ಒಂದೂವರೆ ವರ್ಷದ ನಂತರ ಆ ಅಪರಿಚಿತರಿಂದ ರೂ. 201 ಅಕೌಂಟಿಗೆ ಮರಳಿದಾಗ

Crowdfunding : ತನ್ನ ತಾಯಿಯ ಚಿಕಿತ್ಸೆಗೆ ಹಣ ಬೇಕೆಂದು ಕ್ರೌಡ್​ ಫಂಡಿಂಗ್​ನ ಮೊರೆ ಹೋದರು ಅಪರಿಚಿತ ವ್ಯಕ್ತಿ. ಕಮಲ್​ ಸಿಂಗ್​ ಎನ್ನುವವರು ಸಹಾಯ ಮಾಡಿ ಮರೆತರು. ಇದೀಗ ಕಮಲ್ ಅವರ ಅಕೌಂಟಿಗೆ ಅಪರಿಚಿತರಿಂದ ಹಣ ಸಂದಾಯವಾಗಿದೆ!

ಒಂದೂವರೆ ವರ್ಷದ ನಂತರ ಆ ಅಪರಿಚಿತರಿಂದ ರೂ. 201 ಅಕೌಂಟಿಗೆ ಮರಳಿದಾಗ
Man shares LinkedIn post about money he received from stranger he helped years ago
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 13, 2022 | 1:20 PM

Trending : ಒಂದೂವರೆ ವರ್ಷದ ಹಿಂದೆ ಕ್ರೌಡ್‌ ಫಂಡಿಂಗ್ ಮೂಲಕ ತನ್ನ ತಾಯಿಯ ಚಿಕಿತ್ಸೆಗೆ ಹಣ ಸಂಗ್ರಹಿಸುತ್ತಿದ್ದ ಅಪರಿಚಿತರೊಬ್ಬರಿಗೆ ಕಮಲ್ ಸಿಂಗ್ ಎನ್ನುವ ಲಿಂಕ್​ಡಿನ್​ ಖಾತೆದಾರರು ರೂ. 201 ಕಳಿಸಿದ್ದರು ಮತ್ತು ಕಳಿಸಿ ಮರೆತೂಬಿಟ್ಟಿದ್ದರು. ಆದರೆ ಇದೀಗ, ಆ ಅಪರಿಚಿತ ವ್ಯಕ್ತಿಯಿಂದ ರೂ. 201 ಮರಳಿ ಅಕೌಂಟಿಗೆ ಹಣ ಸಂದಾಯವಾದಾಗಲೇ ಈ ಹಳೆಯ ಘಟನೆ ಕಮಲ್ ಅವರಿಗೆ ನೆನಪಾಗಿದೆ. ಇ-ಯುಗದಲ್ಲಿ ಇಂದು ಏನೆಲ್ಲಾ ಮೋಸ, ವಂಚನೆ, ಕುಕೃತ್ಯಗಳು ನಡೆಯುತ್ತಿವೆ. ಆದರೂ ಅಲ್ಲಲ್ಲಿ ನಡೆಯುವ ಇಂಥ ಘಟನೆಗಳು ಮಾನವೀಯತೆ ಜೀವಂತವಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತವೆ.

Man shares LinkedIn post about money he received from stranger he helped years ago Read full story

ಹಣ ಸಂದಾಯವಾದ ಮತ್ತು ಮರುಪಾವತಿಯಾದ ದಾಖಲೆ

ಇ-ಮೇಲ್​, ಮೆಸೇಜ್, ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿಕೆಗಳು ಬಂದರೂ ಪರೋಪಕಾರ ಗುಣವುಳ್ಳವರು ಕೂಡ ಎರಡೆರಡು ಸಲ ಆಲೋಚಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದರೆ ಕಮಲ್ ಸಿಂಗ್​ ಒಂದೂವರೆ ವರ್ಷದ ಹಿಂದೆ ಹೀಗೆಲ್ಲ ಯೋಚಿಸದೆ ಒಂದೇ ಬಾರಿಗೆ ಅಪರಿಚಿತರಿಗೆ ಸಹಾಯ ಮಾಡಿದರು. ಸಹಾಯ ಮಾಡಿದ್ದನ್ನು ಮರೆತೂಬಿಟ್ಟರು. ಆದರೆ ಕೆಲ ದಿನಗಳ ಹಿಂದೆ ರೂ. 201 ಹಣ ಸಂದಾಯವಾದ ಬಗ್ಗೆ ತಮ್ಮ ಮೊಬೈಲಿಗೆ ಮೆಸೇಜ್​ ಬಂದಾಗಲೇ ಸಹಾಯ ಮಾಡಿದ್ದು ನೆನಪಾಯಿತು. ಈ ವಿಷಯವನ್ನು ಕಮಲ್​ ಲಿಂಕ್​ಡಿನ್​ನಲ್ಲಿ ಹಂಚಿಕೊಂಡರು.

‘ಎಲ್ಲರೂ ವ್ಯಾವಹಾರಿಕ ಜಗತ್ತಿನಲ್ಲಿ ಮುಳುಗಿರುವಾಗ ಈ ವ್ಯಕ್ತಿ ಪ್ರಾಮಾಣಿಕತೆಯಿಂದ ಹಣ ಮರುಪಾವತಿಸಿದ್ದಾರೆ. ಇವರ ನಡೆ ನನ್ನನ್ನು ಅಚ್ಚರಿಗೊಳಿಸಿದೆ’ ಎಂದಿದ್ದಾರೆ ಕಮಲ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಂಥ ಆರೋಗ್ಯಕರ ಮನಸ್ಥಿತಿ ಇದ್ದಲ್ಲಿ ಪರಸ್ಪರರು ಹೆಗಲಿಗೆ ಹೆಗಲಾಗಿ ಜೀವನವನ್ನು ಖುಷಿಯಿಂದ ನೆಮ್ಮದಿಯಿಂದ ಕಳೆಯಬಹುದು. ಸಂಬಂಧಗಳು ಎಂದರೆ ರಕ್ತಸಂಬಂಧಗಳಷ್ಟೇ ಅಲ್ಲ. ಮಿತ್ರರು ಎಂದರೆ ಶಾಲೆ, ಕಾಲೇಜು, ಉದ್ಯೋಗದ ವಾತಾವರಣದಲ್ಲಿ ಇರುವವರಷ್ಟೇ ಅಲ್ಲ. ಜಗತ್ತಿನಲ್ಲಿರುವ ಅಪರಿಚಿತರೂ ಕೂಡ ಒಂದಿಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಸಂಬಂಧಿಸಿದವರೇ. ತಂತ್ರಜ್ಞಾನ ಈ ಸಂಬಂಧದ ಅರ್ಥವನ್ನು ವಿಸ್ತರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕಲ್ಲವೆ? ಮಾನವೀಯತೆಯೇ ಇದೆಲ್ಲದರ ತಳಹದಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:58 pm, Thu, 13 October 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್