Viral: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ

ಎಲ್ಲರ ಬದುಕು ಒಂದೇ ರೀತಿ ಇರಲ್ಲ. ಕೆಲವೊಮ್ಮೆ ಹೊಡೆತಗಳ ಮೇಲೆ ಹೊಡೆತಗಳನ್ನು ತಂದೊಡ್ದುತ್ತವೆ, ಸುಧಾರಿಸಿಕೊಳ್ಳಬೇಕಷ್ಟೆ. ಮಗುವಿನ ಆರೋಗ್ಯ ಚಿಕಿತ್ಸೆಗಾಗಿ ವಿದೇಶಿ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ರಾಪಿಡೋ ಓಡಿಸುತ್ತಿರುವ ತಂದೆಯ ಕರುಣಾಜನಕ ಕಥೆ ವೈರಲ್ ಆಗಿದೆ. ಹೌದು, ಮಗುವಿನ ಉಳುವಿಗಾಗಿ ತಂದೆ ಹೋರಾಟ ನೆಟ್ಟಿಗರ ಕಣ್ಣು ಒದ್ದೆಯಾಗಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ
ಸಾಂದರ್ಭಿಕ ಚಿತ್ರ
Image Credit source: Twitter

Updated on: Oct 18, 2026 | 12:43 PM

ಜೀವನವೇ ಹಾಗೆ, ಕೆಲವೊಮ್ಮೆ ಕಷ್ಟಗಳು ಹೇಳದೇನೆ ಬಂದು ಬಿಡುತ್ತದೆ. ಹೀಗಾದಾಗ ಮೇಲೆಳುವ ಧೈರ್ಯ ಮುಖ್ಯ. ಇದೀಗ ವ್ಯಕ್ತಿಯೊಬ್ಬರು ತನ್ನ ಮಗುವಿನ ಚಿಕಿತ್ಸೆಗಾಗಿ ಓಮನ್‌ನಲ್ಲಿದ್ದ ಉದ್ಯೋಗವನ್ನೇ ಬಿಟ್ಟು, ಬೆಂಗಳೂರಿನಲ್ಲಿ ರಾಪಿಡೋ (Rapido) ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹಣದ ಅವಶ್ಯಕತೆ ಇರುವ ಕಾರಣ ಈ ವೃತ್ತಿಯನ್ನೇ ನೆಚ್ಚಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.

ಚಾಲಕನ ಹೋರಾಟದ ಬದುಕಿಗೆ ಕಿವಿಯಾದ ಯುವತಿ

ಸಾಕ್ಷಿ (Sakshi) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಸಂದರ್ಶನದಿಂದ ಹಿಂತಿರುಗುವ ವೇಳೆ ತಾನು ರಾಪಿಡೋ ಬುಕ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಪ್ರಯಾಣದ ವೇಳೆ ಚಾಲಕ ಜೊತೆಗೆ ಮಾತಿಗಿಳಿದಿದ್ದು, ಚಾಲಕ ತನ್ನ ಈ ಉದ್ಯೋಗದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

Loading...

ವೈರಲ್ ಪೋಸ್ಟ್ ಇಲ್ಲಿದೆ


ಮಗುವಿನ ಚಿಕಿತ್ಸೆಗೆ 8 – 9 ಲಕ್ಷ ರೂ ಖರ್ಚು

ತಮ್ಮ ಮಗುವಿನ ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಒಮಾನ್ ದೇಶದಲ್ಲಿದ್ದ ಉದ್ಯೋಗವನ್ನೇ ಬಿಟ್ಟು ವಾಪಸ್ ಬಂದೆ. ಈಗಾಗಲೇ ಕೆಲಸಕ್ಕಾಗಿ ಹತ್ತು ಹಲವು ಸಂದರ್ಶನಗಳಿಗೆ ಹಾಜರಾದೆ. ಆದರೆ ಮಗುವಿನ ಚಿಕಿತ್ಸೆಗಾಗಿ ಪ್ರತಿ ತಿಂಗಳು ಕನಿಷ್ಠ ಆರು ದಿನಗಳ ರಜೆ ಬೇಕು. ನನ್ನ ವೈಯುಕ್ತಿಕ ಬದುಕಿಗೆ ಸಮಯ ಕೊಡುವ ಕೆಲಸ ಸಿಗುವುದು ಕಷ್ಟ. ಈಗಾಗಲೇ ತನ್ನ ಮಗುವಿನ ಚಿಕಿತ್ಸೆಗಾಗಿ ತಾನು ಉಳಿಸಿದ್ದ 8 ರಿಂದ 9 ಲಕ್ಷ ರೂ ಖರ್ಚು ಮಾಡಿದ್ದಾರೆ. ಚಿಕಿತ್ಸೆಗಾಗಿ ಇನ್ನೂ ಕನಿಷ್ಠ 15 ರೂ ಲಕ್ಷದ ಅಗತ್ಯವಿದೆ. ಇದಕ್ಕಾಗಿ ಸಾಲ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಚಾಲಕ ಬದುಕಿನ ಹೋರಾಟಕ್ಕೆ ಮರುಗಿದ ಯುವತಿ

ಇತ್ತ ಚಾಲಕನ ಮಾತು ಕೇಳಿ ನೊಂದುಕೊಂಡ ಯುವತಿ ಕೆಲವರು ನಾವು ಊಹಿಸಲೂ ಸಾಧ್ಯವಾಗದಂತಹ ಹೋರಾಟಗಳನ್ನು ನಡೆಸುತ್ತಿದ್ದಾರೆ. ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಇಂತಹ ಜನರ ವಿಷಯದಲ್ಲಿ ಜೀವನವು ಎಷ್ಟು ಅನ್ಯಾಯ ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆರ್ಡರ್ ತಲುಪಿಸಲು ಪುಟ್ಟ ನಾಯಿ ಮರಿ ಜತೆಗೆ ಮನೆ ಬಾಗಿಲಿಗೆ ಬಂದ ಬ್ಲಿಂಕಿಟ್ ಡೆಲಿವರಿ ಬಾಯ್

ಈ ಪೋಸ್ಟ್ ಇದುವರೆಗೆ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆಲ್ತ್ ಇನ್ಶೂರೆನ್ಸ್ ಇಲ್ವಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಕೆಲವರ ಪಾಲಿಗೆ ಬದುಕು ನಿತ್ಯ ನಿರಂತರ ಹೋರಾಟ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ನೀವು ತುಂಬಾನೇ ಶಕ್ತಿಶಾಲಿ, ದೇವರು ನಿಮ್ಗೆ ಒಳ್ಳೆಯದನ್ನು ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:40 pm, Sun, 18 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us