Viral: ಪ್ರೊಫೆಶನಲ್ ಆಗಿ ಸಂದೇಶ ಕಳುಹಿಸಿ ರಜೆ ಕೇಳಿದ ಬೆಂಗಳೂರಿನ ಮನೆಕೆಲಸದಾಕೆ

ಮನೆಕೆಲಸ ಮಾಡಿ ತಮ್ಮ ಕುಟುಂಬ ಸಾಗಿಸುವ ಅದೆಷ್ಟೋ ಮಹಿಳೆಯರು ತುಂಬಾನೇ ಅಪ್ಡೇಟ್ ಆಗಿದ್ದಾರೆ. ಮನೆಕೆಲಸ ಮಾಡಿ ಜೀವನ ನಡೆಸುತ್ತಿದ್ರೂ ಪಕ್ಕಾ ಪ್ರೊಫೆಶನಲ್ ಆಗಿಯೇ ನಡೆದುಕೊಳ್ಳುತ್ತಾರೆ. ಇವರ ನಡೆ ನುಡಿಯಲ್ಲಿ ಆತ್ಮವಿಶ್ವಾಸವು ಎದ್ದು ಕಾಣುತ್ತದೆ. ಈ ಸ್ಟೋರಿ ಓದಿದ ಮೇಲಂತೂ ನಾವು ಹೇಳುತ್ತಿರುವುದು ನಿಮಗೆ ಖಾತರಿಯಾಗುತ್ತದೆ. ಮನೆಕೆಲಸದಾಕೆ ತಾನು ರಜೆ ತೆಗೆದುಕೊಳ್ಳುತ್ತಿರುವ ಬಗ್ಗೆ ಮನೆ ಮಾಲಕಿಗೆ ಪ್ರೊಫೆಶನಲ್ ಆಗಿ ತಿಳಿಸಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ.

Viral: ಪ್ರೊಫೆಶನಲ್ ಆಗಿ ಸಂದೇಶ ಕಳುಹಿಸಿ ರಜೆ ಕೇಳಿದ ಬೆಂಗಳೂರಿನ ಮನೆಕೆಲಸದಾಕೆ
ವೈರಲ್ ಪೋಸ್ಟ್,
Image Credit source: LinkedIn/ Pinterest
Updated By: ಮಾಲಾಶ್ರೀ ಅಂಚನ್​

Updated on: Aug 26, 2025 | 3:57 PM

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಗಂಡ ಹೆಂಡ್ತಿಯರಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಹೀಗಾಗಿ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಕಷ್ಟ. ಈ ಕಾರಣದಿಂದಲೇ ಮನೆಕೆಲಸದವರನ್ನು ನೇಮಿಸಿಕೊಳ್ಳುತ್ತಾರೆ. ಹೀಗೆ ಕೆಲಸಕ್ಕೆ ಬಂದ ಮಹಿಳೆಯೂ ಹೇಳದೇ ರಜೆ ತೆಗೆದುಕೊಳ್ಳುವುದು, ಒಂದೆರಡು ದಿನ ಕೆಲಸಕ್ಕೆ ಬಂದು ಆಮೇಲೆ ಹೇಳೆದೇನೇ ಕೈಕೊಡುವುದು ಇಂತಹ ಸಮಸ್ಯೆಗಳು ಆಗುತ್ತಿರುತ್ತದೆ. ಆದರೆ ಬೆಂಗಳೂರಿನ ಈ ಮನೆಕೆಲಸದಾಕೆ (Bengaluru house maid) ಎಷ್ಟು ಪ್ರೊಫೆಶನಲ್ ಆಗಿದ್ದಾಳೆ ಹಾಗೂ ಕಾರ್ಪೋರೇಟ್ ಸಂಸ್ಕೃತಿ ಎಷ್ಟು ಪ್ರಭಾವ ಬೀರಿದೆ ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿ. ತಾನು ಕೆಲಸಕ್ಕೆ ಬರಲು ಆಗುವುದಿಲ್ಲ ಎನ್ನುವ ಬಗ್ಗೆ ಇಂಗ್ಲೀಷ್‌ನಲ್ಲಿ ವಿವರವಾಗಿ ಹೇಳಿದ್ದಾಳೆ. ಈ ಮೆಸೇಜ್ ಸ್ಕ್ರೀನ್ ಶಾಟ್‌ನ್ನು ಮನೆ ಮಾಲಕಿ ಸಿಮ್ರಾನ್ ಎಂ ಭಂಭಾನಿ (Simran M Bhambani) ಶೇರ್ ಮಾಡಿಕೊಂಡು ಕೆಲವು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈಗೀಗ ಎಲ್ಲರೂ ತುಂಬಾನೇ ಅಪ್ಡೇಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಮಾರ್ಕೆಟಿಂಗ್ ವಿಶ್ಲೇಷಕಿ ಸಿಮ್ರಾನ್ ಎಂ ಅವರು ತಮ್ಮ ಮನೆಕೆಲಸದಾಕೆಯಿಂದ ಬಂದ ವಾಟ್ಯಾಪ್ ಮೆಸೇಜನ್ನು ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಬೆಂಗಳೂರಿನ ಪೀಕ್ ಕ್ಷಣ. ‘ನಾನು ಕೆಲಸ ಮಾಡಿದ ಅರ್ಧದಷ್ಟು ಜನರಿಗಿಂತಲೂ ನನ್ನ ಮನೆಕೆಲಸದವಳು ಹೆಚ್ಚು ಪ್ರೊಫೆಶನಲ್‌ ಆಗಿದ್ದಾಳೆ. ರಜೆ ತೆಗೆದುಕೊಳ್ಳುವಾಗ ಯಾಕೆ ಎನ್ನುವ ಬಗ್ಗೆ ವಿವರವಾಗಿ ವಾಟ್ಸಪ್ ನಲ್ಲಿ ಹಂಚಿಕೊಂಡಿದ್ದಾಳೆ. ನೂರಕ್ಕೆ ನೂರರಷ್ಟು ಪ್ರೊಫೆಶನಲ್ ಆಗಿದ್ದಾಳೆ. ಈ ಮೆಸೇಜನ್ನು ಆಕೆಯ 10 ವರ್ಷದ ಮಗಳು ಟೈಪ್ ಮಾಡಿದ್ದಾಳೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಸ್ಕ್ರೀನ್ ಶಾಟ್‌ನಲ್ಲಿ ನನಗೆ ಇಂದು ಕೆಲಸಕ್ಕೆ ಬರಲು ಆಗುವುದಿಲ್ಲ,  ನನ್ನ ಕಾಲಿಗೆ ಗಾಯವಾಗಿದ್ದು, ಕಾಲು ಊದಿಕೊಂಡಿದೆ. ನನಗೆ ನಡೆಯಲು ಆಗುತ್ತಿಲ್ಲ ಎಂದು ಇಂಗ್ಲೀಷ್‌ನಲ್ಲಿ ಬರೆದಿರುವುದನ್ನು ನೋಡಬಹುದು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ
ನಿಮ್ಗೆ ಈ ಕಂಪನಿಯಲ್ಲಿ ಕೆಲಸ ಸಿಗಲ್ಲ ಎಂದು ಯುವತಿಗೆ ಹೇಳಿದ ಸಂದರ್ಶಕ
ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಾ ಪೊಲೀಸ್ ಪರೀಕ್ಷೆಗೆ ಯುವಕನ ತಯಾರಿ
ಟೈಮ್ ಆದ್ರೂ ಕೆಲಸ ವಹಿಸಿದ ಮ್ಯಾನೇಜರ್, ನೋ ಎಂದು ಆಫೀಸಿನಿಂದ ಹೊರನಡೆದ ಯುವತಿ
ಮನೆಕೆಲಸದಾಕೆಯ ಇಂಗ್ಲಿಷ್ ಭಾಷಾ ಕೌಶಲ್ಯ ನೋಡಿ ಬೆರಗಾದ ಮನೆ ಒಡತಿ

ಇದನ್ನೂ ಓದಿ: Viral: ಮನೆಕೆಲಸದಾಕೆಯ ಇಂಗ್ಲಿಷ್ ಭಾಷಾ ಕೌಶಲ್ಯ ನೋಡಿ ಬೆರಗಾದ ಮನೆ ಒಡತಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವಾರು ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರ, ನಮ್ಮ ಮನೆಯ ಕೆಲಸದಾಕೆ ಮಾಹಿತಿ ನೀಡುವುದೇ ಇಲ್ಲ, ನಾವೇ ಕಾಲ್ ಮಾಡಿ ವಿಚಾರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು,ನಾನು ಆಫೀಸ್ ನಲ್ಲಿ ರಜೆ ತೆಗೆದುಕೊಳ್ಳುವಾಗಲು ಇಷ್ಟು ಪ್ರೊಫೆಶನಲ್ ಆಗಿ ವರ್ತಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಉತ್ತರ ಭಾರತದ ಮನೆಕೆಲಸದವರು ಯಾವುದೇ ಕಾರಣವನ್ನು ನೀಡದೆ ರಜೆ ತೆಗೆದುಕೊಳ್ಳುತ್ತಾರೆ. ಆದರೆ ನನ್ನ ಮನೆಕೆಲಸದವಳು ರಜೆಯ ಕಾರಣವನ್ನೂ ಹೇಳದೆ ಇದ್ದಾಗ, ನಾನು ಆಫೀಸ್‌ ಗೆ ಬರಲು ತಡವಾಗಿದ್ದು ಯಾಕೆ ಎಂದು ಕೇಳಿದಾಗ ಏನು ಕಾರಣ ಬಾಸ್ ಗೆ ಹೇಳ್ಬೇಕು ಎಂದು ಯೋಚಿಸುತ್ತೇನೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ