ದೀಪಾವಳಿ ಹಬ್ಬದಂದು ಒಂಟಿಯಾಗಿ ಬೇಸರದಲ್ಲಿದ್ದಾಗ ತನ್ನ ಮೊಗದಲ್ಲಿ ನಗು ತರಿಸಿದ ಡೆಲಿವರಿ ಬಾಯ್‌ನ ನೆನೆದ ಬೆಂಗಳೂರಿನ ಮಹಿಳೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 28, 2024 | 6:11 PM

ನಮ್ಮ ಒಂದು ಸಣ್ಣ ನಗು, ದಯೆ ಮನೋಭಾವ ಇನ್ನೊಬ್ಬರ ದಿನವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆಯಂತಿರುವ ಕಥೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ದೀಪಾವಳಿಯ ಶುಭ ದಿನದಂದು ತುಂಬಾನೇ ಬೇಸರದಲ್ಲಿದ್ದಾಗ ಡೆಲಿವರಿ ಬಾಯ್‌ ಬೀರಿದ ಆ ಒಂದು ಕಿರು ನಗೆ ತನ್ನ ದಿನವನ್ನು ಹೇಗೆ ಬದಲಿಸಿತು ಎಂಬ ಭಾವುಕ ಪೋಸ್ಟ್‌ ಒಂದನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ.

ದೀಪಾವಳಿ ಹಬ್ಬದಂದು ಒಂಟಿಯಾಗಿ ಬೇಸರದಲ್ಲಿದ್ದಾಗ ತನ್ನ ಮೊಗದಲ್ಲಿ ನಗು ತರಿಸಿದ ಡೆಲಿವರಿ ಬಾಯ್‌ನ ನೆನೆದ ಬೆಂಗಳೂರಿನ ಮಹಿಳೆ
ವೈರಲ್​​​ ಪೋಸ್ಟ್​
Follow us on

ಇನ್ನೇನೂ ದೀಪಾವಳಿ ಹಬ್ಬ ಬಂದೇ ಬಿಡ್ತು. ಹೆಚ್ಚಿನವರು ಶಾಪಿಂಗ್‌, ಮನೆ ಕ್ಲೀನಿಂಗ್‌ ಅಂತೆಲ್ಲಾ ಹಬ್ಬದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ಒಂದು ಸಣ್ಣ ನಗು, ದಯೆ ತನ್ನ ದಿನವನ್ನು ಹೇಗೆ ಬೆಳಗಿಸಿತು, ಬದಲಾಯಿಸಿತು ಎಂಬ ಸ್ಟೋರಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ದೀಪಾವಳಿಯ ಶುಭ ದಿನದಂದು ಒಂಟಿಯಾಗಿ ಬಹಳ ಬೇಸರದಲ್ಲಿದ್ದ ಸಂದರ್ಭದಲ್ಲಿ ಬಂದ ಫುಡ್‌ ಡೆಲಿವರಿ ಬಾಯ್‌ ದೀಪಾವಳಿ ಹಬ್ಬದ ಶುಭ ಕೋರಿ, ಒಂದು ಸಣ್ಣ ಕಿರು ನಗೆಯೊಂದಿಗೆ ಪಾರ್ಸೆಲ್‌ ಕೊಡುತ್ತಾನೆ. ಆತನ ಈ ಸಣ್ಣ ನಡೆ ತನ್ನ ಮೊಗದಲ್ಲಿ ನಗು ತರಿಸಿತು ಮತ್ತು ತನ್ನ ದಿನವನ್ನು ಉತ್ತಮ ರೀತಿಯಲ್ಲಿ ಬದಲಿಸಿತು ಎಂಬ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

Neend App ಸಂಸ್ಥಾಪಕಿ ಸುರಭಿ ಜೈನ್‌ (surabhikjain) ತಮ್ಮ ಈ ಸ್ಟೋರಿಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ದಿನವನ್ನು ಬೆಳಗುವವರಿಗೆ ನಾವು ದಯೆಯನ್ನು ತೋರಲು ಮರೆಯದಿರೋಣ ಎಂಬ ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಐದು ವರ್ಷಗಳ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅವರ ಸ್ನೇಹಿತರು, ಫ್ಲಾಟ್‌ಮೇಟ್‌ಗಳು ಎಲ್ಲರೂ ದೀಪಾವಳಿ ಹಬ್ಬದ ಆಚರಣೆಗೆ ಅವರವರ ಊರುಗಳಿಗೆ ಹೋಗಿದ್ದರು, ಆದ್ರೆ ಸುರಭಿ ಮಾತ್ರ ಬೆಂಗಳೂರಿನಲ್ಲಿದ್ದರು. ಈ ಒಂಟಿ ದೀಪಾವಳಿಯನ್ನು ಹೇಗೆ ಆಚರಿಸುವುದು ಎಂದು ಬಹಳ ಬೇಸರದಿಂದ ಕುಳಿತಿದ್ದಂತಹ ಸಂದರ್ಭದಲ್ಲಿ ಫುಡ್‌ ಪಾರ್ಸೆಲ್‌ ಕೊಡಲು ಬಂದ ಡೆಲಿವರಿ ಬಾಯ್‌ ರಮೇಶ್‌ ಸುರಭಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿ, ಕಿರು ನಗೆಯೊಂದಿಗೆ ಪಾರ್ಸೆಲ್‌ ಕೊಟ್ಟು ಹೋಗುತ್ತಾನೆ. ಆ ದಿನ ಸುರಭಿಗೆ ಆ ವ್ಯಕ್ತಿ ಮಾತ್ರ ಹಬ್ಬದ ಶುಭಾಶಯಗಳನ್ನು ಕೋರಿದ್ದು, ರಮೇಶ್‌ನ ಈ ಒಂದು ನಡೆ ಬೇಸರದಲ್ಲಿದ್ದ ನನ್ನ ಮೊಗದಲ್ಲಿ ನಗು ತರಿಸಿತು. ಹೀಗೆ ನಮ್ಮ ದಿನವನ್ನು ಬೆಳಗುವವರಿಗೆ ನಾವು ದಯೆಯನ್ನು ತೋರಲು ಮರೆಯದಿರೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಸು ಸಾಕಲು ಕಾರ್‌ ಶೆಡ್ಡನ್ನು ಕೌ ಶೆಡ್‌ ಆಗಿ ಪರಿವರ್ತಿಸಿದ ಮೈಸೂರಿನ ಕುಟುಂಬ; ಇಲ್ಲಿದೆ ನೋಡಿ ವಿಡಿಯೋ

ಅಕ್ಟೋಬರ್‌ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜ ಅಲ್ವಾ ದಯೆಯ ಒಂದು ಸಣ್ಣ ಕಾರ್ಯ ಬಹುದೊಡ್ಡ ಧನಾತ್ಮಕ ವ್ಯತ್ಯಾಸವನ್ನು ಉಂಟು ಮಾಡುತ್ತದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಬ್ಬ ಹರಿದಿನಗಳಲ್ಲಿ ಒಬ್ಬಂಟಿಯಾಗಿರುವುದು ನಿಜಕ್ಕೂ ಕಷ್ಟಕರʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ