AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತನ್ನ ಮನೆಯ ಅಡುಗೆ ಭಟ್ಟರ ಮನೆಯಲ್ಲೂ ಅಡುಗೆ ಕೆಲಸಕ್ಕೆ ಜನ ಇರುವ ವಿಷಯ ತಿಳಿದು ಬೆಂಗಳೂರಿನ ನಿವಾಸಿ ಶಾಕ್‌

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಕೆಲವೊಂದು ಇಂಟರೆಸ್ಟಿಂಗ್‌ ಸ್ಟೋರಿಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಪೋಸ್ಟ್‌ ಒಂದು ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಅಡುಗೆ ಭಟ್ಟರು ಕೂಡಾ ಅವರ ಮನೆಯಲ್ಲಿನ ಅಡುಗೆ ಕೆಲಸಕ್ಕೆ ಜನ ಇಟ್ಟುಕೊಂಡಿದ್ದಾರೆ ಎಂಬ ಶಾಕಿಂಗ್‌ ಕಥೆಯನ್ನು ಹಂಚಿಕೊಂಡಿದ್ದಾರೆ.

Viral: ತನ್ನ ಮನೆಯ ಅಡುಗೆ ಭಟ್ಟರ ಮನೆಯಲ್ಲೂ ಅಡುಗೆ ಕೆಲಸಕ್ಕೆ ಜನ ಇರುವ ವಿಷಯ ತಿಳಿದು ಬೆಂಗಳೂರಿನ ನಿವಾಸಿ ಶಾಕ್‌
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Oct 25, 2024 | 3:27 PM

Share

ಸಾಮಾನ್ಯವಾಗಿ ಶ್ರೀಮಂತರು ಅಥವಾ ಸ್ಥಿತಿವಂತರು ತಮಗೆ ಅನುಕೂಲವಾಗುವಂತೆ ಅಡುಗೆ ಕೆಲಸಕ್ಕೆ ಹಾಗೂ ಮನೆ ಸ್ವಚ್ಛಗೊಳಿಸುವ ಕೆಲಸಕ್ಕೆ ಜನಗಳನ್ನು ನೇಮಿಸಿಕೊಳ್ಳುತ್ತಾರೆ. ಈ ಕೆಲಸಗಾರರು ತಮ್ಮ ಧಣಿಗಳ ಮನೆಯಲ್ಲಿ ಮಾತ್ರವಲ್ಲದೆ ಕೆಲಸ ಮಾಡಿ ಎಷ್ಟೇ ಸುಸ್ತಾಗಿದ್ರೂ ತಮ್ಮ ಮನೆಯ ಕ್ಲೀನಿಂಗ್‌, ಅಡುಗೆ ಕೆಲಸಗಳನ್ನೂ ಅವರೇ ಮಾಡುತ್ತಾರೆ. ಆದ್ರೆ ಬೆಂಗಳೂರಿನ ವ್ಯಕ್ತಿಯೊಬ್ಬರ ಮನೆಯಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುವ ವ್ಯಕ್ತಿಯ ಮನೆಯಲ್ಲೂ ಅಡುಗೆ ಮಾಡಲೆಂದೇ ಕೆಲಸದವರಿದ್ದಾರಂತೆ. ಈ ಶಾಕಿಂಗ್‌ ಸ್ಟೋರಿಯನ್ನು ಅವರು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ರೆಡ್ಡಿಡ್‌ನಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಮನೆಯ ಅಡುಗೆ ಭಟ್ಟರು ಕೂಡಾ ಅವರ ಮನೆಯ ಅಡುಗೆ ಕೆಲಸಕ್ಕೆ ಜನ ಇಟ್ಕೊಂಡ ವಿಷಯ ತಿಳಿದು ಬೆಂಗಳೂರಿನ ವ್ಯಕ್ತಿಯೊಬ್ಬರು ಶಾಕ್‌ ಆಗಿದ್ದಾರೆ. ಈ ಇಂಟರೆಸ್ಟಿಂಗ್‌ ಸ್ಟೋರಿಯನ್ನು r/bangalore ಹೆಸರಿನ ರೆಡ್ಡಿಡ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ತನ್ನ ಮನೆಯ ಅಡುಗೆ ಭಟ್ಟ ಕೂಡಾ ಮನೆ ಕೆಲಸಕ್ಕೆ ಜನ ಇಟ್ಟುಕೊಂಡಿದ್ದಾರೆ ಎಂದು ಬರೆದಿರುವ ದೃಶ್ಯವನ್ನು ಕಾಣಬಹುದು.

ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಮನೆಯ ಅಡುಗೆ ಭಟ್ಟರ ಬಳಿ ಇಲ್ಲೇ ಹತ್ತಿರದಲ್ಲಿ ಯಾರಾದ್ರೂ ಮನೆ ಕೆಲಸದವರು ನಿಮಗೆ ಪರಿಚಯವಿದ್ದಾರಾ ಎಂದು ಕೇಳಿದ್ದಾರೆ. ಆ ಸಂದರ್ಭದಲ್ಲಿ ಅಡುಗೆ ಭಟ್ಟರು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ ಬಗ್ಗೆ ಹೇಳುತ್ತಾರೆ. ಮನೆ ಕೆಲಸ ಮಾಡಲು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಆಕೆ 3,000 ರೂ. ಪಡೆಯುತ್ತಿದ್ದಳು ಅಂತ ಹೇಳ್ತಾರೆ. ಅರೇ ನಮ್ಮ ಮನೆ 2bhk ಮನೆಗೆ ಹಿಂದಿನ ಸೇವಕಿ ಕೇವಲ 2000 ಮಾತ್ರ ಪಡೆಯುತ್ತಿದ್ದಳು ಎಂದು ಈ ವ್ಯಕ್ತಿ ಹೇಳುತ್ತಾ, ನಾನು ಕೇವಲ 1000 ಸಾವಿರ ರೂ. ಸಂಬಳ ಕೊಡಲು ಎಷ್ಟೆಲ್ಲಾ ಚೌಕಾಸಿ ಮಾಡ್ತಿದ್ದೇನೆ ಅಲ್ವಾ ಎಂದು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: 1.5 ಲಕ್ಷ ರೂ. ತಲುಪಿದ ಬೆಂಗಳೂರಿನ ನರ್ಸರಿ, ಎಲ್‌ಕೆಜಿ ಸ್ಕೂಲ್‌ ಫೀಸ್; ವೈರಲ್‌ ಆಯ್ತು ದುಬಾರಿ ಶುಲ್ಕ ವಿವರ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇನ್‌ ಹೇಳ್ತಿರಾ, ನನ್ನ ಸಹದ್ಯೋಗಿಯೊಬ್ಬರ ಮನೆಯಲ್ಲಿ ಅಡುವ ಕೆಲಸ ಮಾಡುವವರು ವರ್ಷಕ್ಕೆ 3 ಲಕ್ಷಕ್ಕಿಂತೂ ಹೆಚ್ಚು ಸಂಪಾದನೆ ಮಾಡ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಅಡುಗೆ ಭಟ್ಟರ ಅಡುಗೆ ಕೆಲಸದವರು ಕೂಡಾ ತಮ್ಮ ಮನೆಯ ಅಡುಗೆ ಕೆಲಸಕ್ಕೆ ಜನ ಇಟ್ಕೊಂಡಿದ್ರೆ ಹೇಗಿರ್ಬೋದಲ್ವಾʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ