ಒಡಿಶಾದ ಎಲ್. ಈಶ್ವರ್ ರಾವ್ ಜನಪ್ರಿಯ ಚಿಕಣಿ ಕಲಾವಿದ. ಈ ಮೊದಲು ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪೆನ್ಸಿಲ್ ನಿಬ್ನಿಂದ ಯೋಗ ಭಂಗಿಯನ್ನು ಪ್ರದರ್ಶಿಸುತ್ತಿರುವ ವ್ಯಕ್ತಿಯ ಚಿಕಣಿ ಶಿಲ್ಪವನ್ನು ರಚಿಸಿದ್ದರು. ಇದೀಗ ಒಡಿಶಾ ಪುರಿಯಲ್ಲಿ ರಥ ಯಾತ್ರೆಗೆ ಮುಂಚಿತವಾಗಿ ಬೆಂಕಿಕಡ್ಡಿಗಳನ್ನು ಬಳಸಿ, ಮೂರು ದೇವತೆಗಳ ವಿಗ್ರಹದೊಂದಿಗೆ ಚಿಕ್ಕ ರಥವನ್ನು ತಯಾರಿಸಿದ್ದಾರೆ. ರಥ 4.5 ಇಂಚುಗಳಷ್ಟು ಎತ್ತರವಿದೆ.
ಜುಲೈ 12ರಿಂದ ಒಡಿಶಾದಲ್ಲಿ ರಥಯಾತ್ರೆ ಪ್ರಾರಂಭವಾಗಲಿದೆ. ಎಲ್. ಈಶ್ವರ್ ರಾವ್ ಅವರು ಕಳೆದ 25 ವರ್ಷಗಳಿಂದ ಚಿಕಣಿ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಆಕರ್ಷಕವಾದ ಚಿಕಣಿ ಚಿತ್ರಕಲೆಯನ್ನು ಕೆತ್ತುವ ಮೂಲಕ ತಮ್ಮ ಪ್ರತಿಭೆಯಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಡಿಯಾ ಟು ಡೇ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಈಶ್ವರ್ ರಾವ್, ನಾನು ಭಗವಾನ್ ಜಗನ್ನಾಥರ ಭಕ್ತನು. ನನ್ನ ಕರಕುಶಲ ಪ್ರತಿಭೆಯ ಮೂಲಕ ದೇವರಿಗೆ ಪ್ರಾರ್ಥನೆಯನ್ನು ಅರ್ಪಿಸುತ್ತಿದ್ದೇನೆ. ಬೆಂಕಿ ಕಡ್ಡಿಗಳನ್ನು ಬಳಸಿ ರಥವನ್ನು ಪೂರ್ಣಗೊಳಿಸಲು ನನಗೆ ಒಂಭತ್ತು ದಿನಗಳು ಬೇಕಾಯಿತು. ಒಟ್ಟು 435 ಬೆಂಕಿ ಕಡ್ಡಿಗಳನ್ನು ಬಳಸಿ ರಥವನ್ನು ತಯಾರಿಸಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವರದಿ ತಿಳಿಸಿದೆ.
Odisha | A Bhubaneswar artist crafted miniature modules of chariots of lord Jagannath, devi Subhadra & lord Balabhadra using matchsticks.
“It took me 9 days to complete them by using 435 matchsticks. I used neem wood to make the deities,” said L Eswar Rao (08.07) pic.twitter.com/UyCe4bOEdi
— ANI (@ANI) July 8, 2021
ಈಶ್ವರ್ ರಾವ್ ಅವರು ಮರದ ಕಡ್ಡಿ, ಪೆನ್ಸಿಲ್, ಸೀಸ, ರಬ್ಬರ್ ಹೀಗೆ ಎಲ್ಲಾ ವಸ್ತುಗಳಲ್ಲಿಯೂ ವಿಗ್ರಹಗಳನ್ನು ತಯಾರಿಸುತ್ತಾರೆ. ಆರ್ಟ್ ಮತ್ತು ಕ್ರಾಫ್ಟ್ ಸೋಷಿಯಲ್ ಫೌಂಡೇಶನ್ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಮಕ್ಕಳಿಗಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. 37 ವರ್ಷದವರಾದ ಈಶ್ವರ್ ರಾವ್ ಅವರು ತಮ್ಮದೇ ವಸ್ತು ಸಂಗ್ರಹಾಲಯವನ್ನು ರೂಪಿಸಿದ್ದು ತಾವು ತಯಾರಿಸಿದ ಎಲ್ಲಾ ಆಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಇದನ್ನೂ ಓದಿ:
ಪುರಿ ಜಗನ್ನಾಥನ ವಿಗ್ರಹವನ್ನು 1475 ಐಸ್ಕ್ರೀಮ್ ಕಡ್ಡಿಗಳಿಂದ ತಯಾರಿಸಿದ ಯುವಕ; ಕರಕುಶಲ ಪ್ರತಿಭೆಗೆ ಮೆಚ್ಚುಗೆ
Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?
Published On - 12:51 pm, Fri, 9 July 21