Video : ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ?

ಪೊಲೀಸ್ ಕೆಲಸವೇ ಹಾಗೆ, ಇಲ್ಲಿ ವೈಯುಕ್ತಿಕ ಬದುಕು, ಕುಟುಂಬಕ್ಕೆ ಸಮಯ ಕೊಡಲು ಆಗುವುದಿಲ್ಲ. ಎಷ್ಟೇ ಹೊತ್ತಿಗೆ ಕರೆ ಬಂದರೂ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಹೀಗಾಗಿ ಬಿಡುವಿಲ್ಲದ ಕರ್ತವ್ಯ ನಿರ್ವಹಿಸಿ, ತಮ್ಮ ಮೂವತ್ತು ವರ್ಷಕ್ಕೂ ಹೆಚ್ಚು ಪೊಲೀಸ್ ಸರ್ವಿಸ್‌ನಲ್ಲಿ ಒಂದೇ ಒಂದು ದಿನ ರಜೆ ಹಾಕದೇ ಕರ್ತವ್ಯದಲ್ಲಿ ತೊಡಗಿಸಿಕೊಂಡವರು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್. ಈ ದಕ್ಷ ಪೊಲೀಸ್ ಅಧಿಕಾರಿಗೆ ತಮ್ಮ ಕೆಲಸದ ಬಗ್ಗೆ ಪ್ರೀತಿ ಎಷ್ಟಿತ್ತು ಹಾಗೂ ಇವರ ಕರ್ತವ್ಯ ನಿಷ್ಠೆಯ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

Video : ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ?
ದಕ್ಷ ಪೊಲೀಸ್ ಅಧಿಕಾರಿ ಬಿ . ದಯಾನಂದ್
Image Credit source: Instagram

Updated on: Jun 08, 2025 | 4:28 PM

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ (chinnaswami stadium) ದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್ (B. Dayanand) ಕೂಡ ಸೇರಿದ್ದಾರೆ. ಆದರೆ ಇವರೆಂತಹ ದಕ್ಷ ಅಧಿಕಾರಿ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ. ತಮ್ಮ ಪೊಲೀಸ್ ಸರ್ವಿಸ್‌ನಲ್ಲಿ ಒಂದೇ ಒಂದು ದಿನ ರಜೆ ಹಾಕದೇ ಕರ್ತವ್ಯ ನಿರ್ವಹಿಸಿದ್ದಾರೆ. ಹೌದು ನಟ ಹಾಗೂ ಫಿಟ್‌ನೆಸ್‌ ಸಲಹೆಗಾರ ಆಗಿರುವ ರಘು ರಾಮಪ್ಪ (raghu ramappa) ರವರು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್ ಅವರ ಜೊತೆಗೆ ಮಾತನಾಡಿದ್ದು, ಈ ವಿಡಿಯೋವನ್ನು ನೋಡಿದ್ರೆ ತಮ್ಮ ಕೆಲಸವನ್ನು ಎಷ್ಟು ಪ್ರಾಮಾಣಿಕರಾಗಿ ಮಾಡುತ್ತಿದ್ದರು ಎನ್ನುವುದನ್ನು ಹೇಳುತ್ತದೆ.

raghu ramappa ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ರಘು ರಾಮಪ್ಪ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್ ಅವರನ್ನು ಮಾತನಾಡಿಸಿದ್ದು, ಈ ವೇಳೆಯಲ್ಲಿ ತಮ್ಮ ಇಷ್ಟು ವರ್ಷದ ಸರ್ವಿಸ್‌ನಲ್ಲಿ ಒಂದೇ ಒಂದು ರಜೆ ಹಾಕದೇ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ಯಾವುದೇ ಫ್ಯಾಮಿಲಿ ಫಂಕ್ಷನ್‌ಗೆ  ಹೋಗಿಲ್ಲ, ಈಗ ಅವರು ಕರೆಯೋದನ್ನು ಬಿಟ್ಟಿದ್ದಾರೆ ಎಂದು ಬಿ ದಯಾನಂದ್ ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ
ಸಮುದ್ರದ ಅಡಿಯಿಂದ ಶ್ರೀರಾಮನ ಬಿಲ್ಲನ್ನು ತೆಗೆಯಲಾಗಿದೆಯೇ?
ಕೇವಲ 180 ಮೀಟರ್‌ ದೂರ ಕ್ರಮಿಸಲು ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ ಯುವತಿ
ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸಿದ ಆನೆ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ

ಇದನ್ನೂ ಓದಿ :Video : ಇವರೇ ನೋಡಿ ಆದರ್ಶ ದಂಪತಿಗಳು : ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ

ತಮ್ಮ ಎಂಗೇಜ್ಮೆಂಟ್‌ನ್ನು ಒಂದು ದಿನದ ಮಟ್ಟಿಗೆ ಮುಂದೂಡಬೇಕಾಗಿತ್ತು. ಆ ಸಮಯದಲ್ಲಿ ಮಂಗಳೂರಿನಲ್ಲಿ ಅಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಹೀಗಾಗಿ ಬೆಂಗಳೂರಿಗೂ ಬರುವುದಕ್ಕೂ ಆಗ್ಲಿಲ್ಲ. ಅಷ್ಟೇ ಅಲ್ಲದೇ, ತನ್ನ ಇಬ್ಬರೂ ಮಕ್ಕಳ ನಾಮಕರಣಕ್ಕೂ ಹೋಗಿಲ್ಲ ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆಲ್ಲಾ ಹೋಗದೇ ಇದ್ರೂ ನಿಮ್ಮ ಜೊತೆಗೆ ಬೈಕ್ ರೈಡ್‌ಗೆ ಬಂದಿದ್ದೇನೆ ಎಂದು ತಮಾಷೆಯಾಗಿಯೇ ಹೇಳಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ನಟ ರಘು ರಾಮಪ್ಪ ಈ ವಿಚಾರಕ್ಕೆ ನಿಮಗೆ ತುಂಬಾ ಧನ್ಯವಾದಗಳು ಎಂದು ಹೇಳಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಇವರ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಳಕೆದಾರರೊಬ್ಬರು ರಾಜಕಾರಣಿಗಳ ಮಧ್ಯೆ ಒಬ್ಬ ಜನರಿಗೋಸ್ಕರ ಜೀವನವನ್ನೇ ಮುಡಿಪು ಮಾಡಿದ ಮನುಷ್ಯ ಎಂದಿದ್ದಾರೆ. ಇನೊಬ್ಬರು, ಇಂತಹ ದಕ್ಷ ಅಧಿಕಾರಿಗಳು ಕಾಣಸಿಗುವುದೇ ಅಪರೂಪ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ನಿಜಕ್ಕೂ ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡೆವು ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Sun, 8 June 25