Kitten stuck in drain : ಯಾವುದಾದರೂ ಪ್ರಾಣಿ ಕಣ್ಣೆದುರಿಗೇ ನೋವನ್ನನುಭವಿಸುತ್ತಿದ್ದರೆ ಸುಮ್ಮನೆ ಇರಲಾಗುತ್ತದೆಯೇ? ಪ್ರಾಣಿಪ್ರಿಯರಿಗಂತೂ ಸಾಧ್ಯವೇ ಇಲ್ಲ. ಅದರಲ್ಲೂ ಬೆಕ್ಕಿನ ಮರಿ! ಇಲ್ಲೊಂದು ಬೆಕ್ಕಿನ ಮರಿ ಚರಂಡಿಗೆ ಬಿದ್ದಿದೆ. ಸುಮಾರು ಎರಡು ತಿಂಗಳಿರಬೇಕು ಅದಕ್ಕೆ. ದಾರಿಯಲ್ಲಿ ಹೋಗುತ್ತಿರುವ ಹುಡುಗಿಯರ ಗುಂಪಿಗೆ ಈ ವಿಷಯ ಕೇಳಿ ಸುಮ್ಮನಿರಲಾಗಿಲ್ಲ. ಒಂದು ಹುಡುಗಿ ತಕ್ಷಣವೇ ಹಿಂದೆಮುಂದೆ ನೋಡದೆ ರಸ್ತೆ ಮೇಲೆ ಮಲಗಿ, ಚರಂಡಿಯ ಸಂದಿಯಲ್ಲಿ ಕೈ ಒಳತೂರಿ ಮರಿಯನ್ನು ಹೊರತೆಗೆದು ರಕ್ಷಿಸಿದ್ದಾಳೆ. ಅದರ ಹಣೆಗೊಂದು ಮುತ್ತು ಇಟ್ಟು ಸಂತಸವನ್ನೂ ವ್ಯಕ್ತಪಡಿಸಿದ್ದಾಳೆ. ನಂತರ ಹುಡುಗಿಯರ ಗುಂಪು ಹರ್ಷಚಿತ್ತದಿಂದ ಕುಣಿದಿದೆ. ಎಂಥ ಆಪ್ತ ವಿಡಿಯೋ ಇದಲ್ವಾ? 90 ಸಾವಿರಕ್ಕಿಂತಲೂ ಹೆಚ್ಚು ನೆಟ್ಟಿಗರು ಇದನ್ನು ವೀಕ್ಷಿಸಿದ್ದಾರೆ.
This group of friends heard a kitten meowing and noticed it had fallen down a storm drain.
ಇದನ್ನೂ ಓದಿThis is the moment one of the girls was able to rescue the kitten! ?????? ?❤️? ??
— GoodNewsCorrespondent (@GoodNewsCorres1) August 14, 2022
ನೆಟ್ಟಿಗರು ಸಂತಸ ವ್ಯಕ್ತಪಡಿಸಿದ ಪ್ರತಿಕ್ರಿಯಿಸಿದ್ದಾರೆ. ಮುದ್ದುಕ್ಕುವ ವಿಡಿಯೋ ನೋಡಿ ನಿಮಗೇನು ಅನ್ನಿಸಿತು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ