Viral: ಏನು ಆರ್ಡರ್‌ ಮಾಡದೆಯೇ ಮಹಿಳೆಗೆ ಪಾರ್ಸೆಲ್‌ ಡೆಲಿವರಿಗಾಗಿ ಬಂತು ಕರೆ; ಮುಂದೇನಾಯ್ತು ನೋಡಿ

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಬಗೆಯ ಸ್ಕ್ಯಾಮ್‌ಗಳು ಹುಟ್ಟಿಕೊಳ್ಳುತ್ತಿವೆ. ಹಲವರು ಇಂತಹ ಸ್ಕ್ಯಾಮ್‌ಗಳಿಗೆ ಬಲಿಯಾಗಿ ಹಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ರು ಮಹಿಳೆ ಹೊಸ ಬಗೆಯ ಪಾರ್ಸೆಲ್‌ ಸ್ಕ್ಯಾಮ್‌ನಿಂದ ಬೆಚ್ಚಿ ಬಿದ್ದಿದ್ದಾರೆ. ಹೌದು ಏನು ಆರ್ಡರ್‌ ಮಾಡದೆಯೇ ಮಹಿಳೆ ಸ್ವಿಗ್ಗಿ ಡೆಲಿವರಿ ಏಜೆಂಟ್‌ನಿಂದ ಕರೆಯನ್ನು ಸ್ವೀಕರಿಸಿದ್ದು, ಏನು ಆರ್ಡರ್‌ ಮಾಡದೆ ಅದು ಹೇಗೆ ಆತ ಪಾರ್ಸೆಲ್‌ ಇದೆ ಎಂದು ಕರೆ ಮಾಡಿದ ಎಂದು ಮಹಿಳೆ ಆತಂಕಗೊಂಡಿದ್ದಾರೆ. ಈ ಕುರಿತ ಸ್ಟೋರಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಏನು ಆರ್ಡರ್‌ ಮಾಡದೆಯೇ ಮಹಿಳೆಗೆ ಪಾರ್ಸೆಲ್‌ ಡೆಲಿವರಿಗಾಗಿ ಬಂತು ಕರೆ; ಮುಂದೇನಾಯ್ತು ನೋಡಿ
ಸಾಂದರ್ಭಿಕ ಚಿತ್ರ
Edited By:

Updated on: Feb 07, 2025 | 11:40 AM

ಇತ್ತೀಚಿನ ದಿನಗಳಲ್ಲಿ ವಂಚನೆಗಳ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಂಚಕರು ಜನರಿಂದ ಹಣವನ್ನು ಪೀಕಲು ಹಲವು ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮೆಸೇಜ್‌, ಕರೆಗಳನ್ನು ಮಾಡುವ ಮೂಲಕ ಜನರನ್ನು ಮೋಸದ ಜಾಲಕ್ಕೆ ಸಿಲುಕಿಸಿ ಸ್ಕ್ಯಾಮರ್ಸ್‌ ಹಣ ದೋಚುತ್ತಿದ್ದಾರೆ. ಅದೇ ರೀತಿ ಇದೀಗ ಹೊಸ ಬಗೆಯ ವಂಚನೆಯ ಸುದ್ದಿಯೊಂದು ವೈರಲ್‌ ಆಗಿದ್ದು, ಸ್ಕ್ಯಾಮರ್ಸ್‌ ಮಹಿಳೆಯೊಬ್ಬರಿಗೆ ಸ್ವಿಗ್ಗಿ ಡೆಲಿವರಿ ಏಜೆಂಟ್‌ ಸೋಗಿನಲ್ಲಿ ಕರೆಯನ್ನು ಮಾಡಿದ್ದಾರೆ. ಹೌದು ಏನು ಆರ್ಡರ್‌ ಮಾಡದೆಯೇ ಮಹಿಳೆ ಸ್ವಿಗ್ಗಿ ಡೆಲಿವರಿ ಏಜೆಂಟ್‌ನಿಂದ ಕರೆಯನ್ನು ಸ್ವೀಕರಿಸಿದ್ದು, ಏನು ಆರ್ಡರ್‌ ಮಾಡದೆ ಅದು ಹೇಗೆ ಆತ ಪಾರ್ಸೆಲ್‌ ಇದೆ ಎಂದು ಕರೆ ಮಾಡಿದ ಎಂದು ಮಹಿಳೆ ಆತಂಕಗೊಂಡಿದ್ದಾರೆ. ಈ ಕುರಿತ ಸ್ಟೋರಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಬೆಂಗಳೂರಿನ ಮಹಿಳೆಯೊಬ್ಬರಿಗೆ ಯಾರೋ ಸ್ವಿಗ್ಗಿ ಡೆಲಿವರಿ ಏಜೆಂಟ್‌ ಎಂದು ಹೇಳಿ ಕರೆ ಮಾಡಿದ್ದು, ಆರ್ಡರ್‌ ಮಾಡದೆಯೇ ಗೊಂದಲಕ್ಕೊಳಗಾಗಿದ್ದ ಮಹಿಳೆ ನಂತರ ಪಾರ್ಸೆಲ್‌ ಬಾಗಿಲಿನ ಬಳಿ ಇಡಿ ಎಂದು ಹೇಳಿದರೂ ಅಲ್ಲಿ ಯಾವುದೇ ಪಾರ್ಸೆಲ್‌ ಇಲ್ಲದ್ದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ರೆಡ್ಡಿಟ್‌ನಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಶೇರ್‌ ಮಾಡಲಾಗಿದೆ.

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

A strange incident happened in bangalore
byu/Subject-Fisherman-90 inbangalore

@Subject-Fisherman-90 ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಬಳಕೆದಾರರೊಬ್ಬರು ಈ ಕುರಿತ ಪೋಸ್ಟ್‌ ಒಂದನ್ನು ಶೇರ್‌ ಮಾಡಲಾಗಿದ್ದು, ”ಇಂದು ಮಧ್ಯಾಹ್ನ ನನ್ನ ಗೆಳತಿಗೆ ಒಬ್ಬ ವ್ಯಕ್ತಿಯಿಂದ ಕರೆ ಬಂತು, ಅವನು ಸ್ವಿಗ್ಗಿಯಿಂದ ಕರೆ ಮಾಡಿರುವುದಾಗಿ ಹೇಳಿದ್ದು, ಪಾರ್ಸೆಲ್‌ ಇದೆ ಬಾಗಿಲು ತೆರೆಯಿರಿ ಎಂದು ಹೇಳಿದ್ದಾನೆ. ಆದ್ರೆ ಆಕೆ ವಾಸಿಸುವ ಅಪಾರ್ಟ್‌ಮೆಂಟ್‌ಗೆ ಆಕೆಯ ಅಧಿಸೂಚನೆಯಿಲ್ಲದೆ ಯಾರನ್ನು ಒಳಗೆ ಬಿಡುವುದಿಲ್ಲ. ಯಾವುದೇ ಸೂಚನೆ ಬಾರದೆ ಅದು ಹೇಗೆ ಆತ ಒಳ ಬಂದ ಎಂದು ಆಕೆ ಗೊಂದಲಕ್ಕೆ ಒಳಗಾದಳು. ವಿಚಿತ್ರವೇನೆಂದರೆ ಆಕೆ ಏನನ್ನು ಕೂಡಾ ಆರ್ಡರ್‌ ಮಾಡೇ ಇಲ್ಲ. ಅಷ್ಟೇ ಅಲ್ಲದೆ ಆಕೆ ಮನೆಯಲ್ಲಿ ಇರಲಿಲ್ಲ. ಅದಕ್ಕಾಗಿ ಬಾಗಿಲಿನ ಬಳಿ ಪಾರ್ಸೆಲ್‌ ಇಟ್ಟು ಹೋಗಿ ಎಂದು ಹೇಳಿದ್ದಾಳೆ. ಮನೆಗೆ ಹೋಗಿ ನೋಡಿದಾಗ ಅಲ್ಲಿ ಯಾವುದೇ ಪಾರ್ಸೆಲ್‌ ಇರಲಿಲ್ಲ. ಇದನ್ನೆಲ್ಲಾ ನೋಡಿದಾಗ ಏನೋ ಸರಿಯಿಲ್ಲ ಅನಿಸುತ್ತಿದೆ. ಬೇರೆ ಯಾರಿಗಾದರೂ ಇದೇ ರೀತಿಯ ಅನುಭವವಾಗಿದೆಯೇ” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸಂಬಳ ಎಷ್ಟಿದ್ದರೇನಂತೆ, ಹುಡುಗ್ರು ಸಿಂಪಲ್ ಎನ್ನುವುದಕ್ಕೆ ಈ ವ್ಯಕ್ತಿಗಿಂತ ಬೇರೆ ಉದಾಹರಣೆ ಬೇಕಿಲ್ಲ ಬಿಡಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾ ಅನುಮಾನಾಸ್ಪದವಾಗಿದೆ ಸಿಸಿ ಟಿವಿಯನ್ನು ಪರಿಶೀಲಿಸಿ ಯಾರಾದರೂ ಬಂದಿದ್ದಾರೆಯೇ ಎಂದು ಗೊತ್ತಾಗುತ್ತದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗೂ ಈ ರೀತಿಯ ವಿಚಿತ್ರ ಅನುಭವವಾಗಿತ್ತು, ಯಾರೋ ಅಮೆಜಾನ್‌ ಪಾರ್ಸೆಲ್‌ ಇದೆ ಎಂದು ಕರೆ ಮಾಡಿದ್ದರುʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ