AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಿಂಗಳ ಸಂಬಳ 3 ಲಕ್ಷ ರೂ, ಖರ್ಚು ಆಗೋದು 2 ಲಕ್ಷಕ್ಕೂ ಹೆಚ್ಚು; ತನ್ನ ಖರ್ಚು ವೆಚ್ಚಗಳನ್ನು ವಿವರಿಸಿದ ಇಂಜಿನಿಯರ್

ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ ಹೆಜ್ಜೆ ಹಾಕುವ ಯುವಕ ಯುವತಿಯರು ಇಲ್ಲಿನ ದುಬಾರಿ ಜೀವನ ಶೈಲಿಗೆ ಹೊಂದಿಕೊಳ್ಳಲು ಕಷ್ಟಪಡ್ತಾರೆ. ಕೈಗೆ ಸಿಗುವ ಸಂಬಳದಲ್ಲಿ ತಿಂಗಳ ಖರ್ಚಿಗೆ ಸಾಕಾಗುತ್ತದೆ. ಆದರೆ ಇದೀಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಡೇಟಾ ಇಂಜಿನಿಯರ್ ಒಬ್ಬರು ತನ್ನ ಮಾಸಿಕ ಸಂಬಳ ಹಾಗೂ ಖರ್ಚು ವೆಚ್ಚಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತಿಂಗಳ ಸಂಬಳ 3 ಲಕ್ಷ ರೂ, ಖರ್ಚು ಆಗೋದು 2 ಲಕ್ಷಕ್ಕೂ ಹೆಚ್ಚು; ತನ್ನ ಖರ್ಚು ವೆಚ್ಚಗಳನ್ನು ವಿವರಿಸಿದ ಇಂಜಿನಿಯರ್
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Feb 16, 2026 | 10:59 AM

Share

ಬೆಂಗಳೂರು, ಫೆಬ್ರವರಿ 16: ಬೆಂಗಳೂರು ಅಂದ್ರೆ ದುಬಾರಿ. ಇಲ್ಲಿ ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ರೂ ಖರ್ಚು ವೆಚ್ಚಗಳಿಗೆ ಲಗಾಮು ಹಾಕದೇ ಇದ್ರೆ ಸಂಬಳವು ಸಾಕಾಗುವುದಿಲ್ಲ. ಹೀಗಾಗಿ ಹೆಚ್ಚಿನವರಿಗೆ ಬೆಂಗಳೂರು (Bengaluru) ಅಂದ್ರೆ ಎಷ್ಟು ದುಡಿದ್ರು ಸಾಕಲ್ಲ ಅಭಿಪ್ರಾಯವಿದೆ. ಬೆಂಗಳೂರಿನಲ್ಲಿ  ಡೇಟಾ ಇಂಜಿನಿಯರ್ (data engineer) ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ತನ್ನ ತಿಂಗಳ ಖರ್ಚು ವೆಚ್ಚಗಳನ್ನು ರಿವೀಲ್ ಮಾಡಿದ್ದಾರೆ. ತಿಂಗಳಿಗೆ 2 ಲಕ್ಷ ರೂ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ಖರ್ಚು ವೆಚ್ಚಗಳನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

@thinking.mori ಎಂಬ ಹೆಸರಿನ ಖಾತೆಯಲ್ಲಿ ಮಹಿಳೆಯೊಬ್ಬರು, ತಿಂಗಳಿಗೆ 3 ಲಕ್ಷ ರೂ ಗಳಿಸುತ್ತೇನೆ, ಅದರಲ್ಲಿ 2 ಲಕ್ಷಕ್ಕಿಂತ ಹೆಚ್ಚು ಹಣವು ಬಾಡಿಗೆ, ವೈಯುಕ್ತಿಕ ವಸ್ತುಗಳ ಖರೀದಿಗೆ ಹಾಗೂ ಹೂಡಿಕೆಗಳಿಗಾಗಿ ಖರ್ಚು ಮಾಡುತ್ತೇನೆ ಎಂದು ಹೇಳಿದ್ದಾರೆ. ತಿಂಗಳ ಬಾಡಿಗೆ ತಿಂಗಳಿಗೆ 20,000 ರೂ ಆಗಿದ್ದು, ಮನೆಕೆಲಸದವರಿಗೆ 5,000 ರೂ ಪಾವತಿಸುತ್ತೇನೆ. ಬಾಡಿಗೆಯಲ್ಲಿ ವಿದ್ಯುತ್, ನೀರು ಮತ್ತು ವೈಫೈ ಕೂಡ ಸೇರಿವೆ, ಆದ್ದರಿಂದ ಅವರ ಮೂಲಭೂತ ಸೌಲಭ್ಯಗಳಿಗಾಗಿ ತಿಂಗಳಿಗೆ 25,000 ರೂ ಒಳಗೆ ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ದುಡಿಮೆಯ ಬಹುಪಾಲು ಹೆತ್ತವರಿಗಾಗಿ ಖರೀದಿಸಿದ ಅಪಾರ್ಟ್ಮೆಂಟ್ ನ ಇಎಂಐಗಳಿಗೆ ಹೋಗುತ್ತದೆ. ಹೀಗಾಗಿ 30,000 ರೂ ಇಎಂಐ ಆಗಿ ಪಾವತಿಸುತ್ತೇನೆ. ಮನೆ ಒಂದು ಹೊಣೆಗಾರಿಕೆ ಎಂದು ನನಗೆ ತಿಳಿದಿದೆ ಆದರೆ ಕೆಲವು ವಿಷಯಗಳು ಭಾವನಾತ್ಮಕವಾಗಿರುತ್ತವೆ. ಅವರು ನನಗಾಗಿ ಸಾಕಷ್ಟು ಮಾಡಿದ್ದಾರೆ. ಹೀಗಾಗಿ ನಾನು ಅವರಿಗಾಗಿ ಅಪಾರ್ಟ್ಮೆಂಟ್ ಖರೀದಿಸಿದ್ದೇನೆ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಉಳಿದಂತೆ ದಿನಸಿ ಸಾಮಾನುಗಳಿಗೆ ತಿಂಗಳಿಗೆ 8,000 ರೂ, ಊಟಕ್ಕೆ 2,000 ಖರ್ಚು ಮಾಡುತ್ತೇನೆ. ಸ್ವ-ಆರೈಕೆ, ಚರ್ಮದ ಆರೈಕೆ, ಉಡುಗೊರೆಗಳು, ಜೀವಸತ್ವಗಳು, ದೇಹದ ಆರೈಕೆಗಾಗಿ ತಿಂಗಳಿಗೆ 5,000 ರೂ ಎತ್ತಿಡಬೇಕಾಗುತ್ತದೆ. ಜಿಮ್ ಸದಸ್ಯತ್ವ ಮತ್ತು ವೈಯಕ್ತಿಕ ತರಬೇತುದಾರರಿಗೆ 12,000 ರೂ ಮತ್ತು ನೆಟ್‌ಫ್ಲಿಕ್ಸ್, ಆಪಲ್ ಟಿವಿಗೆ 300 ರೂ ಪಾವತಿಸುತ್ತೇನೆ ಎಂದು ವಿವರಿಸಿದ್ದಾರೆ.

ಕೈಗೆ ಸಿಗುವ ಮೂರು ಲಕ್ಷ ಸಂಬಳದಲ್ಲಿ ಹೂಡಿಕೆಗಳು ತುಂಬಾ ಸರಳವಾಗಿದೆ.ಪ್ರತಿ ತಿಂಗಳು 1 ಲಕ್ಷ ರೂ ಸಿಪ್ ಗಳಲ್ಲಿ ಹೂಡಿಕೆ ಮಾಡುತ್ತೇನೆ. ಒಟ್ಟಾರೆಯಾಗಿ ಪ್ರತಿ ತಿಂಗಳು ಸುಮಾರು 2,12,000 ರೂ ಖರ್ಚು ಆಗುತ್ತದೆ. ಈ ಮೊತ್ತದಲ್ಲಿ ನಾನು ಟ್ರಾವೆಲ್ ಗಾಗಿ ಖರ್ಚು ಮಾಡಿದ ಮೊತ್ತ ಸೇರಿಲ್ಲ. 2025 ರಲ್ಲಿ ಪ್ರಯಾಣಕ್ಕಾಗಿ 7 ಲಕ್ಷ ರೂ ಖರ್ಚು ಮಾಡಿದೆ. ನನ್ನ ಮದುವೆಗೂ ನಾನು ಉಳಿತಾಯ ಮಾಡಬೇಕಾಗಿದೆ. ಅದಕ್ಕಾಗಿ ನಾನು ಸ್ವಲ್ಪ ಹಣವನ್ನು ಎತ್ತಿಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮನೆ ಕೆಲಸ, ಮಕ್ಕಳ ಆರೈಕೆಗಾಗಿ ತಿಂಗಳಿಗೆ 46 ಸಾವಿರ ರೂ ಖರ್ಚು ಮಾಡುವ ಬೆಂಗಳೂರಿನ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮ್ಮ ಖರ್ಚು ವೆಚ್ಚಗಳಿಗೆ ಸ್ವಲ್ಪ ಕಡಿವಾಣ ಹಾಕಿ. ಆಗ ಮಾತ್ರ ನೀವು ಅಂದುಕೊಂಡದ್ದನ್ನು ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಷ್ಟು ಸಂಬಳದಲ್ಲಿ ಆರಾಮದಾಯಕವಾಗಿ ಬದುಕ್ಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಉಳಿತಾಯ ಮಾಡೋಣ ಮುಖ್ಯ, ಅದರ ಬಗ್ಗೆ ಹೆಚ್ಚು ಗಮನ ಕೊಡಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ