AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೂವರು ಪುಟಾಣಿಗಳು ಸೇರಿ ಶುರುಮಾಡಿದ ಸ್ಟಾರ್ಟ್‌ಅಪ್‌; ಚಂದಾದಾರಿಕೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತೆ ಈ ಪರಿಸರ ಸ್ನೇಹಿ ಪ್ರಾಡಕ್ಟ್

ಈಗಿನ ಕಾಲದ ಮಕ್ಕಳು ಎಲ್ಲದರಲ್ಲೂ ಮುಂದು. ಇದಕ್ಕೆ ಅತ್ಯುತ್ತಮ ಉದಾಹರಣೆ ಈ ಮೂರು ಮಕ್ಕಳು. ಹೌದು, ಈ ಬೆಂಗಳೂರಿನ ಈ ಮಕ್ಕಳು ತಮ್ಮದೇ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ. ಇದೊಂದು ಪರಿಸರ ಸ್ನೇಹಿ ಸ್ಟಾರ್ಟ್‌ಅಪ್ 'ಇಕೋ ವಾಲಾ' ವಾಗಿದ್ದು ಇದರಲ್ಲಿ ಚಂದಾದಾರಿಕೆಯೂ ಇದೆಯಂತೆ. ಈ ಪುಟಾಣಿಗಳು ತಮ್ಮ ಈ ಹೊಸ ಉದ್ಯಮವನ್ನು ವಿವರಿಸುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Video: ಮೂವರು ಪುಟಾಣಿಗಳು ಸೇರಿ ಶುರುಮಾಡಿದ ಸ್ಟಾರ್ಟ್‌ಅಪ್‌; ಚಂದಾದಾರಿಕೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತೆ ಈ ಪರಿಸರ ಸ್ನೇಹಿ ಪ್ರಾಡಕ್ಟ್
ಪುಟಾಣಿಗಳೇ ಮಾಡಿದ ಇಕೋ ಫ್ರೆಂಡ್ಲಿ ಪೇಪರ್ ಬ್ಯಾಗ್Image Credit source: Twitter
ಸಾಯಿನಂದಾ
|

Updated on:Nov 04, 2025 | 6:08 PM

Share

ಬೆಂಗಳೂರು, ನವೆಂಬರ್‌ 04 :ಈಗಿನ ಕಾಲದ ಮಕ್ಕಳಿಗೆ ಸ್ಕೂಲ್, ಟ್ಯೂಷನ್, ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಹೀಗಿರುವಾಗ ಬ್ಯುಸಿನೆಸ್ ಮಾತೆಲ್ಲಿ. ಆದರೆ ಬೆಂಗಳೂರಿನ (Bengaluru) ಈ ಮೂವರು ಮಕ್ಕಳು ಕೂಡ ದೊಡ್ಡವರಿಗೆ ಸೆಡ್ಡು ಹೊಡೆಯುವಂತೆ ಹೊಸ ಸ್ಟಾರ್ಟ್‌ಅಪ್‌ (startup) ಶುರು ಮಾಡಿ ತಮ್ಮ ಈ ಹೊಸ ಬ್ಯುಸಿನೆಸ್ ನ ಪ್ರಚಾರ ಮಾಡುತ್ತಿದ್ದಾರೆ. ಪರಿಸರ ಸ್ನೇಹಿ ಪೇಪರ್ ಬ್ಯಾಗ್‌ಗಳನ್ನು ತಯಾರಿಸುತ್ತಿದ್ದು, ತಿಂಗಳಿಗೆ ಹತ್ತು ರೂಪಾಯಿ ಚಂದಾದಾರಿಕೆಯಲ್ಲಿ ಈ ಬ್ಯಾಗ್ ಕೊಂಡುಕೊಳ್ಳಬಹುದಂತೆ. ಈ ಪುಟಾಣಿಗಳ ಸ್ಟಾರ್ಟ್‌ಅಪ್‌ ಪ್ರಚಾರ ಮಾಡುತ್ತಿರುವ ರೀತಿಗೆ ನೆಟ್ಟಿಗರು ಶಾಕ್ ಆಗಿದ್ದಾರೆ.

ಮೂವರು ಪುಟಾಣಿಗಳ ಹೊಸ ಬ್ಯುಸಿನೆಸ್‌ ಹೇಗಿದೆ ನೋಡಿ

ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾದ ಗೋಯೆಂಕಾ ತಮ್ಮ ಎಕ್ಸ್ ಖಾತೆಯಲ್ಲಿ ಪುಟಾಣಿಗಳ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಶಾರ್ಕ್ ಟ್ಯಾಂಕ್ ಮರೆಯಿರಿ, ಐಡಿಯಾಬಾಜ್ ಮರೆಯಿರಿ, ಈ ಪಿಚ್ ನನ್ನ ಹೃದಯವನ್ನು ಗೆದ್ದಿತು ಎಂದು ಬರೆದು ಕೊಂಡಿದ್ದಾರೆ. ಈ ಮೂವರು ಪುಟಾಣಿ ಉದ್ಯಮಿಗಳು ತಮ್ಮ ವೀಡಿಯೋದಲ್ಲಿ ಗಮನ ಸೆಳೆಯುವಂತೆ ‘ಇಕೋ ವಾಲಾʼ ಕಲ್ಪನೆಯನ್ನು ವಿವರಿಸಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ನಾನು ಶಾರದಾ ಇಕೋ ವಾಲ ಕಂಪನಿ ಸಂಸ್ಥಾಪಕಿ, ನಾನು ನಚಿಕೇತ್‌ ಮ್ಯಾನೇಜರ್‌, ಸಮುದ್ಯತಾ ಸಹ ಈ ಕಂಪನಿಯ ಮ್ಯಾನೇಜರ್‌ ಎಂದು ಮಾತು ಶುರು ಮಾಡಿದ್ದಾರೆ. ನಾವು ಇಕೋವಾಲಾ ಎಂಬ ಸ್ಟಾರ್ಟ್‌ಅಪ್‌ ಶುರು ಮಾಡಿದ್ದೇವೆ. ಯಾವುದೇ ರೀತಿಯ ಟೇಪ್‌ ಗಮ್, ಕತ್ತರಿಯ ಬಳಕೆ ಮಾಡದೆ ನಾವು ಪೇಪರ್‌ ಬ್ಯಾಗ್‌ ತಯಾರಿಸುತ್ತೇವೆ ಎಂದು ಹೇಳುವುದನ್ನು ನೋಡಬಹುದು.

ಇನ್ನು ನಮ್ಮಲ್ಲಿ ಚಂದಾದಾರಿಕೆ ಸೌಲಭ್ಯ ಇದೆ. ತಿಂಗಳಿಗೆ 10 ರೂಪಾಯಿ ಕೊಟ್ಟರೆ, ನಾವು ಪ್ರತಿ ಭಾನುವಾರ ನಿಮ್ಮ ಮನೆಗೆ ಎರಡು ಪೇಪರ್ ಬ್ಯಾಗ್‌ಗಳನ್ನು ತಲುಪಿಸುತ್ತೇವೆ. ಕೇವಲ ವಿಳಾಸ ನೀಡಿ. ಅಷ್ಟೇ ಅಲ್ಲ, ಸಮಾರಂಭಗಳ ವೇಳೆ ನಮಗೆ ಕರೆ ಮಾಡಿ ತಿಳಿಸಿದರೆ, ನಾವು ನಿಮಗೆ ಪೇಪರ್‌ ಬ್ಯಾಗ್‌ ತಯಾರಿಸಿ ಕೊಡುತ್ತೇವೆ. ನೀವು ಈ ಬ್ಯಾಗ್ ಹೇಗಿದೆ ಎಂದು ನೋಡಲು ಉಚಿತ ಸ್ಯಾಂಪಲ್‌ಗಳನ್ನು ಪಡೆಯಬಹುದಾಗಿದೆ. ಪೇಪರ್‌ ಬ್ಯಾಗ್‌ ಅವಶ್ಯಕತೆ ಇದ್ದರೆ ನಮ್ಮ ನಂಬರ್‌ಗೆ ಕರೆ ಮಾಡಿ ಎಂದು ಹೇಳಿದ್ದಾಳೆ. ಇನ್ನು ಬ್ಯಾಗ್‌ನಲ್ಲಿ ಇದ್ದ ಒಂದು ಪೇಪರ್‌ ತೆಗೆದು ಇಕೋ ವಾಲ ಎಂದು ನಾವೇ ಬರೆದಿರುವ ವಿಸಿಟಿಂಗ್‌ ಕಾರ್ಡ್ ಎನ್ನುತ್ತಾ ಕೊಡುವುದನ್ನು ಕಾಣಬಹುದು.

ಇದನ್ನೂ ಓದಿ:20 ಸಾವಿರ ರೂ ಮನೆ ಬಾಡಿಗೆ, 30 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನ ಮನೆಮಾಲೀಕರ ಸುಲಿಗೆ ಇದು ಎಂದ ವ್ಯಕ್ತಿ

ಈ ಪೋಸ್ಟ್ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ಕೇವಲ ಒಂದು ಸ್ಟಾರ್ಟ್‌ಅಪ್‌ ಅಲ್ಲವೇ ಅಲ್ಲ. ತಿಂಗಳಿಗೆ ಹತ್ತು ರೂಗೆ ಪರಿಸರ ಜವಾಬ್ದಾರಿಯ ಪಾಠವನ್ನು ನೀಡಲಾಗುತ್ತಿದೆ. ನಿಜಕ್ಕೂ ಈ ವಿಡಿಯೋ ಹೃದಯಸ್ಪರ್ಶಿ ಎಂದಿದ್ದಾರೆ. ಇನ್ನೊಬ್ಬರು ದಿನದ ಅತ್ಯಂತ ಸಂತೋಷಕರ ಪೋಸ್ಟ್‌ಗಳಲ್ಲಿ ಒಂದು. ಉದ್ಯಮಶೀಲ ಮನೋಭಾವದೊಂದಿಗೆ ಪ್ರಾಮಾಣಿಕತೆ. ಅದು ನಾವು ಹುಡುಕುವ ಸಮಯದ ಒಳ್ಳೆಯತನ. ದೇವರು ನಮಗೆ ಅಂತಹ ಅದ್ಭುತವಾದ ಪುಟ್ಟ ನಕ್ಷತ್ರಗಳನ್ನು ನೀಡಿ ಆಶೀರ್ವದಿಸಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಿರಿಯ ಅದಾನಿ ಮಕ್ಕಳ ತಂಡಕ್ಕೆ ಸ್ವಾಗತ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Tue, 4 November 25