Video: ಒನ್‌ ವೇನಲ್ಲಿ ಯಾಕ್‌ ಬಂದ್ರಿ; ಒನ್‌ ವೇ ರೋಡಲ್ಲಿ ಗಾಡಿ ನುಗ್ಗಿಸಿದಾತನಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ಕಾರ್‌ ಚಾಲಕ

ಯಾಕ್‌ ಓವರ್‌ ಟೇಕ್‌ ಮಾಡ್ಬೇಕಿತ್ತು, ಒನ್‌ ವೇ ರಸ್ತೆಯಲ್ಲಿ ಯಾಕ್‌ ನುಗ್ಗಿದೆ, ನಮ್‌ ಗಾಡಿಗೆ ಏನಕ್ಕೆ ಗುದ್ದಿದೆ ಅಂತೆಲ್ಲಾ ವಾಹನ ಚಾಲಕರ ನಡುವೆ ಜಗಳಗಳು ನಡೆಯುತ್ತಲೇ ಇರುತ್ತವೆ. ವಾಹನ ಸವಾರರ ಜಗಳಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಒನ್‌ ವೇ ರೋಡಲ್ಲಿ ಕಾರು ನುಗ್ಗಿಸಿದ ವಿಚಾರವಾಗಿ ಚಾಲಕರಿಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

Video: ಒನ್‌ ವೇನಲ್ಲಿ  ಯಾಕ್‌ ಬಂದ್ರಿ; ಒನ್‌ ವೇ ರೋಡಲ್ಲಿ ಗಾಡಿ ನುಗ್ಗಿಸಿದಾತನಿಗೆ ಸಖತ್‌  ಕ್ಲಾಸ್‌ ತೆಗೆದುಕೊಂಡ ಕಾರ್‌ ಚಾಲಕ
ಕಾರು ಚಾಲಕರಿಬ್ಬರ ವಾಗ್ವಾದ
Image Credit source: Social Media

Updated on: Jul 16, 2025 | 12:10 PM

ಟ್ರಾಫಿಕ್‌ ರೂಲ್ಸ್‌ಗಳನ್ನು (Traffic Rules) ಪಾಲಿಸುವುದು ಪ್ರತಿಯೊಬ್ಬ ವಾಹನ ಸವಾರರ ಕರ್ತವ್ಯವಾಗಿದೆ. ಆದ್ರೆ ಕೆಲವರು ಹೆಲ್ಮೆಟ್‌ ಧರಿಸದೆ ಬೈಕ್‌ ಓಡಿಸುವುದು, ಸೀಟ್‌ ಬೆಲ್ಟ್‌ ಧರಿಸದೆ ಗಾಡಿ ಓಡಿಸುವುದು, ಈ ರಸ್ತೆಯಲ್ಲಿ ಕೇವಲ ವಾಹನಗಳು ಹೋಗುವುದಕ್ಕೆ ಮಾತ್ರ ಅವಕಾಶವಿದೆ, ಬರುವುದಕ್ಕೆ ಅವಕಾಶವಿಲ್ಲ ಅಂತಹ ಹೇಳಿ ಬೋರ್ಡ್‌ ಹಾಕಿದ್ರು ಕೂಡಾ ಒನ್‌ ವೇ ರಸ್ತೆಯಲ್ಲಿ ನುಗ್ಗಿ ರೂಲ್ಸ್‌ ಬ್ರೇಕ್‌ ಮಾಡುತ್ತಾರೆ. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಒನ್‌ ವೇ ರೋಡಲ್ಲಿ (One way road) ಗಾಡಿ ನುಗ್ಗಿಸಿದ ವಿಚಾರವಾಗಿ ಕಾರ್‌ ಚಾಲಕರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ರೂಲ್ಸ್‌ ಬ್ರೇಕ್‌ ಮಾಡಿ ಕಾರ್‌ ನುಗ್ಗಿಸಿದವನಿಗೆ ಇನ್ನೊಬ್ಬ ಕಾರ್‌ ಚಾಲಕ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಒನ್‌ ವೇ ರೋಡಲ್ಲಿ ಗಾಡಿ ನುಗ್ಗಿಸಿದಾತನಿಗೆ ಕಾರು ಚಾಲಕನ ಕ್ಲಾಸ್‌:

ಬೆಂಗಳೂರಿನ ಮಲ್ಲೇಶ್ವರಂನ 16 ನೇ ಅಡ್ಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒನ್‌ ವೇ ರಸ್ತೆ ಎಂದು ಗೊತ್ತಿದ್ರೂ ಕೂಡಾ ಆ ರಸ್ತೆಯಲ್ಲಿ ವಾಹನ ಚಲಾಯಿಸಿದಾತನಿಗೆ ಕಾರ್‌ ಚಾಲಕನೊಬ್ಬ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಒನ್‌ ವೇ ರಸ್ತೆ ಅಂತ ಗೊತ್ತಿದ್ರೂ ಇಲ್ಲಿ ಯಾಕ್‌ ಬರ್ಬೇಕಿತ್ತು ಎಂದು ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಕಾರು ಚಾಲಕ ಬೈದಿದ್ದು, ಈ ದೃಶ್ಯ ಇದೀಗ ವೈರಲ್‌ ಆಗಿದೆ.

ಇದನ್ನೂ ಓದಿ
ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!
ಹಾಡಿನ ಮೂಲಕ ರಿಕ್ಷಾ ಚಾಲಕನಿಗೆ ಸ್ವೀಟ್‌ ಆಗಿ ಬುದ್ಧಿವಾದ ಹೇಳಿದ ಪೊಲೀಸ್‌
ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
ಕಾರಿನಡಿ ಸಿಲುಕಿದರೂ ಪವಾಡದಂತೆ ಬದುಕುಳಿದ ಮಗು

ಈ ವಿಡಿಯೋವನ್ನು Ghar Ke Kalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬೆಂಗಳೂರಿನ ಮಲ್ಲೇಶ್ವರಂನ ಒನ್‌ ವೇ ರಸ್ತೆಯಲ್ಲಿ ಕಾರು ಚಾಲಕರಿಬ್ಬರ ಜಗಳ” ಎಂಬ ಶೀರ್ಷಿಕೆನ್ನು ಬರೆದುಕೊಳ್ಳಲಾಗಿದೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒನ್‌ ವೇ ರಸ್ತೆ ಎಂದು ಗೊತ್ತಿದ್ರೂ ಕಾರು ಚಾಲಕನೊಬ್ಬ ಅಲ್ಲಿ ತನ್ನ ಗಾಡಿಯನ್ನು ನುಗ್ಗಿಸುವಂತ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಸರಿಯಾದ ರಸ್ತೆಯಲ್ಲೇ ಬರುತ್ತಿದ್ದ ಇನ್ನೊಬ್ಬ ಕಾರ್‌ ಚಾಲಕ, ಇದು ಒನ್‌ ವೇ ರಸ್ತೆ ಗುರು, ಹೀಗಿರುವಾಗ ಯಾಕ್‌ ಬಂದ್ರಿ, ಬೋರ್ಡ್‌ ಹಾಕಿದ್ರೂ, ಒನ್‌ ವೇ ರಸ್ತೆಯಲ್ಲಿ ಯಾಕೆ ಬರ್ಬೇಕಿತ್ತು ಎಂದು ರೂಲ್ಸ್‌ ಬ್ರೇಕ್‌ ಮಾಡಿದಾತನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!

ಜುಲೈ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಒನ್‌ ವೇ ಎಂದ್ರೂ ಗೊತ್ತಿದ್ದರೂ ಅಲ್ಲಿ ಬಂದಿದ್ದಾನಲ್ಲ, ಅವನೆಂಥ ಮೂರ್ಖʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಅವನೊಬ್ಬ ಮೂರ್ಖʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ರೂಲ್ಸ್‌ ಬ್ರೇಕ್‌ ಮಾಡುವವರಿಗೆ ತಕ್ಕ ಶಿಕ್ಷೆ ಕೊಡಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ