ಪುಟ್ಟ ಮಕ್ಕಳು ನಗುವುದನ್ನು ಕೇಳುತ್ತಿದ್ದರೆ ಮನಸ್ಸಿಗೆ ಖುಷಿಯಾಗುತ್ತದೆ. ಮಗುವನ್ನು ಹೆಚ್ಚು ಹೆಚ್ಚು ನಗಿಸಲು ನಾವು ಪ್ರಯತ್ನಿಸುತ್ತೇವೆ. ಪುಟ್ಟ-ಪುಟ್ಟ ಕಾಲುಗಳು, ಮುದ್ದಾದ ಕಣ್ಣುಗಳು ಏನೂ ಅರಿಯದ ಮೃದು ಮನಸ್ಸು.. ಯಾವುದೇ ಕಲ್ಮಷವಿಲ್ಲದ ಆ ಮನಸ್ಸನ್ನು ಖುಷಿಗೊಳಿಸುವುದರಲ್ಲಿ ನಮಗೆ ಸಂತೋಷ ಸಿಗುತ್ತದೆ. ಅಂತಹುದೇ ಒಂದು ಮುದ್ದಾದ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗುವಿನ ಖುಷಿ ನೋಡುತ್ತಿದ್ದ ನೆಟ್ಟಿಗರು ಮಗುವಿನ ನಗುವಿಗೆ ಸೋತಿದ್ದಾರೆ.
ಕೊವಿಡ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದು ಎಲ್ಲರ ನಿದ್ದೆಗೆಡಿಸಿದೆ. ಸುತ್ತಮುತ್ತಲು ಕೊವಿಡ್ ಪ್ರಕರಣಗಳನ್ನು ಕೇಳುತ್ತಿರುವ ಜನರು ಚಿಂತೆಗೀಡಾಗಿದ್ದಾರೆ. ಇದರಿಂದ ಹೊರಬರಲು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಆದಷ್ಟು ಮನಸ್ಸಿಗೆ ಖುಷಿ ನೀಡುವ ಸಂದೇಶವನ್ನು ಹುಡುಕಿ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮನಸ್ಸಿಗೆ ಖುಷಿ ನೀಡುವ ಹಾಗೂ ಒಂದು ಕ್ಷಣ ನಿಮ್ಮ ಚಿಂತೆಯನ್ನೆಲ್ಲಾ ದೂರ ಮಾಡಿ ನಿಮ್ಮ ಮುಖದಲ್ಲಿ ನಗುತರಿಸುವ ವಿಡಿಯೋ ಇಲ್ಲಿದೆ. ನೀವೂ ನೋಡಿ.
ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಹೆಚ್ಚು ಸಮಯ ಮಗುವಿನೊಂದಿಗೇ ಕಳೆದು ಹೋಗುತ್ತದೆ. ಮಗುವಿನ ಸಂತೋಷದ ಜತೆಗೆ ತುಂಟಾಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದರೆ ನಮ್ಮೆಲ್ಲಾ ಚಿಂತೆಗಳು ಮಾಯವಾಗುತ್ತದೆ. ಅಂತಹ ಶಕ್ತಿ ಪುಟ್ಟ ಮಕ್ಕಳಲ್ಲಿರುವುದು. ಅದೆಷ್ಟೇ ಮನೆ ಕೆಲಸವಿರಲಿ, ದೇಹಕ್ಕೆ ಆಯಾಸವಾಗಿರಲಿ ಚಿಕ್ಕ ಮಕ್ಕಳು ಕಂಡಾಕ್ಷಣ ಮಾತನಾಡಿಸದೇ ಹಾಗೇ ಹೋಗಲಾರೆವು. ಮಗುವಿನ ಆ ಪುಟ್ಟ ನಗು ಸಾಕು ನಮ್ಮೆಲ್ಲಾ ನೋವುಗಳನ್ನು ಮರೆಸಲು. ಇಲ್ಲಿರುವ ಮುದ್ದಾದ ಮಗುವಿನ ನಗು ನೋಡುತ್ತಾ ನೀವು ನಿಮ್ಮ ಚಿಂತೆಗಳನ್ನೆಲ್ಲಾ ಮರೆತುಬಿಡಿ.
ವಿಡಿಯೋದಲ್ಲಿ ಗಮನಿಸುವಂತೆ ಜಿನೆ ಮೇರಾ ದಿಲ್ ಲುಟೆಯ ಹಾಡಿಗೆ ಮಗು ನೃತ್ಯ ಮಾಡುತ್ತಿದೆ. ಖುಷಿಯಿಂದ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದೆ. ಹಾಡು ಕೇಳುತ್ತಿದ್ದಂತೆಯೇ ಮಗುವಿನ ಮುಖದ ತುಂಬ ನಗು. ಪುಟ್ಟ ತುಟಿಗಳಂಚಿನಿಂದ ಮೂಡಿದ ಆ ಪುಟ್ಟ ಮಗುವಿನ ನಗು ನೆಟ್ಟಿಗರ ಹ್ರದಯ ಗೆದ್ದಿದೆ.
ಇದನ್ನೂ ಓದಿ:
ಕೈಯಲ್ಲಿ ಮಗು ಹಿಡಿದು ಕೆಲಸಕ್ಕೆ ಹಾಜರಾದ ಮಹಿಳಾ ಟ್ರಾಫಿಕ್ ಪೊಲೀಸ್, ವಿಡಿಯೋ ವೈರಲ್
Published On - 4:37 pm, Tue, 1 June 21