
ಕೋತಿ (monkey) ಗಳು ಚೇಷ್ಟೆ ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದು ತಿಳಿದಿರುವ ವಿಚಾರ. ಸೋಶಿಯಲ್ ಮೀಡಿಯಾದಲ್ಲಿ ಈ ಕೋತಿಯ ಚೇಷ್ಟೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಸಾಮಾನ್ಯವಾಗಿ ಕೋತಿಗಳು ಮನುಷ್ಯರ ಕೈಯಲ್ಲಿದ್ದ ತಿಂಡಿ, ಮೊಬೈಲ್ (mobile) ಇತ್ಯಾದಿ ವಸ್ತುಗಳನ್ನು ಕಿತ್ತುಕೊಂಡು ಹೋಗುವುದನ್ನು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿ ಮರಿಯೊಂದು ಮಾಡಿರುವ ಚೇಷ್ಟೆ ಕಂಡರೆ ಬಿದ್ದು ಬಿದ್ದು ನಗೋದು ಗ್ಯಾರಂಟಿ. ಕೋತಿ ಮರಿಯೊಂದು ಯುವತಿಯ ಬಟ್ಟೆ (dress) ಯೊಳಗೆ ಹೋಗಿದ್ದು, ಆ ತಕ್ಷಣವೇ ತಾಯಿ ಕೋತಿಯೂ ಮರಿ ಕೋತಿಯನ್ನು ಎಳೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
youghui086 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಯೊಬ್ಬಳು ನಿಂತಿರುವುದನ್ನು ನೋಡಬಹುದು. ಸ್ಕರ್ಟ್ ಧರಿಸಿರುವ ಯುವತಿಯ ಬಟ್ಟೆಯೊಳಗೆ ಮರಿ ಕೋತಿಯೂ ಹೊಕ್ಕುತ್ತಿರುವುದನ್ನು ಕಾಣಬಹುದು. ಆ ಸಮಯದಲ್ಲಿ ತಾಯಿ ಕೋತಿಯೂ ಮರಿ ಕೋತಿಯನ್ನು ಎಳೆದು ಯುವತಿಯ ಬಟ್ಟೆಯನ್ನು ಸರಿಪಡಿಸಿದ್ದು ಯುವತಿಯ ಮಾನ ಕಾಪಾಡುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ