
ಬೆಂಗಳೂರು, ನವೆಂಬರ್ 25: ಈಗಿನ ದುಬಾರಿ ದುನಿಯಾದಲ್ಲಿ ಬದುಕೋದು ಕಷ್ಟ. ಗಂಡ ಹೆಂಡ್ತಿ ಇಬ್ಬರೂ ದುಡಿದ್ರೂ ದುಡ್ಡು ಉಳಿಯಲ್ಲ. ಹೀಗಿರುವಾಗ ಬೇರೆ ಮನೆಗೆ ಶಿಫ್ಟ್ ಆಗೋದು ಅಂದ್ರೆ ಸುಮ್ನೆ ಅಲ್ಲ. ನೀವೇನಾದ್ರು ಬೇರೆ ಮನೆಗೆ ಹೋಗಬೇಕು ಅಂದುಕೊಂಡಿದ್ರೆ ನಿಮ್ಮ ಜೇಬಿನಲ್ಲಿ ದುಡ್ಡು ಇಟ್ಟುಕೊಂಡಿರುವುದು ಒಳ್ಳೆಯದು. ಇದೀಗ ದಂಪತಿ ಬೆಂಗಳೂರು (Bengaluru) ನಗರದಲ್ಲಿ 3 ಬಿ ಹೆಚ್ ಕೆ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಳ್ಳಲು ದಂಪತಿ ಬರೋಬ್ಬರಿ 2.53 ಲಕ್ಷ ರೂ ಖರ್ಚು ಮಾಡಿದ್ದಾರಂತೆ. ಈ ದಂಪತಿ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ದಂಪತಿ ಹೇಳಿದ್ದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಅನಾ ಮಿಶ್ರಾ (anamishraa) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೇರೆ ಮನೆಗೆ ಶಿಫ್ಟ್ ಆಗಲು ತಗುಲಿದ ಖರ್ಚು ವೆಚ್ಚದ ಬಗ್ಗೆ ಹೇಳಿದ್ದಾರೆ. ಅದರ ಜತೆಗೆ ತನ್ನ ಗಂಡ ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಅದಕ್ಕೆ ಖರ್ಚಾದ ಮೊತ್ತದ ಬಗ್ಗೆ ವಿವರಿಸಿದ್ದಾರೆ.
ಈ ವಿಡಿಯೋದಲ್ಲಿ, ದಕ್ಷಿಣ ಬೆಂಗಳೂರಿನಲ್ಲಿ ತಮ್ಮ ಹೊಸ 3 ಬಿ ಹೆಚ್ ಕೆ ಅಪಾರ್ಟ್‌ಮೆಂಟ್ ಗೆ ನೀಡಿದ ಅಡ್ವಾನ್ಸ್ ಯೇ 1.5 ಲಕ್ಷ ರೂ. ಮನೆಗೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಬ್ರೋಕರೇಜ್ ಶುಲ್ಕವಾಗಿ 37,000 ರೂ ಪಾವತಿಸಿದೆವು. ಅದರ ಜತೆಗೆ ಒಂದು ತಿಂಗಳ ಬಾಡಿಗೆ 37,000 ರೂ ಆಗಿತ್ತು. ಬ್ರೋಕರ್ ಇಲ್ಲದೆಯೂ ಮನೆ ಹುಡುಕುವುದು ಕಷ್ಟಕರ. ಮನೆ ಹುಡುಕಾಟ ಜತೆಗೆ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ ಹೀಗಾಗಿ ಬ್ರೋಕರ್ ಸಹಾಯ ಪಡೆಯಲು ನಿರ್ಧರಿಸಿದ್ದೆವು ಎಂದಿದ್ದಾರೆ.
ನನ್ನ ಪತಿ ಕೋಲ್ಕತ್ತಾದಲ್ಲಿದ್ದ ಕಾರಣ ಅಲ್ಲಿಂದ ಬೆಂಗಳೂರಿಗೆ ಪೀಠೋಪಕರಣಗಳನ್ನು ಸಾಗಿಸಲು ತಗಲುವ ಖರ್ಚು ದೊಡ್ಡಾದಿತ್ತು. ಹಾಸಿಗೆ, ಶೂ ರ್ಯಾಕ್, ಡೈನಿಂಗ್ ಟೇಬಲ್, ಕಿಂಗ್ ಸೈಜ್ ಸೋಫಾವನ್ನು ಸಾಗಿಸಲು ಬ್ರೋಕರೇಜ್ ಪ್ಯಾಕರ್ಸ್ ಆಯಂಡ್ ಮೂವರ್ಸ್ ಸೇವೆ ಬಳಸಿಕೊಂಡೇವು. ಈ ಸೇವೆಗೆ 60,000 ರೂ ಆಯಿತು ಎಂದಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ತಮ್ಮ ಹಿಂದಿನ ಮನೆಯಿಂದ ಕೆಲವೊಂದು ವಸ್ತುಗಳನ್ನು ಹೊಸ ಮನೆಗೆ ಸಾಗಿಸಬೇಕಿತ್ತು. ಹೀಗಾಗಿ ಪೋರ್ಟರ್ ಸೇವೆ ಬಳಸಿಕೊಂಡೆವು. ಇದಕ್ಕಾಗಿ 3,000 ರೂ ಖರ್ಚು ಮಾಡಿದೆವು ಅದರ ಜತೆಗೆ ವಾಷಿಂಗ್ ಮೆಷಿನ್, ಫ್ರಿಜ್ ಮತ್ತು ನೀರು ಶುದ್ಧೀಕರಿಸುವ ಯಂತ್ರ ಎಲ್ಲವನ್ನು ಬಾಡಿಗೆಗೆ ಪಡೆದೆವು. ಹೀಗಾಗಿ ಮೂರೂ ವಸ್ತುಗಳ ಒಂದು ತಿಂಗಳ ಬಾಡಿಗೆ 2,800 ರೂ. ಮನೆಯ ವೈ-ಫೈ ಸಂಪರ್ಕವನ್ನು ಸ್ಥಳಾಂತರಿಸಲು 700 ರೂ ಬೇಕಾಯ್ತು. ಈ ಎಲ್ಲವನ್ನು ಒಟ್ಟು ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದಾಗ ಒಟ್ಟು ಮೊತ್ತ 2,53,500 ರೂ ದುಡ್ಡು ಖರ್ಚು ಆಯ್ತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಈ ಆರ್ಥಿಕ ಸಲಹೆ ಅನುಸರಿಸಿದ್ರೆ ಖರ್ಚುಗಳನ್ನು ನಿಯಂತ್ರಿಸಬಹುದು ಎಂದ ದಂಪತಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ, ಈ ಮೊತ್ತದಲ್ಲಿ ಸ್ವಂತ ಮನೆ ಖರೀದಿಸಲು ಮುಂಗಡವಾಗಿ ಪಾವತಿಸಬಹುದಿತ್ತು ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ನೀವು ಇಷ್ಟು ಹಣ ಖರ್ಚು ಮಾಡುವುದನ್ನು ನೋಡಿದ್ರೆ ಆರ್ಥಿಕ ಸಾಮರ್ಥ್ಯ ಚೆನ್ನಾಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ದೆಹಲಿ ಅಥವಾ ಮುಂಬೈನಲ್ಲಿ ಈ ವೆಚ್ಚವು ಇನ್ನೂ ಹೆಚ್ಚಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ