AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಸೋಂಕಿತರನ್ನು ಹುರಿದುಂಬಿಸಲು ವೈದ್ಯರ ನೃತ್ಯ; ‘ಫಲಕ್​ ತಕ್​ ಚಲ್​’ ಹಾಡಿಗೆ ಸಕತ್ ಸ್ಟೆಪ್​

ಅಸ್ಸಾಂ ಕ್ಯಾಚರ್​ ಜಿಲ್ಲೆಯ ಸಿಲ್ಚಾರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ.ಅರೂಪ್​ ಸೇನಾಪತಿ, ನಟ ಅಕ್ಷಯ್​ ಕುಮಾರ್​ ಚಿತ್ರದ ಫಲಕ್​ ತಕ್​ ಚಲ್​ ಹಾಡಿಗೆ ನೃತ್ಯ ಮಾಡಿದ್ದಾರೆ.

ಕೊವಿಡ್​ ಸೋಂಕಿತರನ್ನು ಹುರಿದುಂಬಿಸಲು ವೈದ್ಯರ ನೃತ್ಯ; ‘ಫಲಕ್​ ತಕ್​ ಚಲ್​’ ಹಾಡಿಗೆ ಸಕತ್ ಸ್ಟೆಪ್​
ಕೊವಿಡ್​ ಸೋಂಕಿತರನ್ನು ಹುರಿದುಂಬಿಸಲು ವೈದ್ಯರ ನೃತ್ಯ
shruti hegde
|

Updated on: May 26, 2021 | 5:02 PM

Share

ಕೊವಿಡ್​ ಸೋಂಕಿನಿಂದ ಚಿಂತೆಗೀಡಾದ ಸೋಂಕಿತರಿಗೆ ಖುಷಿನೀಡಲು ವೈದ್ಯರು ಅದೆಷ್ಟೋ ಪ್ರಯತ್ನದಲ್ಲಿ ತೊಡಗಿದ್ದಾರೆ. ಸೋಂಕಿತರು ಮಾನಸಿಕವಾಗಿ ಸದೃಢರಾದರೆ ಮುಕ್ಕಾಲು ಭಾಗ ರೋಗದಿಂದ ಗುಣಮುಖರಾದಂತೆ. ಹಾಗಾಗಿ ಆತ್ಮಸ್ಥೈರ್ಯ ತುಂಬಲು ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಅಸ್ಸಾಂನ ಸಿಲ್ಚಾರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿಗಳನ್ನು ಹುರಿದುಂಬಿಸಲು ವೈದ್ಯರು ಸಕತ್​ ಸ್ಟೆಪ್​ ಹಾಕಿದ್ದಾರೆ.

2008ರಲ್ಲಿ ಬಿಡುಗಡೆಗೊಂಡ ನಟ ಅಕ್ಷಯ್​ ಕುಮಾರ್ ಚಿತ್ರದ ಫಲಕ್​ ತಕ್​ ಚಲ್​ ಹಾಡಿಗೆ ನೈತ್ಯ ಮಾಡುರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೊರೊನಾ ಆರ್ಭಟ ಶುರುವಾಗುತ್ತಿದ್ದಂತೆಯೇ ಬಿಡುವಿಲ್ಲದೇ ದಿನದ 24 ಗಂಟೆಯೂ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಇವರ ಜೊತೆ ದಾದಿಯರೂ ಕೂಡಾ ವೈದ್ಯರಿಗೆ ಸಹಾಯಕರಾಗಿ ರೋಗಿಗಳ ಹಿತ ಬಯಸುವಲ್ಲಿ ನೆರವಾಗಿದ್ದಾರೆ. ಇದೀಗ ರೋಗಿಗಳ ಚಿಂತೆ ಮತ್ತು ನೋವನ್ನು ಮರೆಸಲು ನೃತ್ಯ ಮಾಡಿ ಖುಷಿಪಡಿಸುವ ಪ್ರಯತ್ನದಲ್ಲಿ ವೈದ್ಯರು ತೊಡಗಿಕೊಂಡಿದ್ದಾರೆ.

ಅಸ್ಸಾಂ ಕ್ಯಾಚರ್​ ಜಿಲ್ಲೆಯ ಸಿಲ್ಚಾರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ.ಅರೂಪ್​ ಸೇನಾಪತಿ, ನಟ ಅಕ್ಷಯ್​ ಕುಮಾರ್​ ಚಿತ್ರದ ಫಲಕ್​ ತಕ್​ ಚಲ್​ ಹಾಡಿಗೆ ನೃತ್ಯ ಮಾಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ ಆಸ್ಪತ್ರೆಯಲ್ಲಿ ಲವಲವಿಕೆಯಿಂದ ಸಕತ್​ ಸ್ಟೆಪ್​ ಹಾಕಿರುವುದು ಕಂಡು ಬರುತ್ತದೆ.

ಈ ಹಿಂದೆ ಇದೇ ರೀತಿ ವೈದ್ಯರ ನೃತ್ಯ ಮಾಡಿದ ವಿಡಿಯೋ ವೈರಲ್​ ಆಗಿತ್ತು. ಆಸ್ಪತ್ರೆಯಲ್ಲಿ 24ಗಂಟೆ ಕೆಲಸ ನಿರ್ವಹಿಸುತ್ತಿರುವ ವೈದ್ಯರು ತಮ್ಮ ಮಾನಸಿಕ ಒತ್ತಡದಿಂದ ಹೊರಬರುಲು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇತ್ತೀಚೆಗೆ ಬಿಡುಗಡೆಗೊಂಡ ಸಲ್ಮಾನ್​ಖಾನ್​ ಚಿತ್ರವಾದ ರಾಧೆಯ ‘ಸೀಟಿ ಮಾರ್​’ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದರು. ವಿವಿಧ ಸ್ಟೆಪ್​ಗಳ ಮೂಲಕ ರಂಜಿಸಿರುವ ವೈದ್ಯರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಯಲ್​ ಹಿರೋ ಎಂದು ಕಾಮೆಂಟ್​ ಮಾಡುವ ಮೂಲಕ ಶ್ಲಾಘಿಸಿದ್ದರು..

View this post on Instagram

A post shared by Team Disha (@teamdishap)

ಇದನ್ನೂ ಓದಿ:

Viral video: ಜನ-ಮನಗೆದ್ದ ರಾಧೆ ಚಿತ್ರದ ಹಾಡಿಗೆ ನೃತ್ಯ ಮಾಡಿದ ವೈದ್ಯರು; ‘ರಿಯಲ್​ ಹಿರೋ’ ಎಂದು ಶ್ಲಾಘಿಸಿದ ನೆಟ್ಟಿಗರು