Viral: ಛೀ ಛೀ… ಕೊಚ್ಚೆ ನೀರಲ್ಲಿ ನಿಂಬೆ ಜ್ಯೂಸ್ ಮಾಡಿ ಕುಡಿದ ಆಸಾಮಿ
ಸೋಷಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಫೇಮಸ್ ಆಗ್ಬೇಕು ಅಂತ ಈ ಕೆಲ ಜನರು ಚಿತ್ರ ವಿಚಿತ್ರ ಸಾಹಸಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಆಸಾಮಿ ರೀಲ್ಸ್ ಮಾಡುವ ಸಲುವಾಗಿ ಕೊಚ್ಚೆ ನೀರಿಗೆ ನಿಂಬೆ ರಸ ಬೆರೆಸಿ ಅದನ್ನು ಗಟ ಗಟನೇ ಕುಡಿದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಹೀಗೆ ಹುಚ್ಚಾಟ ಮೆರೆಯುವವರನ್ನು ಮೊದಲು ಒದ್ದು ಒಳಗೆ ಹಾಕ್ಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಚಿತ್ರ ವಿಚಿತ್ರ ವಿಡಿಯೋಗಳನ್ನು ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಾ ಹುಚ್ಚು ರೀಲ್ಸ್ ಮಾಡುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದರವರು ಹಲವರಿದ್ದಾರೆ. ಅಂತಹವರಲ್ಲಿ ಪುನೀತ್ ಸೂಪರ್ ಸ್ಟಾರ್ ಕೂಡಾ ಒಬ್ಬ. ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಈತ ತನ್ನ ವಿಲಕ್ಷಣ ಹಾಗೂ ವಿಚಿತ್ರ ವರ್ತನೆಯಿಂದಲೇ ಫೇಮಸ್ ಆದವನು. ಅನೇಕ ಬಾರೀ ಈತನ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ. ಇದೀಗ ಅಂಹದ್ದೇ ವಿಡಿಯೋ ವೈರಲ್ ಆಗಿದ್ದು, ಈತ ಕೊಚ್ಚೆ ನೀರಿಗೆ ನಿಂಬೆ ರಸವನ್ನು ಬೆರೆಸಿ, ಅದನ್ನು ಜ್ಯೂಸ್ ಕುಡಿದಂತೆ ಗಟ ಗಟನೇ ಕುಡಿದಿದ್ದಾನೆ. ಈ ದೃಶ್ಯ ಕಂಡು ಹೀಗೆ ಹುಚ್ಚಾಟ ಮೆರೆಯುವವರನ್ನು ಮೊದಲು ಒದ್ದು ಒಳಗೆ ಹಾಕ್ಬೇಕು ಎಂದು ನೋಡುಗರು ಕಿಡಿ ಕಾರಿದ್ದಾರೆ.
ಈ ಕುರಿತ ವಿಡಿಯೋವೊಂದನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಪುನೀತ್ ಸೂಪರ್‌ಸ್ಟಾರ್ ಕೊಚ್ಚೆ ನೀರಿನಲ್ಲಿ ನಿಂಬೆ ಜ್ಯೂಸ್ ಮಾಡುವಂತಹ ದೃಶ್ಯವನ್ನು ಕಾಣಬಹುದು. ಕೊಚ್ಚೆ ನೀರಿನ ಪಕ್ಕ ಕುಳಿತ ಆತ ಒಂದು ಗ್ಲಾಸ್‌ಗೆ ನಿಂಬೆ ರಸವನ್ನು ಸೇರಿಸಿ, ಬಳಿಕ ಅದಕ್ಕೆ ಚರಂಡಿಯ ನೀರನ್ನು ಬೆರೆಸಿ ಕ್ಯಾರೇ ಅನ್ನದೇ ಅದನ್ನು ಗಟ ಗಟನೇ ಕುಡಿದಿದ್ದಾನೆ.
ಇದನ್ನೂ ಓದಿ: ತನ್ನ ಮನೆಯ ಅಡುಗೆ ಭಟ್ಟರ ಮನೆಯಲ್ಲೂ ಅಡುಗೆ ಕೆಲಸಕ್ಕೆ ಜನ ಇರುವ ವಿಷಯ ತಿಳಿದು ಬೆಂಗಳೂರಿನ ನಿವಾಸಿ ಶಾಕ್
ಅಕ್ಟೋಬರ್ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದಯವಿಟ್ಟು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ, ಯಾಕಂದ್ರೆ ಮಕ್ಕಳು ಕೂಡಾ ಇತನನ್ನು ಅನುಸರಿಸುವ ಸಾಧ್ಯತೆ ಇರುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವನೆಂಥಾ ಅಸಹ್ಯಕರ ಮನುಷ್ಯʼ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ