Puchka: ಈ ಬೀದಿಬದಿಯ ತಿಂಡಿ ಮಾರಾಟಗಾರರ ವಿಚಿತ್ರ ಪ್ರಯೋಗಗಳು ಮತ್ತು ಫುಡ್ ವ್ಲಾಗರ್ಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂಥ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ನೋಡಿ ಮತ್ತೀಗ ಕೋಕಾಕೋಲಾ (Coca Cola), ಎಳನೀರು, ಐಸುಗಡ್ಡೆ ಸೇರಿಸಿ ಈತ ಹೀಗೊಂದು ತಿನಿಸನ್ನು ತಯಾರಿಸಿದ್ದಾನೆ ಇದಕ್ಕೆ ಪುಚ್ಕಾ ಎನ್ನುವುದೋ, ಪಾನೀ ಬಟಾಶಾ (Paani Batasha) ಎನ್ನುವುದೋ, ಗೋಲ್ಗಪ್ಪಾ (Golgappe) ಎನ್ನುವುದೋ ಅಥವಾ ಪಾನೀಪುರಿ (Paani Puri) ಎನ್ನುವುದೋ ನೀವೇ ಹೆಸರಿಸಿ. ಏನು ಕರೆದರೂ ಸರಿ, ನಾಲಗೆಗೆ ರುಚಿ ಎನ್ನಿಸಿದ್ದನ್ನು ಜನ ಮುಗಿಬಿದ್ದು ತಿನ್ನುತ್ತಾರೆ. ನಂತರದ ಪರಿಣಾಮ ಯಾರಿಗೆ ಬೇಕು? ನೋಡಿ ಹೊಸ ಅತ್ಯಾರೋಗ್ಯರ ತಿಂಡಿಯೊಂದು ಆವಿಷ್ಕಾರವಾಗುವ ಈ ಬಗೆಯನ್ನು ನೋಡಿ ಪಾವನರಾಗಿ.
ದಿ ಫುಡೀಸ್ ರಿಟ್ರೀಟ್ ರೀಲ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಈ ಫ್ಯೂಷನ್ ಪುಚ್ಕಾ ಕೊಲ್ಕತ್ತೆಯ ವಿವೇಕಾನಂದ ಪಾರ್ಕ್ನಲ್ಲಿ ಲಭ್ಯವಿದೆ ಎಂದು ಈ ಪೋಸ್ಟ್ನಡಿ ಬರೆಯಲಾಗಿದೆ. ಅನೇಕರು ಈ ತಿನಿಸಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯಕ್ಕೆ ಮಾರಕವಾಗುವಂಥ ಸಾಮಗ್ರಿಗಳನ್ನು ಇದರಲ್ಲಿ ಹಾಕಲಾಗಿದೆ. ಇಂಥ ಪದಾರ್ಥಗಳನ್ನು ತಿನ್ನುವ ಗೋಜಿಗೇ ನಾನು ಹೋಗಲಾರೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ; 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ
ಕಥೆನೇ ಮುಗಿತು ಬಿಡಿ. ದಯವಿಟ್ಟು ಇದನ್ನು ಯಾರೂ ತಿನ್ನಬೇಡಿ. ನಾನಂತೂ ಮನೆತನಕ ಉಚಿತವಾಗಿ ಕಳಿಸಿಕೊಟ್ಟರೂ ತಿನ್ನಲಾರೆ. ಇಂಥ ಪ್ರಯೋಗಗಳನ್ನು ಇವರೆಲ್ಲ ಯಾವಾಗ ನಿಲ್ಲಿಸುತ್ತಾರೋ… ಅಂತೆಲ್ಲ ಕೋಪದಿಂದ ಪ್ರತಿಕ್ರಿಯಿಸಿದ್ಧಾರೆ ನೆಟ್ಟಿಗರು. ವಾರದ ಹಿಂದೆ ಪೋಸ್ಟ್ ಮಾಡಲಾದ ಈ ರೀಲ್ ಅನ್ನು ಈತನಕ 10,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಹೀಗೆ ಲೈಕ್ಸ್, ಶೇರ್, ಕಮೆಂಟ್ಗೆಂದೇ ಇಂಥ ಹುಚ್ಚು ಸಾಹಸಕ್ಕೆ ಬೀಳುತ್ತಿದ್ದಾರೋ ಏನೋ ಜನ. ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ