ಕಲೆ ಅನ್ನೋದು ಯಾರ ಸ್ವತ್ತು ಕೂಡ ಅಲ್ಲ. ಈ ಕಲೆ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯೋದಿಲ್ಲ. ಒಲಿದರೆ ಅದು ಎಂತವರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಚಿತ್ರ ಕಲಾವಿದ ಶಿಂಟು ಮೌರ್ಯ. ಇವರೊಬ್ಬ ಅದ್ಭುತ ಕಲಾವಿದರಾಗಿದ್ದು, ಯಾವುದೇ ರೀತಿಯ ಪೈಂಟಿಗ್ ಬಳಸದೆ ಟೊಮೆಟೊ ಸಾಸ್, ಕೆಚಪ್ ಚಹಾ, ಶಾಂಪೂ ಇತ್ಯಾದಿಗಳನ್ನು ಬಳಸಿ ಅದ್ಭುತ ಚಿತ್ರಗಳನ್ನು ಬಿಡಿಸುತ್ತಾರೆ. ಅಷ್ಟೇ ಯಾಕೆ ವಿವಿಧ ವಸ್ತುಗಳನ್ನು ಬಳಸಿಕೊಂಡು ನೆರಳು ಬೆಳಕಿನ (ಶ್ಯಾಡೋ ಪೋರ್ಟರೈಟ್) ಕಲಾಕೃತಿಯನ್ನು ಸಹ ರಚಿಸುತ್ತಾರೆ. ಇವರು ತನ್ನ ಈ ವಿಶಿಷ್ಟ ಪ್ರತಿಭೆಯಿಂದ ಇದಾಗಲೇ ಭಾರಿ ಹೆಸರನ್ನು ಗಳಿಸಿದ್ದಾರೆ. ಇದೀಗ ಶಿಂಟು ಮೌರ್ಯ ಹಳೆಯ ಟಿವಿಯ ಬಿಡಿ ಭಾಗಗಳನ್ನು ಉಪಯೋಗಿಸಿಕೊಂಡು ನೆರಳು ಬೆಳಕಿನಲ್ಲಿ ರಾಮ ಮಂದಿರದ ಸುಂದರ ಕಲಾಕೃತಿಯನ್ನು ರಚಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರ ಅದ್ಭುತ ಕಲೆಗಾಗಿಕೆಗೆ ನೆಟ್ಟಿಗರು ತಲೆಬಾಗಿದ್ದಾರೆ.
ಶಿಂಟು ಮೌರ್ಯ (@artist_shintu_mourya) ಈ ಸುಂದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಡಿದ್ದು, ವಿಡಿಯೋದಲ್ಲಿ ಅವರು ಹಳೆಯ ಟಿವಿಯ ಬಿಡಿ ಭಾಗಗಳನ್ನೆಲ್ಲಾ ಬಳಸಿಕೊಂಡು ರಾಮ ಮಂದಿರದ ಶ್ಯಾಡೋ ಪೋರ್ಟರೈಟ್ ಚಿತ್ರವನ್ನು ರಚಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ:
ವಿಡಿಯೋದಲ್ಲಿ ಕಲಾವಿದ ಶಿಂಟು ಮೌರ್ಯ ಹಳೆಯ ಟಿವಿಯನ್ನು ಹಿಡಿದುಕೊಂಡು ಇದ್ರಿಂದ ಸುಂದರ ಚಿತ್ರವೊಂದುನ್ನು ರಚಿಸಿಸೋಣ ಅಂತ ಹೇಳ್ತಾರೆ. ನಂತರ ಟಿವಿಯ ಬಿಡಿ ಭಾಗಗಳನ್ನೆಲ್ಲಾ ತೆಗೆದುಕೊಂಡು, ಎಲ್ಲವನ್ನು ಒಂದೊಂದಾಗಿ ಜೋಡಿಸಿಕೊಂಡು ರಾಮ ಮಂದಿರ ಹಾಗೂ ಅದರ ಮೇಲ್ಗಡೆ ರಾಮ, ಸೀತಾ ದೇವಿ ಹಾಗೂ ಲಕ್ಷ್ಮಣರ ಅದ್ಭುತವಾದ ಶ್ಯಾಡೋ ಪೋರ್ಟರೈಟ್ ಕಲಾಕೃತಿಯನ್ನು ರಚಿಸಿರುವಂತಹ ಅದ್ಭುತ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ ಬರುವ ವೇಳೆ ಹಳಿ ದಾಟಿದ ವ್ಯಕ್ತಿ, ಮುಂದೆನಾಯ್ತು ನೋಡಿ?
ಜನವರಿ 03 ರಂದು ಹಂಚಿಕೊಳ್ಳಲಾದ ಈ ವೈರಲ್ ವಿಡಿಯೋ 32.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 3.9 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿದೆ. ಒಬ್ಬ ಬಳಕೆದಾರರು ʼನಿಮ್ಮ ಈ ಅದ್ಭುತ ಕಲೆಯನ್ನು ನೋಡಿ ಮೈಯೆಲ್ಲಾ ರೋಮಾಂಚನವಾಯಿತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದ್ಭುತ ಪ್ರತಿಭೆ ʼ ಎಂದು ಕಮೆಂಟ್ ಮಾಡಿದ್ದಾರೆ. ಅನೇಕರು ಶಿಂಟು ಮೌರ್ಯ ಅವರ ಈ ಅದ್ಭುತ ಕಲೆಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ