂದ ಮಹಿಳೆ ಮುಖದ ಮೇಲೆಲ್ಲ ನೀರು ಸಿಂಪಡಿಸಿದ್ದಾನೆ. ಆತ ಹಾಗೇ ಮಾಡುತ್ತಿದ್ದಂತೆ ಇನ್ನೊಂದು ಕುರ್ಚಿಯಲ್ಲಿ ಕುಳಿತಿದ್ದ ಇನ್ನೊಬ್ಬರು ಮಹಿಳಾ ಗ್ರಾಹಕಿ ತುಂಬ ದಿಗಿಲಾದಂತೆ ನೋಡಿದ್ದಾರೆ. ಒಟ್ಟಾರೆ ವಿಡಿಯೋ ಮಾತ್ರ ನೆಟ್ಟಿಗರಲ್ಲಿ ಸಿಕ್ಕಾಪಟೆ ನಗು ತರಿಸಿದೆ. ಟ್ವಿಟರ್ನಲ್ಲಿ ಶೇರ್ ಆಗಿರುವ ಈ ವಿಡಿಯೋಕ್ಕೆ 60 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ನೆಟ್ಟಿಗರಂತೂ ಬ್ಯೂಟಿಷಿಯನ್ ಪರನೇ ಜಾಸ್ತಿ ವಕಾಲತ್ತು ವಹಿಸಿದ್ದಾರೆ. ಅವನೆಷ್ಟು ಅಂತ ಸಹಿಸಿಕೊಳ್ಳುವುದು? ಸರಿಯಾಗಿಯೇ ಮಾಡಿದ್ದಾನೆ ಎಂದೂ ಹೇಳಿದ್ದಾರೆ.
ನೀವೂ ಒಮ್ಮೆ ವಿಡಿಯೋ ನೋಡಿಬಿಡಿ..
He can only take so much. pic.twitter.com/w7AGGX9nG7
— Jamie Gnuman197… (@Jamie24272184) July 4, 2021
Published On - 5:56 pm, Mon, 12 July 21