Viral Video : ‘ಅಮ್ಮಾ ನಂಗೆ ಈ ಸ್ಮಾರ್ಟ್​ಫೋನ್ ಬೇಕೇಬೇಕು’

| Updated By: ಶ್ರೀದೇವಿ ಕಳಸದ

Updated on: Aug 11, 2022 | 4:39 PM

Monkey : ಹಟತೊಟ್ಟು ಕುಳಿತಿರುವ ಈ ಕೋತಿಮರಿಗೆ, ಅಮ್ಮಕೋತಿ ಸ್ಮಾರ್ಟ್​ಫೋನ್ ಕೊಡಿಸುವಲ್ಲಿ ಸಫಲವಾಗುತ್ತಾ? ನೋಡಿ ವಿಡಿಯೋ...

Viral Video : ‘ಅಮ್ಮಾ ನಂಗೆ ಈ ಸ್ಮಾರ್ಟ್​ಫೋನ್ ಬೇಕೇಬೇಕು’
ಬೇಡ ಮಗ ಇದೆಲ್ಲ ಒಳ್ಳೆಯದಲ್ಲ....
Follow us on

Viral : ಸಾಕು ಬಾ ಏನು ಮಾಡ್ತೀಯಾ ಅದನ್ನು ತಗೊಂಡು. ಕಡ್ಲೆಕಾಯಿ ತಿನ್ನು ಬಾ ಇಲ್ಲಿ… ಅಂತ ಅಮ್ಮಕೋತಿ ಮಗುವನ್ನು ಎಳೆಯುತ್ತಲೇ ಇದೆ. ಆದರೆ ತನ್ನ ಫೋಟೋ ತೆಗೆಯಲು ಬಂದವರ ಸ್ಮಾರ್ಟ್​ ಫೋನ್​ ತನಗೆ ಬೇಕೆಂದು ಗಂಟುಬಿದ್ದಿದೆ ಮರಿಕೋತಿ. ಅಮ್ಮಕೋತಿ ಅದೆಷ್ಟು ಸಲ ಅದನ್ನು ಹಿಡಿದೆಳೆದರೂ ಅದು ಮತ್ತೆ ಮತ್ತೆ ಸ್ಮಾರ್ಟ್​​ಫೋನ್​ ತನಗೆ ಬೇಕೇಬೇಕೆಂದು ಹಟ ಮಾಡುತ್ತಿದೆ. ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಂಸಾಂತಾ ನಂದಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.

ವಿಡಿಯೋ ನೋಡಿ,

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಹೊಸ ಪೀಳಿಗೆ ಇದೆಲ್ಲವನ್ನೂ ತಿಳಿಯಬೇಕಾದದ್ದು ಅವಶ್ಯವೇ! ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಅನೇಕರು ಅಚ್ಚರಿ ಮತ್ತು ಖುಷಿ ವ್ಯಕ್ತಪಡಿಸುತ್ತ ಕೋತಿಯೊಂದಿಗಿನ ಒಡನಾಟದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮಕ್ಕಳಿಂದ ಈ ಚಟ ಬಿಡಿಸುವುದಕ್ಕೆ ವಿಫಲರಾದ ನಾವುಗಳು ಇನ್ನು ಈ ಕೋತಿಗಳಿಗೆ…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:36 pm, Thu, 11 August 22