Viral News: ಪಿತ್ರಾರ್ಜಿತವಾಗಿ ಬಂದ 224 ಕೋಟಿ ರೂ. ಸಂಪತ್ತು ದಾನ ಮಾಡಿದ ಯುವತಿ

ಮರ್ಲಿನ್ ಎಂಗಲ್‌ಹಾರ್ನ್ ಆಸ್ಟ್ರಿಯಾದ ಶ್ರೀಮಂತ ಕೈಗಾರಿಕಾ ಕುಟುಂಬದಲ್ಲಿ ಜನಿಸಿದ್ದು, ಸುಮಾರು 224 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ. ಐಷಾರಾಮಿ ಜೀವನ ನಡೆಸಬೇಕಿದ್ದ ಈಕೆ ದೇಶದ ಆರ್ಥಿಕ ಅಸಮಾನತೆಯನ್ನು ಗಮನಿಸಿ ತನ್ನ ಸಂಪತ್ತನ್ನು ದೇಶಕ್ಕಾಗಿ ದಾನ ಮಾಡಲು ಮುಂದಾಗಿದ್ದಾಳೆ.

Viral News: ಪಿತ್ರಾರ್ಜಿತವಾಗಿ  ಬಂದ  224 ಕೋಟಿ ರೂ. ಸಂಪತ್ತು ದಾನ ಮಾಡಿದ ಯುವತಿ
Edited By:

Updated on: Jun 26, 2024 | 4:14 PM

ದೇಶದಲ್ಲಿನ ಆರ್ಥಿಕ ಅಸಮಾನತೆಯನ್ನು ಗಮನಿಸಿದ ಯುವತಿಯೊಬ್ಬಳು ತನ್ನ ಕುಟುಂಬದಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮರು ಹಂಚಿಕೆ ಮಾಡಲು ಮುಂದಾಗಿದ್ದಾಳೆ. ಅವುಗಳ ಮೌಲ್ಯ 224 ಕೋಟಿ ರೂಪಾಯಿ ಎಂಬುದು ಗಮನಾರ್ಹ. ಸದ್ಯ ಸಾವಿರಾರೂ ಕೋಟಿ ರೂಪಾಯಿ ದಾನ ಮಾಡಲು ಮುಂದಾದ ಯುವತಿ ಮರ್ಲಿನ್ ಎಂಗಲ್‌ಹಾರ್ನ್(32) ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಮರ್ಲಿನ್ ಎಂಗಲ್‌ಹಾರ್ನ್ ಆಸ್ಟ್ರಿಯಾದ ಶ್ರೀಮಂತ ಕೈಗಾರಿಕಾ ಕುಟುಂಬದಲ್ಲಿ ಜನಿಸಿದ್ದು, ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾಳೆ. ಆದರೆ ದೇಶದ ಆರ್ಥಿಕ ಅಸಮಾನತೆಯನ್ನು ಗಮನಿಸಿದ ಈಕೆ ತನ್ನ ಸಂಪತ್ತನ್ನು ದಾನ ಮಾಡಲು ಮುಂದಾಗಿದ್ದಾಳೆ.

ಈಕೆಯ ಈ ನಿರ್ಧಾರಕ್ಕೆ ವಿವಿಧ ಕ್ಷೇತ್ರಗಳ ಸ್ಥಳೀಯ ತಜ್ಞರ ತಂಡ ಸಮಾಲೋಚನೆ ನಡೆಸಿದೆ. ಹವಾಮಾನ ಬದಲಾವಣೆ, ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ, ಮಹಿಳಾ ಆಶ್ರಯಗಳು, ನಿರಾಶ್ರಿತರು ನಡೆಸುತ್ತಿರುವ ಪತ್ರಿಕೆಗಳು, ಅಗ್ನಿಶಾಮಕ ಇಲಾಖೆಗಳು ಮತ್ತು ಪ್ರಜಾಪ್ರಭುತ್ವ ಪರ ಸಂಘಟನೆಗಳು ಸೇರಿದಂತೆ ದೇಶದ ಸುಮಾರು 77 ಸಂಸ್ಥೆಗಳಿಗೆ ಆಕೆಯ ಸಂಪತ್ತನ್ನು ಹಂಚಲಾಗುವುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral News: ನರ್ಸ್​​ ಜೊತೆಗೆ ಲೈಂಗಿಕ ಸಂಭೋಗ ಮಾಡುತ್ತಿರುವಾಗಲೇ ಸಾವನ್ನಪ್ಪಿದ ರೋಗಿ

ಈ ಆರ್ಥಿಕ ನೆರವು ಒಂದೇ ಬಾರಿಗೆ ಬದಲಾಗಿ ದೀರ್ಘಾವಧಿಯಲ್ಲಿ ನೀಡಲಾಗುವುದು.ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ಸಂಪತ್ತನ್ನು ಮರುಹಂಚಿಕೆ ಮಾಡುವ ಮೂಲಕ ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Wed, 26 June 24