Viral: ತಿಂಗಳ ಸಂಪಾದನೆ 40 ಸಾವಿರ ರೂ, ಟೈಮಿಂಗ್ಸ್ ಫಿಕ್ಸ್; ಇದು ಬೆಂಗಳೂರಿನಲ್ಲಿ ಅಡುಗೆ ಮನೆ ಕೆಲಸ ಮಾಡುವ ಮಹಿಳೆಯ ವರ್ಕ್ ಲೈಫ್

ಮನೆಕೆಲಸ ಮಾಡಿ ತಮ್ಮ ಸಂಸಾರ ಸಾಗಿಸುವ ಅದೆಷ್ಟೋ ಮಹಿಳೆಯರು ಇದ್ದಾರೆ. ಆದರೆ ಅವರ ಸಂಬಳ ಕಾರ್ಪೊರೇಟ್ ಉದ್ಯೋಗಿಗಳ ಸಂಬಳವನ್ನೇ ಮೀರಿಸುವಂತಿದೆ. ಇದೀಗ ಯುವಕನು ತನ್ನ ಮನೆಯಲ್ಲಿ ಅಡುಗೆ ಮಾಡುವ ಮಹಿಳೆ ತಿಂಗಳಿಗೆ 40,000 ರೂ ಗಳಿಸುತ್ತಾಳೆ. ಅದರ ಜತೆಗೆ ವರ್ಕ್ ಟೈಮಿಂಗ್ಸ್ ಫಿಕ್ಸ್ ಮಾಡಿಕೊಂಡಿದ್ದಾಳೆ ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದy ಸ್ಟೋರಿ ಇಲ್ಲಿದೆ.

Viral: ತಿಂಗಳ ಸಂಪಾದನೆ 40 ಸಾವಿರ ರೂ, ಟೈಮಿಂಗ್ಸ್ ಫಿಕ್ಸ್; ಇದು ಬೆಂಗಳೂರಿನಲ್ಲಿ ಅಡುಗೆ ಮನೆ ಕೆಲಸ ಮಾಡುವ ಮಹಿಳೆಯ ವರ್ಕ್ ಲೈಫ್
ಸಾಂದರ್ಭಿಕ ಚಿತ್ರ
Image Credit source: IndiaPix/IndiaPicture/Getty Images

Updated on: Nov 25, 2026 | 2:27 PM

ಈಗಿನ ಕಾಲದಲ್ಲಿ ಓದಿಕೊಂಡವರಿಗಿಂತ ಹೆಚ್ಚಿನ ಸಂಬಳವನ್ನು ಮನೆ ಕೆಲಸದವರು ಪಡೆಯುತ್ತಾರೆ. ಇದಕ್ಕೆ ಉದಾಹರಣೆಯಂತಿದೆ ಈ ಪೋಸ್ಟ್. ಬೆಂಗಳೂರಿನ (Bengaluru) ಯುವಕ ತನ್ನ ಮನೆಯಲ್ಲಿ ಅಡುಗೆ ಮಾಡುವ ಕೆಲಸದಾಕೆ ಗಳಿಸುವ ತಿಂಗಳ ಆದಾಯದ ಬಗ್ಗೆ ರಿವೀಲ್ ಮಾಡಿದ್ದಾನೆ. ಒಂದೇ ಮನೆಯಲ್ಲಿ ಕೆಲಸ ಮಾಡುವ ಬದಲು ಐದರಿಂದ ಆರು ಮನೆಗಳಲ್ಲಿ ಅಡುಗೆ ಮಾಡಿ ತಿಂಗಳಿಗೆ ಬರೋಬ್ಬರಿ 40,000 ರೂ ಸಂಪಾದನೆ ಮಾಡ್ತಾರೆ. ಒಮ್ಮೆ ಕೆಲಸ ಮುಗಿಸಿ ಮನೆಗೆ ಹೋದ್ರೆ ಆ ಬಳಿಕ ಯಾರು ಕೂಡ ಕಾಲ್ ಮಾಡಿ, ಕಿರಿಕಿರಿ ಮಾಡುವವರಿಲ್ಲ ಎಂದಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಶಾಕ್ ಆಗಿದ್ದು, ಅಡುಗೆ ಕೆಲಸದಾಕೆ ಕೆಲಸವೇ ಆರಾಮ್ ಎಂದು ಕಾಮೆಂಟ್‌ ಮಾಡಿದ್ದಾರೆ.

ದಿನಕ್ಕೆ ಐದರಿಂದ ಆರು ಮನೆಗಳಲ್ಲಿ ಅಡುಗೆ ಮಾಡುವ ಮಹಿಳೆ

ಬೆಂಗಳೂರಿನಲ್ಲಿ ಮಾರ್ಕೆಟರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುವ ಕಾರ್ತಿಕೇಯ್ ಉನಿಯಾಲ್ (Kartikeya Uniyal) ತಮ್ಮ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತನ್ನ ಮನೆಯಲ್ಲಿ ಅಡುಗೆ ಮಾಡುವ ಮಹಿಳೆಯ ಸಂಪಾದನೆಯ ಕುರಿತು ರಿವೀಲ್ ಮಾಡಲಾಗಿದೆ. ಈ ಪೋಸ್ಟ್ ನಲ್ಲಿ ನನ್ನ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಬೆಳಗ್ಗೆ ಸುಮಾರು 8 ಗಂಟೆಗೆ ಕೆಲಸ ಆರಂಭಿಸುತ್ತಾಳೆ. ಒಂದೇ ಮನೆಗೆ ತಮ್ಮ ದಿನದ ಸಮಯ ಮೀಸಲಿಡದೇ ದಿನಕ್ಕೆ ಐದರಿಂದ ಆರು ಮನೆಗಳಲ್ಲಿ ಅಡುಗೆ ಮಾಡಿ ಬಡಿಸುತ್ತಾಳೆ. ಮಧ್ಯಾಹ್ನ ಎರಡು ಮೂರು ಗಂಟೆಗಳ ವಿಶ್ರಾಂತಿ ಇರುತ್ತದೆ. ಸಂಜೆ ಮತ್ತೆ ಕೆಲಸ ಪ್ರಾರಂಭಿಸಿ ರಾತ್ರಿ 8 ಗಂಟೆಯ ವೇಳೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಾಳೆ.

Loading...

ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ

ರಜೆ ತೆಗೆದುಕೊಂಡ್ರು ಸ್ಯಾಲರಿ ಕಡಿತವಾಗಲ್ಲ

ಭಾನುವಾರ ಹಾಗೂ ಹಬ್ಬದ ದಿನಗಳಲ್ಲಿ ರಜೆ ಇರುತ್ತದೆ. ತುರ್ತಾಗಿ ರಜೆ ತೆಗೆದುಕೊಂಡ್ರು ಸಂಬಳ ಕಡಿತವಾಗಲ್ಲ. ಕೆಲಸ ಮುಗಿಸಿ ಮನೆಗೆ ಹೋದ ತಕ್ಷಣ ಕೆಲಸ ಯಾವುದೇ ಕಾಲ್ ಬರಲ್ಲ, ಕಿರಿಕಿರಿ ಇರಲ್ಲ. ರಜೆ ಇದ್ದಾಗಂತು ಕೆಲಸ ಕಾಲ್, ತುರ್ತು ಕೆಲಸಕ್ಕೆ ಬನ್ನಿ ಎನ್ನುವುದಿಲ್ಲ. ಆದರೆ, ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪಾಡು ನೋಡಲಾಗದು. ಆಫೀಸ್ ಟೈಮ್ ಮುಗಿದ್ರೂ ಕಾಲ್, ಮೆಸೇಜ್ ಡೆಡ್ ಲೈನ್ ಹಾಗೂ ಕೆಲಸ ಒತ್ತಡ ಹೆಚ್ಚಿರುತ್ತದೆ. ಆದರೆ ಬೆಂಗಳೂರಿನಲ್ಲಿ ಹೊಸದಾಗಿ ಕೆಲಸ ಸೇರಿಕೊಂಡವರಿಗೆ 30000 ರಿಂದ 40000 ಸಾವಿರ ರೂ ಸಂಬಳ ಸಿಕ್ಕರೆ ಉಳಿತಾಯ ದೂರದ ಮಾತು. ಮನೆ ಬಾಡಿಗೆ, ಊಟ ತಿಂಡಿ, ಟ್ರಾವೆಲ್ ಎಂದು ಸ್ಯಾಲರಿ ಹಣವೆಲ್ಲಾ ಅದಕ್ಕೆ ಖರ್ಚಾಗಿ ಹೋಗುತ್ತದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಬಾತ್ ರೂಮ್‌ಗೆ ಹೋಗಲು ಟೈಮ್ ಇಲ್ಲ; ಮಗುವಿನ ಆರೈಕೆಯಲ್ಲಿ ಸುಸ್ತಾದ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಓದಿ ಕೊಂಡವರಿಗೂ ಓದದವರಿಗೂ ಏನು ವ್ಯತ್ಯಾಸ ಎಂದಿದ್ದಾರೆ. ಇನ್ನೊಬ್ಬರು, ಐದಾರು ಮನೆ ಕೆಲಸ ಮಾಡುವುದರಿಂದ ಒಂದು ಮನೆ ಕೆಲಸ ಕಳೆದುಕೊಂಡ್ರು ಮತ್ತೆ ಉಳಿದ ಮನೆಯಲ್ಲಿ ಕೆಲಸ ಇರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಯಾವುದೇ ಕಿರಿಕಿರಿ, ಮಾನಸಿಕ ಒತ್ತಡ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us