
ಈಗಿನ ಕಾಲದಲ್ಲಿ ಯಾರಿಗಾದ್ರೂ ಕಷ್ಟ ಎಂದು ತಿಳಿದರೆ ಅವರ ಸಹವಾಸವೇ ಬೇಡ ಎಂದು ಮಾರುದ್ಧ ದೂರ ಓಡುವವರೇ ಹೆಚ್ಚು. ಇದೆಲ್ಲದರ ನಡುವೆ ಸಂಕಷ್ಟದಲ್ಲಿರುವವರ ಪಾಲಿಗೆ ಮಿಡಿಯುವ ಪರಿಶುದ್ಧ ಮನಸ್ಸುಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಆಸ್ಟ್ರೇಲಿಯಾದ ವ್ಯಕ್ತಿಯೂ (Australian) ಭಾರತದ ಪ್ರವಾಸದ ವೇಳೆ ತನ್ನ ಒಳ್ಳೆಯ ಕೆಲಸದಿಂದಲೇ ಸುದ್ದಿಯಾಗಿದ್ದಾನೆ. ಡ್ರೈನೇಜ್ ಹೋಲ್‌ಗೆ ಬಿದ್ದಿದ್ದ ಹಸುವನ್ನು ಮೇಲೆತ್ತಿ, ಮೂಕ ಪ್ರಾಣಿಯನ್ನು ರಕ್ಷಿಸಿದ್ದಾನೆ. ಡಂಕನ್ ಮೆಕ್ನಾಟ್ (duncan.mcnaught) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಳ್ಳುತ್ತಿದ್ದಂತೆ ಬಳಕೆದಾರರು ಈತನ ಒಳ್ಳೆಯ ಕೆಲಸವನ್ನು ಹಾಡಿ ಹೊಗಳಿದ್ದಾರೆ.
ಡಂಕನ್ ಮೆಕ್ನಾಟ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಪವಿತ್ರ ಹಸುವನ್ನು ರಕ್ಷಿಸಲಾಗಿದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ಆಸ್ಟ್ರೇಲಿಯಾ ವ್ಯಕ್ತಿಯೂ ಭಾರತದ ಪ್ರವಾಸದ ವೇಳೆ ಚರಂಡಿಗೆ ಬಿದ್ದ ಹಸುವನ್ನು ನೋಡಿದ್ದಾನೆ. ಈ ವೇಳೆಯಲ್ಲಿ ಡ್ರೈನೇಜ್ ಗೆ ಬಿದ್ದಿದ್ದ ಹಸುವನ್ನು ಡಂಕನ್ ಒಬ್ಬನೇ ರಕ್ಷಿಸಲು ಮುಂದಾಗಿದ್ದಾನೆ. ಆದರೆ ಚರಂಡಿಯಿಂದ ಹಸುವನ್ನು ಮೇಲೆತ್ತೋದು ತುಂಬಾ ಕಷ್ಟವಾಗಿದೆ. ಈ ವೇಳೆಯಲ್ಲಿ ವ್ಯಕ್ತಿಯೊಬ್ಬನ ಸಹಾಯ ಪಡೆದುಕೊಂಡು ಹಸುವನ್ನು ಕಾಪಾಡಿರುವುದನ್ನು ನೋಡಬಹುದು. ಆದರೆ ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಡಂಕನ್ ಉಲ್ಲೇಖಿಸಿಲ್ಲ.
ಇದನ್ನೂ ಓದಿ:Video: ಭಾರತೀಯನನ್ನು ಮದ್ವೆಯಾದ ಬಳಿಕ ನನ್ನ ಜೀವನವೇ ಬದಲಾಗಿ ಹೋಯ್ತು ಎಂದ ವಿದೇಶಿ ಮಹಿಳೆ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಇಬ್ಬರಿಗೂ ದೇವರು ಒಳ್ಳೇದು ಮಾಡಲಿ, ಇದು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನಿಮ್ಮ ಮೇಲಿನ ಗೌರವ ಹೆಚ್ಚಾಯ್ತು, ನಿಜಕ್ಕೂ ನಿಮ್ಮದು ಪರಿಶುದ್ಧ ಮನಸ್ಸು ಎಂದಿದ್ದಾರೆ. ಮತ್ತೊಬ್ಬರು ನೀವು ನಿಜಕ್ಕೂ ಕೆಲವು ಕ್ಷಣಗಳ ಕಾಲ ದೇವರಾಗಿ ಕಂಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Tue, 30 September 25