Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್ನಿನಲ್ಲಿ ‘ವರ್ಕ್ ಫ್ರಂ ಪಬ್‘ ಸೌಲಭ್ಯ, ನೆಟ್ಟಿಗರ ಕಣ್ಣೀಗ ಅತ್ತಕಡೆ

Work from Pub : ಬ್ರಿಟನ್​ನ ಹಲವಾರು ಪಬ್​ಗಳು ವರ್ಕ್ ಫ್ರಂ ಪಬ್​ ಸೌಲಭ್ಯ ಕಲ್ಪಿಸುತ್ತಿದ್ದು ಗ್ರಾಹಕರನ್ನು ಭರದಿಂದ ಆಹ್ವಾನಿಸುತ್ತಿವೆ. ವೈಫೈ, ಚಾರ್ಜಿಂಗ್​ ಸ್ಪಾಟ್​, ತಿಂಡಿತಿನಿಸು ಮತ್ತು ಪಾನೀಯಗಳುಳ್ಳ ಪ್ಯಾಕೇಜ್​ಗಳ ಮೂಲಕ ಸೆಳೆಯುತ್ತಿವೆ.

ಬ್ರಿಟನ್ನಿನಲ್ಲಿ ‘ವರ್ಕ್ ಫ್ರಂ ಪಬ್‘ ಸೌಲಭ್ಯ, ನೆಟ್ಟಿಗರ ಕಣ್ಣೀಗ ಅತ್ತಕಡೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 13, 2022 | 11:00 AM

Trending : ಜಗತ್ತಿನಾದ್ಯಂತ ಕೊವಿಡ್​ ಆವರಿಸಿದಾಗ ಆರಂಭದಲ್ಲಿ ಸಾಕಷ್ಟು ಜನರಿಗೆ ವರ್ಕ್​ ಫ್ರಂ ಹೋಮ್​ ನಿಭಾಯಿಸುವುದು ಕಷ್ಟವೆನ್ನಿಸುತ್ತಿತ್ತು. ಶಾಂತವಾಗಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದ ಇಷ್ಟುವರ್ಷಗಳ ಅಭ್ಯಾಸ ಮತ್ತು ಮನಸ್ಥಿತಿಗೆ ಮನೆಯಿಂದ ಕೆಲಸ ಮಾಡುವುದೆಂದರೆ ಸಂಕಷ್ಟದಂತೆ ತೋರಿತು. ಇಂಟರ್​ನೆಟ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಮನೆಮಂದಿಯೆಲ್ಲ ವರ್ಕ್​ ಫ್ರಂ ಹೋಂನಲ್ಲಿಯೇ ತೊಡಗಿರುವುದು, ಮಕ್ಕಳು ಮರಿ ಸಂಸಾರ ಹೀಗೆ ಒಟ್ಟಾರೆ ನಾನಾ ರೀತಿಯ ಗೋಜು ಗೊಂದಲಗಳು. ಇದೆಲ್ಲ ಕಳೆದು ಜನಜೀವನ ಸಮಸ್ಥಿತಿಗೆ ಬರುತ್ತಿದ್ದಂತೆ ಅಚ್ಚರಿಯೆಂಬಂತೆ ಅನೇಕರು ವರ್ಕ್​ ಫ್ರಂ ಹೋಮ್​ ಸಂಸ್ಕೃತಿಗೆ ಹೊಂದಿಕೊಂಡುಬಿಟ್ಟರು. ಅತ್ತ ಕಂಪೆನಿಗಳು ಖರ್ಚು ವೆಚ್ಚಗಳನ್ನೆಲ್ಲ ಲೆಕ್ಕ ಹಾಕಿ ಶಾಶ್ವತವಾಗಿ ವರ್ಕ್​ ಫ್ರಂ ಹೋಂ ವ್ಯವಸ್ಥೆಯನ್ನು ಅಳವಡಿಸಿಕೊಂಡುಬಿಟ್ಟವು. ಆದರೆ ಇದೀಗ, ಈ ಹೊಂದಾಣಿಕೆಯೇ ಬ್ರಿಟನ್​ನಲ್ಲಿರುವ ಬಾರ್​ ​ವರ್ತಕರನ್ನು ಚಿಂತೆಗೀಡು ಮಾಡಿರುವುದು. ಹಾಗಾಗಿ ಬಾರ್​ಗಳು ಮತ್ತೆ ಮೊದಲಿನ ಸ್ಥಿತಿಗೆ ಬರಲು ಹೂಡಿರುವ ಉಪಾಯವೇ ವರ್ಕ್​ ಫ್ರಂ ಪಬ್.

ಬ್ರಿಟನ್​ನ ಹಲವಾರು ಪಬ್​ಗಳು ವರ್ಕ್​ ಪ್ರಂ ಪಬ್​ ಸೌಲಭ್ಯ ಕಲ್ಪಿಸುವುದಾಗಿ ಗ್ರಾಹಕರನ್ನು ಇದೀಗ ಆಹ್ವಾನಿಸುತ್ತಿವೆ. ವಿವಿಧ ರೀತಿಯ ಆಫರ್​ ಮತ್ತು ಪ್ಯಾಕೇಜ್​ ನೀಡಿ ಆಕರ್ಷಿಸುತ್ತಿವೆ. ಕೆಲಸ ಮಾಡಲು ಎಂಥ ವಾತಾವರಣ ಮತ್ತು ಸೌಲಭ್ಯಗಳು ಬೇಕು ಎನ್ನುವುದರ ಮೇಲೆ ಪ್ಯಾಕೇಜ್​ಗಳು ಲಭ್ಯವಿವೆ. ವೈಫೈ, ಚಾರ್ಜಿಂಗ್​ ಸ್ಪಾಟ್​, ತಿಂಡಿತಿನಿಸು ಮತ್ತು ಪಾನೀಯಗಳುಳ್ಳ ಪ್ಯಾಕೇಜ್​ಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಲಭ್ಯವಾಗುತ್ತಿವೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಎಲ್ಲ ರೀತಿ ವ್ಯವಸ್ಥೆಯನ್ನೂ ಬಾರ್​ಗಳು ಸಿದ್ಧವಾಗಿವೆ. ಈಗಾಗಲೇ ಕೆಲ ದೇಶಗಳಲ್ಲಿ ವರ್ಕ್​ ಫ್ರಂ ಪಬ್​ ಕಲ್ಚರ್​ ಚಾಲ್ತಿಯಲ್ಲಿದೆ.

ದಿ ಗಾರ್ಡಿಯನ್‌ನ ವರದಿಯ ಪ್ರಕಾರ, 380 ಪಬ್‌ಗಳು ಫುಲ್ಲರ್ಸ್ ಚೈನ್ ಆಫರ್​ನಲ್ಲಿ ಊಟ ಮತ್ತು ಪಾನೀಯ ಪೂರೈಸಲು ದಿನಕ್ಕೆ ರೂ. 900 ನಿಗದಿಮಾಡಿವೆ. ಬ್ರೇವರಿ ಯಂಗ್ಸ್ ಆಫರ್​ಗೆ 185 ಪಬ್‌ಗಳು ಒಪ್ಪಂದ ಮಾಡಿಕೊಂಡಿವೆ. ಒಂದು ಪಬ್​ನಿಂದ ಇನ್ನೊಂದು ಪಬ್​ಗೆ ದರದಲ್ಲಿ ವ್ಯತ್ಯಾಸವಿರುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವರ್ಕ್​ ಫ್ರಂ ಪಬ್​ ಭಾರತಕ್ಕೆ ಕಾಲಿಟ್ಟರೆ ಹೇಗಿರುತ್ತದೆ? ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:48 am, Thu, 13 October 22

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ