
ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಒಂದು ಕೆಲಸವಿದ್ದರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಅದೆಷ್ಟೋ ಯುವಕ ಯುವತಿಯರು ದಿನಬೆಳಗಾದರೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಈ ನಡುವೆ ಪ್ರಶಾಂತ್ ಹರಿದಾಸ್ (prashant haridas) ಎಂಬ ಬೆಂಗಳೂರು (bengaluru) ಯುವಕ ವಿಚಿತ್ರ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಉದ್ಯೋಗ ಸಿಗದೇ ನಿರಾಸೆಯಲ್ಲಿ ಈ ಯುವಕನು ಲಿಂಕ್ಡ್ ಇನ್ ನಲ್ಲಿ ತನ್ನದೇ ಶ್ರದ್ಧಾಂಜಲಿ (obituary) ಪೋಸ್ಟ್ ಹಾಕಿಕೊಂಡು ಕೆಲಸದ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ ಹಾಗೂ ನಿರುದ್ಯೋಗಿಗಳ ಕರಾಳತೆ ಬಿಚ್ಚಿಟ್ಟಿದ್ದಾನೆ. ಈ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಪ್ರಶಾಂತ್ ಹರಿದಾಸ್ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಉದ್ಯೋಗದ ಹುಡುಕಾಟದಲ್ಲಿದ್ದು ಇಲ್ಲಿಯವರೆಗೂ ಉದ್ಯೋಗ ಸಿಕ್ಕಿಲ್ಲ. ಇದರಿಂದ ಹತಾಶೆಗೊಂಡ ಯುವಕನು ಲಿಂಕ್ಡ್ ಇನ್ ನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ‘ಧನ್ಯವಾದಗಳು ಲಿಂಕ್ಡ್ಇನ್, ಉದ್ಯೋಗದಾತರಿಗೆ ಧನ್ಯವಾದಗಳು, ನನ್ನ ಅರ್ಜಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾ ನನ್ನ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಪೋಸ್ಟ್ ನಂತರ ಯಾರೂ ನನ್ನನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ಚೆನ್ನಾಗಿಯೇ ತಿಳಿದಿದೆ, ಆರ್ ಐ ಪಿ ಎಂದು ಬರೆದುಕೊಂಡಿದ್ದಾನೆ.
ಅದಲ್ಲದೇ ಮತ್ತೆ ಕೆಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದು, ‘ನನಗೆ ಕೆಲಸ ಸಿಗಲಿಲ್ಲ ಎಂಬ ಹತಾಶೆಯಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನಾನು ಇನ್ನೂ ಜೀವನದಲ್ಲಿ ಅನೇಕ ವಿಷಯಗಳನ್ನು ಅನುಭವಿಸುತ್ತೇನೆ. ವಿಭಿನ್ನ ರುಚಿಯಾಯ ಆಹಾರ ತಿನ್ನುವುದರಲ್ಲಿ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವುದರಲ್ಲಿ ಆಸಕ್ತಿ ಇದೆ. ನಾನು ಉದ್ಯೋಗ ಪಡೆಯುವುದರಲ್ಲಿ ಸೋತಿದ್ದರೂ ನಾನು ಒಂಟಿಯಾಗಿ ಬದುಕಲು ಸಾಧ್ಯವಿಲ್ಲ, ಹೀಗಾಗಿ ನಾನು ಬದುಕಬೇಕು!” ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
ಇದನ್ನೂ ಓದಿ: ಮೆಟ್ರೋದಲ್ಲಿ ಸೀಟ್ ಸಿಕ್ಕಿಲ್ಲ ಎಂದು ಟೆನ್ಶನ್ ಯಾಕೆ, ಈ ರೀತಿ ಟ್ರಿಕ್ಸ್ ಪಕ್ಕಾ ವರ್ಕ್ ಆಗುತ್ತೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ‘ನಿಮ್ಮ ಪರಿಸ್ಥಿತಿಯ ಅರಿವು ನನಗಿದೆ. ಒಳ್ಳೆಯ ಉದ್ಯೋಗ ಸಿಗುತ್ತದೆ ಚಿಂತೆ ಮಾಡಬೇಡಿ, ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ನೋಡಿಕೊಳ್ಳಿ’ ಎಂದಿದ್ದಾರೆ. ಮತ್ತೊಬ್ಬರು, ‘ನಿಮ್ಮ ಪರಿಸ್ಥಿತಿ ನಮಗೆ ಚೆನ್ನಾಗಿ ಅರ್ಥವಾಗಿದೆ. ಆದರೆ ಇದೇ ಅಂತಿಮವಲ್ಲ, ನೀವು ಮಾಡಿದ ಪ್ರಯತ್ನಗಳು ಖಂಡಿತ ವ್ಯರ್ಥವಾಗುವುದಿಲ್ಲ. ನಿಮಗೆ ಖಂಡಿತ ಕೆಲಸ ಸಿಗುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ನಿಮ್ಮ ಜೊತೆಗೆ ನಾವಿದ್ದೇವೆ. ನಮ್ಮಿಂದಾದ ಸಹಾಯ ಖಂಡಿತ ನಿಮಗೆ ಮಾಡುತ್ತೇವೆ, ಧೈರ್ಯದಿಂದಿರಿ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ