ಈಗೆಲ್ಲಾ ಕೂತಲ್ಲೇ ಫುಡ್ ಆರ್ಡರ್ ಮಾಡಿ ತಿನ್ನುವ ಕಾಲ. ತಿನ್ನುವ ಆಹಾರದಿಂದ ಹಿಡಿದು ಮನೆಯ ದಿನಸಿ ಸಾಮಾನು, ತರಕಾರಿ ಎಲ್ಲವನ್ನು ಆನ್ಲೈನ್ನಲ್ಲೇ ಆರ್ಡರ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕಾಗಿ ಸಾಕಷ್ಟು ಆ್ಯಪ್ಗಳು ಕೂಡ ಇದೆ. ಸ್ವಿಗ್ಗಿ (Swiggy) , ಜೊಮ್ಯಾಟೊ (Zomato) ಸೇರಿದಂತೆ ಅನೇಕ ಮೊಬೈಲ್ ಫುಡ್ ಆ್ಯಪ್ಗಳನ್ನು ಕಾಣಬಹುದು. ಆದರೆ ಇದೀಗ ಜೊಮ್ಯಾಟೊ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಫುಡ್ ಆ್ಯಪ್ ಜೊಮ್ಯಾಟೊ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ “ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ. ” ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ.
pls avoid ordering during peak afternoon unless absolutely necessary 🙏
— zomato (@zomato) June 2, 2024
ಇದನ್ನೂ ಓದಿ: ಡಿಎನ್‌ಎ ಪರೀಕ್ಷೆಯಿಂದ ಮುರಿದುಬಿತ್ತು 18 ವರ್ಷದ ದಾಂಪತ್ಯ ಜೀವನ
ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆ, ಕೆಲವೊಮ್ಮೆ ಗಾಳಿ ಮಳೆಗೆ ಆರ್ಡರ್ ಹೆಚ್ಚಾದಂತೆ ಡೆಲಿವರಿ ಬಾಯ್ಸ್ಗಳ ಕಾಳಜಿಯ ಮೇರೆಗೆ ಜೊಮ್ಯಾಟೊ ಭಾನುವಾರ ತನ್ನ ಗ್ರಾಹಕರನ್ನು ಈ ರೀತಿ ಒತ್ತಾಯಿಸಿದೆ. ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ” ನಾನು ನಿಮ್ಮ ಕಾಳಜಿಯನ್ನು ಶ್ಲಾಘಿಸುತ್ತೇನೆ, ಆದರೆ ಊಟದ ಸಮಯವನ್ನು ಹಸಿದುಕೊಂಡು ಮುಂದೂಡಲು ಸಾಧ್ಯವೇ?” ಎಂದು ಸಾಕಷ್ಟು ನೆಟ್ಟಿಗರು ಪೋಸ್ಟ್ಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ