ರಾಮ ಮಂದಿರ ಉದ್ಘಾಟನೆಯನ್ನು ಕಣ್ತುಂಬಿಸಿಕೊಳ್ಳಲು ಇಡೀ ದೇಶವೇ ಜನವರಿ 22ಕ್ಕಾಗಿ ಎದುರು ನೋಡುತ್ತಿದೆ. ಅಯೋಧ್ಯೆಯಲ್ಲಿ ಈಗಾಗಲೇ ಪ್ರತಿಷ್ಠಾಪನೆಗೂ ಮುನ್ನ ನಡೆಯಬೇಕಾದ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಇತ್ತ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಈ ನಡುವೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಶಾಲಾ ವಿದ್ಯಾರ್ಥಿಗಳು ರಾಮನ ಭಜನೆಗೆ ಅದ್ಭುತವಾಗಿ ನೃತ್ಯ ಮಾಡಿದ್ದು, ಮಕ್ಕಳ ಜೊತೆಗೆ ಶಿಕ್ಷಕಿಯು ಹೆಜ್ಜೆ ಹಾಕಿದ್ದಾರೆ.
ಈ ವಿಡಿಯೋದಲ್ಲಿ ‘ರಾಮ್ ಆಯೇಂಗೆ’ ಭಜನೆ ಹಾಡಿಗೆ ಮಕ್ಕಳ ಜೊತೆಗೆ ಶಿಕ್ಷಕಿಯೂ ಕೂಡ ನೃತ್ಯ ಮಾಡಿದ್ದು, ವಿಡಿಯೋದಲ್ಲಿ ಶಿಕ್ಷಕಿಯೂ ಡಾನ್ಸ್ ಮಾಡುವುದನ್ನು ನೋಡುತ್ತಾ ವಿದ್ಯಾರ್ಥಿಗಳು ಕೂಡ ನೃತ್ಯ ಮಾಡುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಡಿಯೋವನ್ನು ಎಎನ್ ಐ ಸುದ್ದಿ ಸಂಸ್ಥೆಯು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಕಂಡಕ್ಟರನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಡ್ರೈವರಣ್ಣ, ಮುಂದೇನಾಯ್ತು ನೋಡಿ?
ವಿಡಿಯೋ ಇಲ್ಲಿದೆ ನೋಡಿ:
#WATCH | Nagpur, Maharashtra: School students dance on Shri Ram bhajans ahead of the Shri Ram Janmabhoomi Temple Pran Pratishtha ceremony. pic.twitter.com/nMmAX718fl
— ANI (@ANI) January 20, 2024
ಈ ವಿಡಿಯೋ ನೋಡಿದ ಬಳಕೆದಾರನೊಬ್ಬ, “ಜೈ ಹೋ ಚಾರೋ ತರಫ್ ಉತ್ಸವ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ದಿನದ ಅತ್ಯುತ್ತಮ ವಿಡಿಯೋ, ದೇಶ್ ಬದಲ್ ರಾ ಹೈ” ಎಂದಿದ್ದಾರೆ. ಇನ್ನೊಬ್ಬರು, “ಶಿಕ್ಷಕರು ವಿದ್ಯಾರ್ಥಿಗಳಿಗಿಂತ ಹೆಚ್ಚು ಆನಂದಿಸುತ್ತಿದ್ದಾರೆಂದು ತೋರುತ್ತದೆ. ಶಿಕ್ಷಕಿಯ ಮುಖದಲ್ಲಿನ ಸಂತೋಷವು ಅತಿವಾಸ್ತವಿಕವಾಗಿದೆ! ಅದ್ಭುತವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ