ಧನಬಾದ್ನ ಹನುಮಂತದೇವರಿಗೆ ನೋಟೀಸ್ ಕೊಟ್ಟ ರೈಲ್ವೇ ಇಲಾಖೆ; ದೇವಸ್ಥಾನ ತೆರವುಗೊಳಿಸಲು 10 ದಿನಗಳ ಗಡುವು
Notice To Hanuman Temple : ‘ಹನುಮಾನ್ಜೀ, ನೀವು ರೈಲ್ವೆ ಭೂಮಿಯನ್ನು ಆಕ್ರಮಿಸಿಕೊಂಡಿದ್ದೀರಿ. ಇದು ಕಾನೂನು ರೀತ್ಯಾ ಅಪರಾಧ. ಈ ಸ್ಥಳವನ್ನು ತೆರವು ಮಾಡದಿದ್ದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.’
Trending : ಜಾರ್ಖಂಡ್ನ ಧನಬಾದ್ನಲ್ಲಿರುವ ಹನುಮಂತ ದೇವಸ್ಥಾನವನ್ನು ತೆರವುಗೊಳಿಸಲು ರೈಲ್ವೇ ಇಲಾಖೆಯು ನೋಟೀಸ್ ನೀಡಿದೆ. ಈ ದೇವಾಲಯವು ರೈಲ್ವೇ ಇಲಾಖೆಯ ಜಾಗವನ್ನು ಅತಿಕ್ರಮಿಸಿಕೊಂಡಿಸಿರುವುದರಿಂದ 10 ದಿನಗಳಲ್ಲಿ ರೈಲ್ವೇ ಇಲಾಖೆಗೆ ಹಸ್ತಾಂತರಿಸಬೇಕೆಂಬ ನೋಟೀಸ್ ಅನ್ನು ದೇವಸ್ಥಾನದ ಗೋಡೆಯ ಮೇಲೆ ಅಂಟಿಸಲಾಗಿದೆ. ಈ ನೋಟೀಸ್ ಹನುಮಂತದೇವರನ್ನು ಉದ್ದೇಶಿಸಿ ಪ್ರಸ್ತಾಪಿಸಲಾಗಿದೆ. ‘ಹನುಮಾನ್ಜೀ, ನೀವು ರೈಲ್ವೆ ಭೂಮಿಯನ್ನುಆಕ್ರಮಿಸಿಕೊಂಡಿದ್ದೀರಿ. ಇದು ಕಾನೂನು ರೀತ್ಯಾ ಅಪರಾಧ. ಇನ್ನು 10 ದಿನಗಳಲ್ಲಿ ಈ ಸ್ಥಳವನ್ನು ತೆರವು ಮಾಡದಿದ್ದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.’
ದೇವಾಲಯದ ಸಮೀಪದಲ್ಲಿ ಖಟಿಕ್ ಬಸ್ತಿ ಇದೆ. ಇಲ್ಲಿ ವಾಸಿಸುವ ಸುಮಾರು 60 ಜನರಿಗೂ ಜಾಗವನ್ನು ಅತಿಕ್ರಮಿಸಿಕೊಂಡ ಬಗ್ಗೆ ರೈಲ್ವೆ ಇಲಾಖೆಯು ನೋಟೀಸ್ ಕಳುಹಿಸಿದೆ. ಆದರೆ ಸ್ಥಳೀಯರು ರೈಲ್ವೇ ನೀಡಿರುವ ನೋಟೀಸ್ಗೆ ವಿರೋಧ ವ್ಯಕ್ತಪಡಿಸಿದ್ದು, 1921 ರಿಂದ ತಾವು ಇಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಹಣ್ಣು, ಮೀನು, ತರಕಾರಿಯಂಥ ಸಣ್ಣ ವ್ಯಾಪಾರಗಳಿಂದ ಅವರು ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲರ ನಿವೇಶನಗಳು ಅಕ್ರಮವಾಗಿದ್ದು, ತೆರವುಗೊಳಿಸಬೇಕೆನ್ನುವುದು ರೈಲ್ವೇ ಇಲಾಖೆಯ ಆದೇಶ. ಈ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರದಂದು ಹನುಮಂತ ದೇವಸ್ಥಾನದ ಬಳಿ ಸೇರಿದ ಈ ಎಲ್ಲ ಜನರು ರೈಲ್ವೇ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.
ಈಗ ಹನುಮಂತ ಮನುಷ್ಯರನ್ನು ಕಾಯುತ್ತಾನಾ? ಮನುಷ್ಯರು ಹನುಮಂತನನ್ನು ಕಾಯುತ್ತಾರಾ?
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ