‘ಮೇಡಮ್, ನಿಮ್ಮ ಕಾರ್ ನೀವೇ ಇಟ್ಕೊಳ್ಳಿ, ನಾನೇನು ಕಾಡಿಗೆ ಓಡಿಸ್ಕೊಂಡು ಹೋಗ್ತಿದ್ನಾ?’ ಹೀಗೊಂದು ಕರಡಿ ಪ್ರಸಂಗ

| Updated By: ಶ್ರೀದೇವಿ ಕಳಸದ

Updated on: Oct 11, 2022 | 11:43 AM

Bear Enters A Woman's Car : ‘ಗೆಟ್ ಔಟ್, ಗೆಟ್ ಔಟ್​’ ಅಬ್ಬಬ್ಬಬ್ಬಬ್ಬಾ... ಈ ಮಹಿಳೆ ಕಿರುಚಿದ ರೀತಿಗೆ ಈ ಕರಡಿ ಅಂತೂ ಕಾರುಬಿಟ್ಟು ಇಳಿದಿದೆ. ಪಾಪ ತಿಂಡಿಚೀಲ ಅಲ್ಲಿಯೇ ಉಳಿದಿದೆ. ನಿಜವಾಗಲೂ ಹೆದರಿದ್ದು ಯಾರು ಇಲ್ಲಿ?

‘ಮೇಡಮ್, ನಿಮ್ಮ ಕಾರ್ ನೀವೇ ಇಟ್ಕೊಳ್ಳಿ, ನಾನೇನು ಕಾಡಿಗೆ ಓಡಿಸ್ಕೊಂಡು ಹೋಗ್ತಿದ್ನಾ?’ ಹೀಗೊಂದು ಕರಡಿ ಪ್ರಸಂಗ
Follow us on

Viral Video : ಈ ಕರಡಿ ಇಲ್ಲಿಗೇಕೆ ಬಂದಿತು; ಕಾರಿನ ಬಗ್ಗೆ ವ್ಯಾಮೋಹವೆ? ಖಂಡಿತ ಇಲ್ಲ. ಮಳೆ ಬರುತ್ತಿತ್ತೆ? ಅದೂ ಅಲ್ಲ. ತುಂಬಾ ಬಿಸಿಲಿತ್ತೇ? ಇಲ್ಲ ಇಲ್ಲ. ಯಾರಾದರೂ ಅಟ್ಟಿಸಿಕೊಂಡು ಬಂದರೆ? ಛೆ ಅದೆಲ್ಲ ಏನಿಲ್ಲ. ಕಾಡು ಸಾಕಾಗಿ ಊರು ಬೇಕೆನ್ನಿಸಿತೆ? ಬೇಡಪ್ಪಾ ಬೇಡ. ಮತ್ತೆ ಯಾಕೆ ಹೀಗಿಲ್ಲಿ ಬಂದಿದ್ದು? ನೀಟಾಗಿ ಕಾರಿನ ಹ್ಯಾಂಡಲ್​ ಹಿಡಿದು ಬಾಗಿಲು ತೆಗೆದು ಒಳಹೋಗಿ ಕುಳಿತಿದ್ದು? ತಿಂಡಿಗಾಗಿ, ಎಲ್ಲ ತಿಂಡಿಗಾಗಿ! ಅದು ಕಾರೇ ಆಗಿರಲಿ ಬಾರೇ ಆಗಿರಲಿ ಒಟ್ಟಿನಲ್ಲಿ ತಿಂಡಿ ಎಲ್ಲಿದೆಯೋ ಅಲ್ಲಿ ಹೊಕ್ಕುವುದೊಂದೇ ಗುರಿ ನನಗೆ ಎನ್ನುತ್ತದೆ ಈ ಕರಡಿವಂಶ. ಕೆಲ ದಿನಗಳ ಹಿಂದೆ ಅಮೆರಿಕದ ಅಂಗಡಿಗೆ ಹೊಕ್ಕ ಕರಡಿಯೊಂದು ಕ್ಯಾಂಡಿ, ಚಾಕೋಲೇಟ್​, ತಿಂಡಿಗಳನ್ನೆಲ್ಲ ತಿಂದು  ಹೋಗಿತ್ತು. ಆದರೆ ಈ ಕರಡಿಗೆ ಕೈತನಕ ಬಂದಿದ್ದು ಬಾಯಿತನಕ ಬರಲಿಲ್ಲವೆಂಬಂತಾಗಿ ಹೋಯಿತು.

ಕೇಳಿದಿರಾ ಈ ಕಾರಿನ ಒಡತಿ ತನ್ನ ಭಯಕ್ಕೆ, ಎಂಥ ಭಯಂಕರವಾಗಿ ಅರಚಾಡಿ ಕಿರುಚಾಡಿ ಕರಡಿಯನ್ನೇ ಓಡಿಸಿಬಿಟ್ಟಳು. ಪಾಪ ತಿಂಡಿಪೊಟ್ಟಣ ಅಲ್ಲಿಯೇ ಬಿಟ್ಟು ಕರಡಿ ಇಳಿದುಹೋಯಿತು. ತಿಂಡಿ ಕೊಟ್ಟು ಕಳಿಸಬೇಕಿತ್ತು ಈಕೆ. ಆದರೆ ಭಯದಲ್ಲಿ ಕರುಣೆ ಹುಟ್ಟುವುದೆ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸ್ವಲ್ಪ ಭಯಾನಕವೇ ಈ ದೃಶ್ಯ. ಡ್ರೈವರ್ ಸೀಟಿನಲ್ಲಿ ಹೋಗಿ ಈ ಕರಡಿ ಕುಳಿತರೆ ಇನ್ನೇನಾಗಬೇಕು? ನ್ಯೂಸ್‌ವೀಕ್ ವರದಿಯ ಪ್ರಕಾರ ಈ ದೃಶ್ಯವನ್ನು ಸೆರೆಹಿಡಿದಿದ್ದು ಟೆನ್ನೆಸ್ಸೀಯ ಗ್ಯಾಟ್ಲಿನ್‌ಬರ್ಗ್‌ನಲ್ಲಿ. ಗೆಟ್​ ಔಟ್​ ಗೆಟ್​ ಔಟ್ ಎಂದು ಆಕೆ ಕಿರುಚುತ್ತಿದ್ದ ರೀತಿ ಖಂಡಿತ ಕರಡಿಯನ್ನು ನಡುಗಿಸಿರಲು ಸಾಕು. ತಕ್ಷಣವೆ ಅಲ್ಲಿಂದ ಅದು ಹೊರಟುಬಿಟ್ಟಿದೆ.

ಕೆಲ ನೆಟ್ಟಿಗರಿಗೆ ಈ ವಿಡಿಯೋ ಖುಷಿಯುಂಟು ಮಾಡಿದರೆ ಇನ್ನೂ ಕೆಲವರಿಗೆ ಭಯ ಉಂಟುಮಾಡಿದೆ. ‘ಇದು ಕಪ್ಪು ಕರಡಿ, ಸಾಧು. ಅದೇ ಕಂದುಬಣ್ಣದ ಕರಡಿಯಾಗಿದ್ದರೆ ಖಂಡಿತ ಅಪಾಯವಿರುತ್ತಿತ್ತು’ ಎಂದಿದ್ದಾರೆ ನೆಟ್ಟಿಗರೊಬ್ಬರು. ಈತನಕ 94,000 ಜನ ಈ ವಿಡಿಯೋಗೆ ವೋಟ್ ಮಾಡಿದ್ದಾರೆ. 3,100 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಬರೆದು ಮುಗಿಸುವಾಗಲೂ ಈ ವಿಡಿಯೋದಲ್ಲಿ ಕಾರು ಬಿಟ್ಟು ಕೆಳಗಿಳೀ ಎಂದು ಕರಡಿಗೆ ಆ ಮಹಿಳೆ ಕೂಗಿದ್ದೇ ರಿಂಗಣಿಸುತ್ತಿದೆ.

ನಿಮಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:38 am, Tue, 11 October 22