ಈ ಪ್ರಕೃತಿ ಅದೊಷ್ಟೋ ಅದ್ಭುತಗಳ ತಾಣ. ವಿಜ್ಞಾನಕ್ಕೆ ಸವಾಲೊಡ್ಡುವ ಹಲವು ವಿಸ್ಮಯಗಳನ್ನು ಜಗತ್ತಿಗೆ ಅನಾವರಣಗೊಳಿಸುವ ಮೂಲಕ ಪ್ರಕೃತಿ ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಇಂತಹ ಹಲವಾರು ವಿಸ್ಮಯ ಸಂಗತಿಗಳ ಸುದ್ದಿಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದೇ ವಿಸ್ಮಯ ಸಂಗತಿಯ ಕುರಿತ ವಿಡಿಯೋವೊಂದು ವೈರಲ್ ಆಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಿ ಹಳ್ಳ, ಕೊಳ, ನದಿಯನ್ನು ಸೇರುತ್ತವೆ. ಆದ್ರೆ ಈ ಸ್ಥಳದಲ್ಲಿ ಮಾತ್ರ ಸುಮಾರು 150 ಎಕರೆ ಪ್ರದೇಶಗಳ ಮಳೆ ನೀರು ಹರಿದು ಬಂದು ಬಾವಿಯೊಂದಕ್ಕೆ ಸೇರುತ್ತದೆಯಂತೆ.
ಈ ವಿಶೇಷ ಸ್ಥಳ ಇರುವಂತಹದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಅಜ್ಜಾವರ ಗ್ರಾಮದ ಮೇನಾಳ ಎಂಬ ಊರಿನಲ್ಲಿ. ಇಲ್ಲಿ ಸುಮಾರು 150 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶಗಳಿಂದ ಹರಿದು ಬರುವಂತಹ ಮಳೆ ನೀರು ಸೇರುವ ಏಕೈಕ ಬಾವಿಯಿದೆ. ಮೇನಾಳದ ಆಸುಪಾಸಿನಲ್ಲಿರುವ ಕಾಡಿನಲ್ಲಿ ಈ ಅದ್ಭುತ ತಾಣವಿದ್ದು, ಈ ಭಾಗದಲ್ಲಿನ ಸುಮಾರು 150 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶಗಳಿಂದ ಮಳೆಗಾಲದಲ್ಲಿ ಹರಿದು ಬರುವ ಮಳೆ ನೀರು ಇಲ್ಲಿನ ಬಾವಿಯೊಂದರಲ್ಲಿ ಸಂಧಿಸುತ್ತದೆ. ನಿಜಕ್ಕೂ ಇದು ಪ್ರಕೃತಿಯ ಅದ್ಭುತಗಳಲ್ಲಿ ಒಂದು ಎಂದು ಹೇಳಿದ್ರೂ ತಪ್ಪಾಗಲಾರದು.
ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿಯನ್ನು ವಿ.ಜೆ. ವಿಖ್ಯಾತ್ (vj_vikhyath_official) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರೆ. ಈ ವಿಡಿಯೋದಲ್ಲಿ ದಟ್ಟ ಕಾಡಿನೊಳಗೆ ಸುಮಾರು 150 ಎಕರೆ ಪ್ರದೇಶಗಳಿಂದ ಹರಿದು ಬರುವ ಮಳೆ ನೀರು ಸೇರುವ ವಿಶೇಷ ಬಾವಿಯೊಂದನ್ನು ಕಾಣಬಹುದು. ಈ ಅದ್ಭುತ ತಾಣದ ಹೆಚ್ಚಿನ ಮಾಹಿತಿಯನ್ನು ವಿಖ್ಯಾತ್ ಯೂಟ್ಯೂಬ್ ಚಾನೆಲ್ ಅಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಣೆಯಲ್ಲಿ ಕುಂಕುಮ, ಕಣ್ಣಿಗೆ ಕೂಲಿಂಗ್ ಗ್ಲಾಸ್, AI ಫ್ಯಾಶನ್ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿಜಕ್ಕೂ ಈ ಜಾಗ ತುಂಬಾನೇ ಅದ್ಭುತವಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ