Viral News: ಜೂಟಾಟ ಆಡುತ್ತಿರುವ ನಾಯಿ- ಕರುವಿನ ಬಾಂಧವ್ಯ ನೋಡಿದರೆ ನಗು ಮೂಡುವುದು ಗ್ಯಾರಂಟಿ

| Updated By: ಸುಷ್ಮಾ ಚಕ್ರೆ

Updated on: Mar 17, 2022 | 7:53 PM

ಹಸಿರು ಬಣ್ಣದ ಹುಲ್ಲುಹಾಸಿನ ಅಂಗಳದಲ್ಲಿ ನಾಯಿ ಮತ್ತು ಕರು ಆಟವಾಡುತ್ತಾ ಇರುತ್ತವೆ. ನಾಯಿಯು ತನ್ನ ಬಾಯಿಯಲ್ಲಿ ಚೆಂಡನ್ನು ಕಚ್ಚಿಕೊಂಡು ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Viral News: ಜೂಟಾಟ ಆಡುತ್ತಿರುವ ನಾಯಿ- ಕರುವಿನ ಬಾಂಧವ್ಯ ನೋಡಿದರೆ ನಗು ಮೂಡುವುದು ಗ್ಯಾರಂಟಿ
ನಾಯಿ- ಕರುವಿನ ವಿಡಿಯೋ
Follow us on

ಕೆಲವು ಪ್ರಾಣಿಗಳ ಜಾತಿ ಬೇರೆ ಬೇರೆಯಾದರೂ ಒಟ್ಟಿಗೇ ಆಡಿ ಬೆಳೆದಿದ್ದರಿಂದಲೋ, ಅವರ ನಡುವಿನ ಆಪ್ತತೆಯಿಂದಲೋ ಅವರು ಫ್ರೆಂಡ್ಸ್​ ಆಗಿ ಬಿಡುತ್ತವೆ. ಅದೇ ರೀತಿ ಪುಟ್ಟ ಕರು (Baby Cow) ಮತ್ತು ನಾಯಿಯೊಂದು (Dog) ಜೊತೆಯಾಗಿ ಆಟವಾಡುತ್ತಾ, ಕುಣಿದಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಕರು ಮತ್ತು ನಾಯಿ ಎರಡೂ ನೋಡಲು ಒಂದೇ ಗಾತ್ರದಲ್ಲಿದೆ. ನೋಡಲು ಕಪ್ಪು ಬಣ್ಣದಲ್ಲಿರುವ ಈ ಪ್ರಾಣಿಗಳು ಒಂದನ್ನೊಂದು ಹಿಂಬಾಲಿಸಿಕೊಂಡು ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ.

ಈ ಎರಡು ಪ್ರಾಣಿಗಳು ಆಟವಾಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಸಿರು ಬಣ್ಣದ ಹುಲ್ಲುಹಾಸಿನ ಅಂಗಳದಲ್ಲಿ ನಾಯಿ ಮತ್ತು ಕರು ಆಟವಾಡುತ್ತಾ ಇರುತ್ತವೆ. ನಾಯಿಯು ತನ್ನ ಬಾಯಿಯಲ್ಲಿ ಚೆಂಡನ್ನು ಕಚ್ಚಿಕೊಂಡು ಓಡುತ್ತಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಅಮೇರಿಕಾದಲ್ಲಿ ರೆಕಾರ್ಡ್ ಮಾಡಲಾಗಿದೆ. ನಾಯಿ ಮತ್ತು ಕರು ಜೂಟಾಟ ಆಡಿಕೊಂಡು ಓಡುತ್ತಲೇ ಇರುತ್ತವೆ. ನೀವೇನಾದರೂ ಟ್ವಿಟ್ಟರ್​, ಯೂಟ್ಯೂಬ್, ಫೇಸ್​ಬುಕ್ ಓಪನ್ ಮಾಡಿದರೆ ಈ ರೀತಿಯ ಸಾಕಷ್ಟು ವಿಡಿಯೋಗಳು ಸಿಗುತ್ತವೆ.

ಇದನ್ನೂ ಓದಿ: Viral Video: ಸತ್ತ ಗೆಳೆಯನನ್ನು ಹೂಳಲು ತಾವೇ ಬಾಯಿಯಿಂದ ಮಣ್ಣು ತೋಡಿದ ನಾಯಿಗಳು; ಕಣ್ತುಂಬುವ ವಿಡಿಯೋ ಇಲ್ಲಿದೆ

Viral Video: 7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಗೆ ಆರತಿ ಎತ್ತಿ ಸ್ವಾಗತ!; ನೀವೂ ಈ ವಿಡಿಯೋ ಕಣ್ತುಂಬಿಕೊಳ್ಳಿ