ಪ್ರಾಂಕ್ ಮಾಡುವವರಿಗೇನು ಕೊರತೆಯಿಲ್ಲ ಬಿಡಿ. ಇತ್ತೀಚೆಗಿನ ದಿನಗಳಲ್ಲಿ ವಿಡಿಯೋ ಶೂಟ್ ಮಾಡುತ್ತಾ ಜನರನ್ನು ಬಕ್ರಾ ಮಾಡಿ, ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕ್ರೈಸ್ಟ್ ಕಾಲೇಜ್ ಪ್ರೊಫೆಸರ್‌ಗೆ ವಿದ್ಯಾರ್ಥಿಗಳು ಪ್ರಾಂಕ್ ಮಾಡಿದ್ದಾರೆ
ಈ ವಿಡಿಯೋದಲ್ಲಿ ಪ್ರಾಧ್ಯಾಪಕರು ಬಂದು ಪಾಠ ಮಾಡುತ್ತಿದ್ದ ವೇಳೆಯಲ್ಲಿ ವಿದ್ಯಾರ್ಥಿಗಳ ನಡುವೆ ಜೋರು ಚರ್ಚೆ ನಡೆಯುತ್ತದೆ. ಇದು ಪ್ರಾಧ್ಯಾಪಕರು ಗಮನ ಸೆಳೆದಿದ್ದು, ಸಮಾಧಾನದಿಂದ ವಿದ್ಯಾರ್ಥಿಗಳ ಬಳಿ ಏನು ವಿಷಯ? ಎಂದು ವಿಚಾರಿಸುತ್ತಾರೆ. ಒಬ್ಬ ವಿದ್ಯಾರ್ಥಿನಿ ಇವರು ನನ್ನ ಮಾತು ಕೇಳುತ್ತನೇ ಇಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಅವರು, ಏನು ವಿಷಯ ಎಂದು ಕೇಳಿದಾಗ ಇಂಗ್ಲಿಷ್‌ನಲ್ಲಿ ಸರ್, ನೀವು ಮಲಗಿದ್ದೀರಾ? ಅಥವಾ ನೀವು ಮಲಗಬಹುದೇ? ಈ ಎರಡು ವಾಕ್ಯಗಳಲ್ಲಿ ಯಾವುದು ಸರಿ ಎಂದು ಕೇಳುತ್ತಾಳೆ. ಅದಕ್ಕೆ ನೀವು ಮಲಗಬಹುದು” ಎಂದು ಪ್ರಾಧ್ಯಾಪಕರು ಉತ್ತರಿಸಿದಾಗ, ಇಡೀ ಕ್ಲಾಸ್ ಮಲಗುವಂತೆ ನಟಿಸುತ್ತಾರೆ.
ಈ ವೇಳೆಯಲ್ಲಿ ಪ್ರಾಧ್ಯಾಪಕರಿಗೆ ಈ ವಿದ್ಯಾರ್ಥಿಗಳೇನು ಕಿತಾಪತಿ ಮಾಡುತ್ತಿರುವುದು ಗೊತ್ತಾಗುತ್ತದೆ. ನೀವು ಸೋಷಿಯಲ್ ಎಕ್ಸ್‌ಪರಿಮೆಂಟ್ ಮಾಡ್ತಾ ಇದ್ದೀರಾ? ಎಂದು ಕೇಳುತ್ತಾರೆ. ಪ್ರೊಫೆಸರ್ ಗೆ ವಿದ್ಯಾರ್ಥಿನಿಯು ವಿಡಿಯೋ ತೆಗೆಯುತ್ತಿರುವುದನ್ನು ಕಂಡು ಅವರೊಂದಿಗೆ ಕುಳಿತು ನಗುತ್ತಾ, “ನಾನು ರೀಲ್‌ನಲ್ಲಿದ್ದೇನೆಯೇ? ನಮಸ್ಕಾರ ಗೆಳೆಯರೇ!” ಅವರು ಮಾತನಾಡುವುದನ್ನು ಕಾಣಬಹುದು. ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರ ಸ್ನೇಹಭಾವವು ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.
ಇದನ್ನೂ ಓದಿ: ಮನುಷ್ಯರ ಸಹವಾಸ ಯಾಕ್ ಬೇಕಪ್ಪಾ, ಹಾವುಗಳೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ವ್ಯಕ್ತಿ
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ‘ಸೈಕ್ ಬಿ ‘ ಹೆಸರಿನ ಖಾತೆ ಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, “ಪೂಕಿ ಪ್ರೊಫೆಸರ್” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋವು 37 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ‘ಪ್ರೊಫೆಸರ್ ಎಂದರೆ ಹೀಗಿರಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ನಮ್ಮ ಪ್ರೊಫೆಸರ್ ಆದರೆ ಡಸ್ಟರ್‌ನಿಂದ ಪೆಟ್ಟ ಬೀಳುತ್ತಿತ್ತು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ