ಆ ಭಾಷೆ ನಮ್ಮಿಬ್ಬರ ಬಾಂಧವ್ಯವನ್ನು ಉತ್ತಮಗೊಳಿಸಿತು; ಬೆಂಗಳೂರಿನ ಗಂಡ-ಹೆಂಡ್ತಿ ಸಂಬಂಧ ಬಲಗೊಳಿಸಿದ ಭಾಷಾ ಕಥೆ

ತೆಲುಗು ಮೂಲದ ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಹಿಂದಿ ಭಾಷೆ ನಮ್ಮಿಬ್ಬರ ಬಾಂಧವ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡಿತು ಎಂದು ಹೇಳಿದ್ದಾರೆ. ಹೌದು ತೆಲುಗು ಮೂಲದ ಆ ಮಹಿಳೆ ತಮಿಳು ಮೂಲದ ತಮ್ಮ ಗಂಡನ ಜೊತೆ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರಂತೆ. ಮಾತೃ ಭಾಷೆಯನ್ನು ಹೊರತುಪಡಿಸಿ ಇತರೆ ಭಾರತೀಯ ಭಾಷೆಯನ್ನು ಕಲಿಯಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಆ ಭಾಷೆ ನಮ್ಮಿಬ್ಬರ ಬಾಂಧವ್ಯವನ್ನು ಉತ್ತಮಗೊಳಿಸಿತು; ಬೆಂಗಳೂರಿನ ಗಂಡ-ಹೆಂಡ್ತಿ ಸಂಬಂಧ ಬಲಗೊಳಿಸಿದ ಭಾಷಾ ಕಥೆ
ಸಾಂದರ್ಭಿಕ ಚಿತ್ರ
Edited By:

Updated on: Jan 13, 2025 | 5:40 PM

ಜನ ತಮಗಾದ ಖುಷಿಯ ವಿಚಾರಗಳ ಬಗ್ಗೆ, ನೋವಿನ ಸಂಗತಿಗಳ ಬಗ್ಗೆ, ಸಮಾಜದಲ್ಲಿ ನಡೆಯುವ ಸರಿ-ತಪ್ಪುಗಳ ವಿಷಯಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ತೆಲುಗು ಮೂಲದ ಮಹಿಳೆ ಅವರು ಹಾಗೂ ಅವರ ಗಂಡನ ನಡುವಿನ ಬಾಂಧವ್ಯವನ್ನು ಉತ್ತಮಗೊಳಿಸಲು ಹಿಂದಿ ಭಾಷೆ ಹೇಗೆ ಸಹಾಯ ಮಾಡಿತು ಎಂಬ ಬಗ್ಗೆ ವಿಶೇಷ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ನಾನು ತೆಲುಗಿನವಳಾಗಿದ್ದರೆ, ನನ್ನ ಪತಿ ತಮಿಳು ಮೂಲದವರು. ನಾವಿಬ್ಬರೂ ಹಿಂದಿಯಲ್ಲಿಯೇ ಮಾತನಾಡುತ್ತೇವೆ. ಮಾತೃ ಭಾಷೆಯನ್ನು ಹೊರತುಪಡಿಸಿ ಇತರ ಭಾರತೀಯ ಭಾಷೆಗಳನ್ನು ಸಹ ಕಲಿಯಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗು ಮೂಲದ ಸಾಯಿ ಸ್ವರೂಪ ಐಯ್ಯರ್‌ ಎಂಬ ಮಹಿಳೆ ಗಂಡ-ಹೆಂಡ್ತಿ ಸಂಬಂಧವನ್ನು ಬಲಗೊಳಿಸಲು ಹಿಂದಿ ಹೇಗೆ ಸಹಾಯ ಮಾಡಿತು ಎಂಬುದನ್ನು ಹೇಳಿಕೊಂಡಿದ್ದಾರೆ. ಸಾಯಿ ಸ್ವರೂಪ ತೆಲುಗು ಮೂಲದವರಾಗಿದ್ದರೆ, ಅವರ ಪತಿ ತಮಿಳಿಗ. ಇಂತಹ ಸಂದರ್ಭದಲ್ಲಿ ಭಾಷಾ ಅಡೆತಡೆಗಳು ಬರುವುದು ಸಾಮಾನ್ಯ. ಹೀಗಿರುವಾಗ ಈ ಇಬ್ಬರೂ ಇಂಗ್ಲೀಷ್‌ ಭಾಷೆಯಲ್ಲಿ ಪರಸ್ಪರ ಮಾತನಾಡದೇ ಭಾರತೀಯ ಭಾಷೆಗಳಲ್ಲಿ ಒಂದಾದ ಹಿಂದಿ ಭಾಷೆಯಲ್ಲಿ ಪರಸ್ಪರ ಮಾತನಾಡುವ ಮೂಲಕ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದಾರಂತೆ.

ವೈರಲ್​​ ಪೋಸ್ಟ್ ಇಲ್ಲಿದೆ ನೋಡಿ:


“ನಾನು ತೆಲುಗು, ನನ್ನ ಪತಿ ತಮಿಳಿಗ. ನಮ್ಮಿಬ್ಬರಿಗೂ ಒಬ್ಬರೊಬ್ಬರ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೆವು ಆದರೆ ಮಾತನಾಡಲು ಸಾಧ್ಯವಾಗಿಲ್ಲ. ನಮ್ಮಿಬ್ಬರಿಗೂ ಹಿಂದಿ ಭಾಷೆ ಚೆನ್ನಾಗಿಯೇ ಗೊತ್ತಿತ್ತು. ಹೀಗೆ ಈ ಹಿಂದೆ ನಮ್ಮ ಬಾಂಧವ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡಿತು. ಮನೆಯೊಳಗಡೆ ಇಂಗ್ಲಿಷ್ ಮಾತನಾಡುವುದು ವಿಚಿತ್ರವೆನಿಸುತ್ತಿತ್ತು. ಆದ ಕಾರಣ ನಾವು ಹಿಂದಿಯಲ್ಲಿಯೇ ಮಾತನಾಡುತ್ತೇವೆ. ಮಾತೃಭಾಷೆಯನ್ನು ಹೊರತು ಪಡಿಸಿ ಇತರ ಭಾರತೀಯ ಭಾಷೆಯನ್ನು ಕಲಿಯಲು ನಾನು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತೇನೆ.

ಅದೇ ಸಮಯದಲ್ಲಿ ಬೆಂಗಳೂರಿನಲ್ಲಿರುವ ಸ್ಥಳೀಯರು ನಮ್ಮೊಂದಿಗೆ ಹಿಂದಿಯೇ ಮಾತನಾಡಬೇಕೆಂದು ಬೇರೆ ಊರುಗಳಿಂದ ಇಲ್ಲಿಗೆ ಬಂದ ಜನ ಬಯಸುತ್ತಿದ್ದಾರೆ ಅಲ್ವಾ ಅದು ಬೇಸರ ತಂದಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೊಂಗಲ್‌ ಆಚರಣೆಗೆ ಪಂಚೆಯುಟ್ಟು ಸಖತ್‌ ಸ್ಟೆಪ್ಸ್‌ ಹಾಕಿದ ಚೆಸ್‌ ಚಾಂಪಿಯನ್ಸ್;‌ ಮುದ್ದಾದ ವಿಡಿಯೋ ವೈರಲ್‌

Sai_swaroopa ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ 8.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ತಮಿಳು ಭಾಷೆಯನ್ನೇ ಕಲಿಯಬಹುದಿತ್ತಲ್ವಾʼ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದು ಹೇಗೆ ನೀವು ಇಂಗ್ಲಿಷ್‌ ವಿಚಿತ್ರ ಅಂತ ಭಾವಿಸುತ್ತೀರಿ. ಹೆಚ್ಚಿನ ಮನೆಗಳಲ್ಲಿ ಇಂಗ್ಲಿಷ್‌ ಭಾಷೆಯನ್ನೇ ಮಾತನಾಡುತ್ತಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೌದು ನಾವು ಮಾತೃ ಭಾಷೆಯ ಜೊತೆಗೆ ಇತರೆ ಸ್ಥಳೀಯ ಭಾಷೆಗಳನ್ನು ಕೂಡಾ ಕಲಿಯಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ