Viral: ಕಬ್ಬಿನ ಹಾಲು ಮಾರಾಟ ಮಾಡುವ ಮಹಿಳೆಯ ವ್ಯಾಪಾರ ವಿಳಾಸವನ್ನು ಗೂಗಲ್‌ ಮ್ಯಾಪ್‌ಗೆ ಸೇರಿಸಿದ ಯುವತಿಯ ಕಾರ್ಯಕ್ಕೆ ಶ್ಲಾಘನೆ

ಸೋಷಿಯಲ್‌ ಮೀಡಿಯಾ ಬಳಕೆದಾರರು ಹೃದಯಸ್ಪರ್ಶಿ ಕಥೆಗಳನ್ನು, ಕೆಟ್ಟ ಅನುಭವಗಳ ಕುರಿತ ಸ್ಟೋರಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವುಗಳಲ್ಲಿ ಕೆಲ ಕಥೆಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಅಂತಹದ್ದೇ ಹೃದಯಸ್ಪರ್ಶಿ ಕಥೆಯೊಂದು ಇದೀಗ ವೈರಲ್‌ ಆಗಿದ್ದು, ಕಬ್ಬಿನ ಹಾಲಿನ ಅಂಗಡಿಯಲ್ಲಿನ ಸ್ವಚ್ಛತೆ, ಅಲ್ಲಿ ಅವರು ಗ್ರಾಹಕರೊಂದಿಗೆ ವ್ಯವಹರಿಸುವ ರೀತಿಯನ್ನು ಕಂಡು ಮಹಿಳೆಯೊಬ್ಬರು ಆ ಕಬ್ಬಿನ ಹಾಲಿನ ಅಂಗಡಿಯ ವ್ಯಾಪಾರ ವಿಳಾಸವನ್ನು ಗೂಗಲ್‌ ಮ್ಯಾಪ್‌ಗೆ ಸೇರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

Viral: ಕಬ್ಬಿನ ಹಾಲು ಮಾರಾಟ ಮಾಡುವ ಮಹಿಳೆಯ ವ್ಯಾಪಾರ ವಿಳಾಸವನ್ನು ಗೂಗಲ್‌ ಮ್ಯಾಪ್‌ಗೆ ಸೇರಿಸಿದ ಯುವತಿಯ ಕಾರ್ಯಕ್ಕೆ ಶ್ಲಾಘನೆ
ವೈರಲ್‌ ಪೋಸ್ಟ್
Edited By:

Updated on: Apr 19, 2025 | 1:35 PM

ಗೂಗಲ್‌ ಮ್ಯಾಪ್‌ (google map) ನಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಿಯಾಗಿ ತಲುಪಿಸುವುದು ಮಾತ್ರವಲ್ಲದೆ ರೆಸ್ಟೋರೆಂಟ್‌, ಹೋಟೆಲ್‌ ಸೇರಿದಂತೆ ಇತರೆ ಸ್ಥಳಗಳನ್ನು ಹುಡುಕಬಹುದು. ಗೂಗಲ್‌ ಮ್ಯಾಪ್‌ನಲ್ಲಿ ಹೆಚ್ಚಾಗಿ ದೊಡ್ಡ ದೊಡ್ಡ ಹೋಟೆಲ್‌ ವ್ಯವಹಾರಗಳ ಹೆಸರು ಕಾಣಿಸುತ್ತದೆ ಆದರೆ ಸಣ್ಣಪುಟ್ಟ ವ್ಯವಹಾರ ವಿಳಾಸಗಳು ಅಷ್ಟಾಗಿ ಕಾಣಸಿಗುವುದಿಲ್ಲ. ಇಂತಹ ಸಣ್ಣ ವ್ಯಾಪಾರಸ್ಥರಿಗೂ ಸಹಾಯವಾಗಬೇಕೆಂದು ಬೆಂಗಳೂರಿನ (Bengaluru) ಪೂರ್ಣಿಮಾ ಪ್ರಭು ಎಂಬವರು ಯುವತಿ ಕಬ್ಬಿನ ಹಾಲು (sugar cane) ಮಾರಾಟ ಮಾಡುವ ಮಹಿಳೆಯ ವ್ಯಾಪಾರ ವಿಳಾಸವನ್ನು ಗೂಗಲ್‌ ಮ್ಯಾಪ್‌ಗೆ ಸೇರಿಸಿದ್ದಾರೆ. ಈ ಸಣ್ಣ ಅಂಗಡಿಯಲ್ಲಿ ನೀಡುವ ಆತಿಥ್ಯ, ಅಲ್ಲಿನ ಸ್ವಚ್ಛತೆಗೆ ಮನಸೋತ ಪೂರ್ಣಿಮಾ ಅವರ ವ್ಯಾಪಾರವನ್ನು ವೃದ್ಧಿಸಲು ಈ ಪುಟ್ಟ ಸಹಾಯ ಮಾಡಿದ್ದು, ಇವರ ಈ ಕಾರ್ಯಕ್ಕೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ಬನಶಂಕರಿಯಲ್ಲಿರುವ ಶ್ರೀ ವಿನಾಯಕ ಫ್ರೆಶ್‌ ಶುಗರ್ ಕೇನ್‌ ಹೆಸರಿನ ಕಬ್ಬಿನ ಹಾಲಿನ ಅಂಗಡಿಯ ವಿಳಾಸವನ್ನು ಪೂರ್ಣಿಮಾ ಪ್ರಭು ಎಂಬವರು ಗೂಗಲ್‌ ಮ್ಯಾಪ್‌ಗೆ ಸೇರಿಸಿದ್ದಾರೆ. ಲತಾ ಎಂಬ ಹೆಸರಿನ ಮಹಿಳೆ ಈ ಕಬ್ಬಿನ ಹಾಲಿನ ಅಂಗಡಿಯನ್ನು ನಡೆಸುತ್ತಿರುವುದು, ಇಲ್ಲಿನ ಸ್ವಚ್ಛವಾದ ವಾತಾವರಣ, ಆ ಮಹಿಳೆ ಗ್ರಾಹಕರಿಗೆ ನೀಡುವ ಸಿಹಿಯಾದ ಆತಿಥ್ಯ ಈ ಸಣ್ಣಪುಟ್ಟ ಸಂಗತಿಗಳಿಂದ ಮನಸೋತ ಪೂರ್ಣಿಮಾ ಈ ಅಂಗಡಿಯ ವಿಳಾಸವನ್ನು ಗೂಗಲ್‌ಮ್ಯಾಪ್‌ಗೆ ಸೇರಿಸಿದ್ದಾರೆ.

ಇದನ್ನೂ ಓದಿ
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಬೆತ್ತಲೆ ಮೆರವಣಿಗೆ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಭರ್ಜರಿ ಡ್ಯಾನ್ಸ್

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಈ ಕುರಿತ ಹೃದಯಸ್ಪರ್ಶಿ ಕಥೆಯನ್ನು ಪೂರ್ಣಿಮಾ ಪ್ರಭು (Poornima Prabhu) ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮತ್ತು ಕಬ್ಬಿನ ಹಾಲಿನ ಅಂಗಡಿಯ ಫೋಟೋವನ್ನು ಹಂಚಿಕೊಂಡು “ನೀವು ಈ ಪ್ರದೇಶಕ್ಕೆ ಬಂದರೆ ಈ ಕಬ್ಬಿನ ಹಾಲಿನ ಅಂಗಡಿಗೆ ಭೇಟಿ ನೀಡಿ. ಅತ್ಯಂತ ಸಿಹಿಯಾದ ಆತಿಥ್ಯವನ್ನು ನೀಡುವ ಲತಾ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಲ್ಲದೆ ಈ ಅಂಗಡಿಯ ಆವರಣವೂ ತುಂಬಾನೇ ಸ್ವಚ್ಛವಾಗಿದೆ. ಅಲ್ಲದೆ ಇಲ್ಲಿನ ಕಬ್ಬಿನ ಹಾಲಿನ ಯಂತ್ರದ ಬಳಿ ಯಾವುದೇ ನೊಣ ಕೂಡಾ ಇಲ್ಲ. ಅಷ್ಟು ಸ್ವಚ್ಛವಾಗಿದೆ ಈ ಸ್ಥಳ. ಗೂಗಲ್‌ ಮ್ಯಾಪ್‌ಗೆ ಈ ವ್ಯಾಪಾರ ವಿಳಾಸವನ್ನು ಸೇರಿಸುವ ಮೂಲಕ ನಾನು ಅವರಿಗೆ ನನ್ನದೇ ರೀತಿಯಲ್ಲಿ ಧನ್ಯವಾದ ಸಲ್ಲಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಏಪ್ರಿಲ್‌ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 15 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಇದೊಂದು ಒಳ್ಳೆಯ ಕಾರ್ಯʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಅದ್ಭುತವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಯ ವ್ಯಾಪಾರವನ್ನು ಗೂಗಲ್‌ ಮ್ಯಾಪ್‌ಗೆ ಸೇರಿಸಿದ್ದು, ನೀವು ಮಾಡಿದ ಅತ್ಯುತ್ತಮ ಕಾರ್ಯಗಳಲ್ಲಿ ಒಂದಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ