Viral: ಮನೆಕೆಲಸದಾಕೆಯ ಇಂಗ್ಲಿಷ್ ಭಾಷಾ ಕೌಶಲ್ಯ ನೋಡಿ ಬೆರಗಾದ ಮನೆ ಒಡತಿ
ಇಂಗ್ಲಿಷ್ ಭಾಷೆ ಎಂದರೆ ಹೆಚ್ಚಿನವರಿಗೆ ಕಬ್ಬಿಣದ ಕಡಲೆ, ಆದರೆ ಕೆಲವರು ಆಂಗ್ಲ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಇದೀಗ ಈ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ. ಹೌದು, ಮನೆಯ ಕೆಲಸದಾಕೆಯ ಮಾಲಕಿ ಜೊತೆಗೆ ನಡೆಸಿದ ಸಂಭಾಷಣೆಯ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವವರು ಅಥವಾ ಉದ್ಯೋಗಕ್ಕೆ ತೆರಳುವ ಮಹಿಳೆಯರು ಮನೆ ಕೆಲಸಕ್ಕಾಗಿ ಮನೆಕೆಲಸದಾಕೆಯನ್ನು ನೇಮಿಸಿಕೊಳ್ಳುತ್ತಾರೆ. ಹೀಗಿರುವಾಗ ಮನೆಕೆಲಸದಾಕೆ (domestic worker) ಅನಿವಾರ್ಯಕ್ಕಾಗಿ ಕಾರಣ ರಜೆ ಹಾಕುವಾಗ ಮನೆ ಒಡತಿಯ ಜೊತೆಗೆ ತಮ್ಮ ಮಾತೃ ಭಾಷೆಯಲ್ಲಿ ಅಥವಾ ಆ ಪ್ರಾಂತ್ಯದ ಭಾಷೆಯಲ್ಲಿ ಸಂವಹನ ಮಾಡುವುದನ್ನು ನೋಡಿರಬಹುದು. ಆದರೆ ಮುಂಬೈನಲ್ಲಿ ಮನೆಕೆಲಸದಾಕೆಯೂ ತಮ್ಮ ಮನೆ ಒಡತಿ ರಿಚಾ (Richa) ಜೊತೆಗೆ ಇಂಗ್ಲಿಷ್‌ನಲ್ಲಿ (English) ಸಂವಹನ ನಡೆಸಿದ್ದಾಳೆ. ತಾನು ಕೆಲಸಕ್ಕೆ ಬರುವುದಿಲ್ಲ, ರಜೆ ತೆಗೆದುಕೊಳ್ಳುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ಮೆಸೇಜ್ ಮಾಡಿ ಹೇಳಿಕೊಂಡಿದ್ದಾಳೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
@rich-athinks ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ ಮನೆ ಮಾಲಕಿ ತಮ್ಮ ಮನೆಕೆಲಸದಾಕೆಯ ಇಂಗ್ಲಿಷ್ ಸ್ಕಿಲ್ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಮನೆಕೆಲಸದಾಕೆ ಕ್ಯೂಟಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಮನೆ ಮಾಲಕಿ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ ದೀದಿ ನಾನು ಮಾಧುರಿ, ನಿಮಗೆ ಮೊದಲೇ ತಿಳಿಸಲು ನಮಗೆ ಮರೆತು ಹೋಗಿದೆ. ನನಗೆ ಬರಲು ಸಾಧ್ಯವಾಗುತ್ತಿಲ್ಲ. ನಾನು ನಾಳೆ ರಜೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಬರೆದಿರುವುದನ್ನು ನೋಡಬಹುದು. ಮನೆ ಮಾಲಕಿ ರಿಚಾ ತನ್ನ ಮನೆಕೆಲಸದಾಕೆಯ ಇಂಗ್ಲಿಷ್ ಭಾಷೆಯಲ್ಲಿ ಮೆಸೇಜ್ ಕಳುಹಿಸಿರುವುದು ನೋಡಿ ಖುಷಿಪಟ್ಟಿದ್ದು, ಆಕೆಯ ಬಗ್ಗೆ ಹೆಮ್ಮೆಯಾಗಿದೆ.
ಇದನ್ನೂ ಓದಿ : Viral: ಮನೆಕೆಲಸದಾಕೆಯ ಕುಟುಂಬದ ಆದಾಯ 1 ಲಕ್ಷಕ್ಕೂ ಅಧಿಕ, ಆದ್ರೂ ಟ್ಯಾಕ್ಸ್ ಕಟ್ಟಲ್ಲ ಎಂದ ಮಹಿಳೆ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
My maid is succha cutie😭😭😭 pic.twitter.com/g8ghctT8GH
— Richa🌸 (@rich_athinks) July 8, 2025
ಈ ಪೋಸ್ಟ್ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಅವಳ ನಂಬರ್ ಕಳುಹಿಸಿ, ನಾನು ಅವಳಿಗೆ ಹೊಸ ಕೆಲಸ ಕೊಡಿಸುವೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕೆಲಸದಾಕೆಗೆ ಒಳ್ಳೆಯ ಸಂಸ್ಕಾರ ಇದೆ. ನಮ್ಮಲ್ಲಿ ಮನೆಕೆಲಸದಾಕೆ ರಜೆ ಹಾಕಿದ್ರು ಕನಿಷ್ಠ ಪಕ್ಷ ತಿಳಿಸುವುದಿಲ್ಲ, ನಾವೇ ಕರೆ ಮಾಡಿ ಕೇಳಿ ಕನ್ಫರ್ಮ್ ಮಾಡಿಕೊಳ್ಳಬೇಕು ಎಂದಿದ್ದಾರೆ. ಇವರಷ್ಟು ಚೆನ್ನಾಗಿ ನಾನು ಇಂಗ್ಲಿಷ್ ಮಾತನಾಡಲ್ಲ, ಒಳ್ಳೆಯ ಪ್ರಯತ್ನ ಮುಂದುವರೆಯಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








