ಇನ್ನೇನು ಕ್ರಿಸ್ಮಸ್ ಹಬ್ಬ ಹತ್ತಿರ ಬಂತು. ಕೆಲವರು ಹಬ್ಬಕ್ಕೆ ಶಾಪಿಂಗ್ ಅಂತೆಲ್ಲಾ ಬ್ಯುಸಿಯಾಗಿದ್ರೆ ಇನ್ನೂ ಕೆಲವರು ಫ್ರೆಂಡ್ಸ್, ಫ್ಯಾಮಿಲಿ, ಕೊಲಿಗ್ಸ್ ಜೊತೆ ಪಾರ್ಟಿ, ಟ್ರಿಪ್ ಅಂತ ಎಂಜಾಯ್ ಮಾಡ್ತಾರೆ. ಅದೇ ರೀತಿ ಇಲ್ಲೊಬ್ರು ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ಕೂಡಾ ತನ್ನ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ದು, ಸಮುದ್ರದಲ್ಲಿ ದೋಣಿ ವಿಹಾರ ಮಾಡುವ ಸಂದರ್ಭದಲ್ಲಿ ಆಕೆ ತನ್ನ ಸ್ನೇಹಿತರಿಗೆ ಎದೆ ಹಾಲನ್ನು ಕುಡಿಯಲು ಆಫರ್ ಮಾಡಿದ್ದಾರೆ. ಹೌದು ಬ್ರೆಸ್ಟ್ ಮಿಲ್ಕ್ ಪಂಪಿಂಗ್‌ನಲ್ಲಿ ಪಂಪ್ ಮಾಡಿದ ಎದೆ ಹಾಲನ್ನು ಸ್ನೇಹಿತರಿಗೆ ಕುಡಿಯಲು ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ಮತ್ತು ಮೂರು ಮಕ್ಕಳ ತಾಯಿ ಸಾರಾ (sarah) ಕ್ರಿಸ್‌ಮಸ್ ಪಾರ್ಟಿಯಲ್ಲಿ ತನ್ನ ಸ್ನೇಹಿತರಿಗೆ ಕುಡಿಯಲು ಎದೆಹಾಲನ್ನು ನೀಡಿದ್ದಾರೆ. ಪಂಪ್ ಮಾಡಿದ ಎದೆ ಹಾಲನ್ನು ಫ್ರೆಂಡ್ಸ್‌ಗೆ ಕುಡಿಯಲು ಕೊಟ್ಟಿದ್ದು, ಹಾಲು ಕುಡಿದ ಸ್ನೇಹಿತರು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ. ಈ ವಿಡಿಯೋವನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಾರಾ ಪಂಪ್ ಮಾಡಿದ ಎದೆಹಾಲನ್ನು ಸ್ನೇಹಿತರಿಗೆ ಕುಡಿಯಲು ಆಫರ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಇವರ ಇಬ್ಬರು ಗೆಳತಿಯರು ಎದೆಹಾಲನ್ನು ಕುಡಿದಿದ್ದು, ಹಾಲು ಕುಡಿದ ಆ ಇಬ್ಬರೂ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ..
ಇದನ್ನೂ ಓದಿ: ರೆಡ್ ಸಿಗ್ನಲ್ ಬಿದ್ದಿದ್ದೇ ತಡ… ರಸ್ತೆಗಿಳಿದು ಜಬರ್ದಸ್ತ್ ಡ್ಯಾನ್ಸ್ ಮಾಡಿದ ಬೈಕರ್ಸ್; ವೈರಲ್ ಆಯ್ತು ವಿಡಿಯೋ
ಏಳು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸ್ನೇಹಿತರ ರಿಯಾಕ್ಷನ್ ಅಂತೂ ತುಂಬಾ ಫನ್ನಿಯಾಗಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದ್ದರೆ ಇಂತಹ ಸ್ನೇಹಿತರಿರಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ