Viral: ಫ್ರೀಯಾಗಿ ಕೊಟ್ಟ ಚಟ್ನಿಯ ಹೆಸ್ರನ್ನೂ ಬಿಲ್‌ನಲ್ಲಿ ನಮೂದಿಸಿದ ಬೆಂಗಳೂರಿನ ಹೋಟೆಲ್; ವೈರಲ್‌ ಆಯ್ತು ಪೋಸ್ಟ್

ಸೋಷಿಯಲ್‌ ಮೀಡಿಯಾ ಬಳಕೆದಾರರು ತಮ್ಮ ಜೀವನದಲ್ಲಿ ನಡೆಯುವಂತಹ, ತಮಗೇನಾದರೂ ವಿಶೇಷವೆನಿಸುವ ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ಸಾಕಷ್ಟು ಇಂಟರೆಸ್ಟಿಂಗ್‌ ಪೋಸ್ಟ್‌ಗಳು ವೈರಲ್‌ ಆಗಿವೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಹೋಟೆಲ್‌ ಬಿಲ್‌ ಒಂದರ ಫೋಟೋವನ್ನು ಶೇರ್‌ ಮಾಡಿಕೊಂಡು ಚಟ್ನಿಗೆ ಕಾಸು ಕೊಡ್ಬೇಕು ಅಂತ ಇಲ್ಲ ಅಂದ್ಮೇಲೆ ಅದ್ರ ಹೆಸರನ್ನು ಯಾಕೆ ಬಿಲ್‌ ಮೇಲೆ ನಮೂದಿಸಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಫ್ರೀಯಾಗಿ ಕೊಟ್ಟ ಚಟ್ನಿಯ ಹೆಸ್ರನ್ನೂ ಬಿಲ್‌ನಲ್ಲಿ ನಮೂದಿಸಿದ ಬೆಂಗಳೂರಿನ ಹೋಟೆಲ್; ವೈರಲ್‌ ಆಯ್ತು ಪೋಸ್ಟ್
ವೈರಲ್‌ ಪೋಸ್ಟ್‌
Image Credit source: Facebook

Updated on: May 20, 2025 | 11:34 AM

ಬಟ್ಟೆ ಖರೀದಿಸಲು ಹೋದಾಗ, ದಿನಸಿ ವಸ್ತುಗಳನ್ನು ಖರೀದಿಸಲು ಹೋದಾಗ ಅಥವಾ ಹೋಟೆಲ್‌ಗಳಿಗೆ ಹೋದಾಗ ನಾವು ಖರೀದಿಸಿದಂತಹ ವಸ್ತುಗಳಿಗೆ ಬಿಲ್‌ (Bill) ರಶೀದಿ ಕೊಡ್ತಾರೆ. ಆ ರಶೀದಿಯಲ್ಲಿ (receipt) ಯಾವ ಯಾವ ವಸ್ತುಗಳಿಗೆ ಎಷ್ಟು ಎಷ್ಟು ರೇಟ್‌ ಎಂದು ಶುಲ್ಕ ಕೂಡಾ ಹಾಕಿರುತ್ತಾರೆ. ಆದ್ರೆ ಬೆಂಗಳೂರಿನ (Bengaluru) ಕೆಫೆಯೊಂದರಲ್ಲಿ ಫ್ರೀ ನೀರ್ ಚಟ್ನಿ ಮತ್ತು ಕೆಂಪು ಚಟ್ನಿಯ ಹೆಸರನ್ನು ಕೂಡಾ ನಮೂದಿಸಿದ್ದಾರೆ. ಈ ಬಿಲ್‌ ಫೋಟೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು ಚಟ್ನಿಗೆ ಕಾಸು ಕೊಡ್ಬೇಕಿಲ್ಲ ಓಕೆ… ಆದ್ರೆ ಬಿಲ್‌ನಲ್ಲಿ ಅದ್ರ ಹೆಸರನ್ನು ನಮೂದಿಸೋ ಅಗತ್ಯ ಏನಿತ್ತೋ ಎಂದು ಪ್ರಶ್ನೆ ಮಾಡಿದ್ದಾರೆ. ಈ ಫೋಟೋ ಇದೀಗ ಸಖತ್‌ ವೈರಲ್‌ ಆಗುತ್ತಿತ್ತು, ಫ್ರೀ ಕೊಟ್ಟಿದ್ದಾರೆ ಅಂತ ಗೊತ್ತಾಗ್ಬೇಕಲ್ವಾ ಅದಕ್ಕೆ ಹೆಸರು ನಮೂದಿಸಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಫ್ರೀಯಾಗಿ ಕೊಟ್ಟ ಚಟ್ನಿಯ ಹೆಸ್ರನ್ನೂ ಬಿಲ್‌ನಲ್ಲಿ ನಮೂದಿಸಿದ ಹೋಟೆಲ್:

ಮಲ್ಲೇಶ್ವರಂನ ಬೆಂಗಳೂರು ಕೆಫೆಯಲ್ಲಿ ಗ್ರಾಹಕರು ಖರೀದಿಸಿದ ಇಡ್ಲಿ ವಡೆ, ಮಸಾಲ ದೋಸೆ, ಖಾರ ಬಾತ್‌ ಜೊತೆಗೆ ಫ್ರೀ ನೀರ್ ಚಟ್ನಿ ಮತ್ತು ಕೆಂಪು ಚಟ್ನಿಯ ಹೆಸರನ್ನೂ ಬಿಲ್‌ ರಶೀದಿಯಲ್ಲಿ ನಮೂದಿಸಿದ್ದು, ಚಟ್ನಿ ಫ್ರೀ ಅಂದ್ಮೇಲೆ ಅದರ ಹೆಸರನ್ನು ಏಕೆ ಬಿಲ್‌ನಲ್ಲಿ ನಮೂದಿಸಬೇಕಿತ್ತು ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.

ಈ ಪೋಟೊವನ್ನು ಅನಂತ ನಾರಾಯಣ ಕೋಲಾರ ಎಂಬವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ವಾಟರ್‌ ಚಟ್ನಿ ಹಾಗೂ ರೆಡ್‌ ಚಟ್ನಿಗೆ ಕಾಸು ಕೊಡ್ಬೇಕಿಲ್ಲಾ ಓಕೆ… ಆದ್ರೆ ಬಿಲ್‌ನಲ್ಲಿ ನಮೂದಿಸೋ ಅಗತ್ಯ ಏನಿತ್ತೋ?” ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ?
Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ?
ಯುದ್ಧ ಭೂಮಿಯಾಗಿದೆ ಬೆಂಗಳೂರಿನ ರಸ್ತೆ, ಮಂತ್ರಿ ಮಹನೀಯರೇ ಇಲ್ಲಿ ನೋಡಿ ಒಮ್ಮೆ

ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಹೊಸ ತಂತ್ರ ಕಂಡುಹಿಡಿದ ಮಹಿಳೆ

ವೈರಲ್‌  ಪೋಸ್ಟ್ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ಬಿಲ್‌ ರಶೀದಿ ಫೋಟೋದಲ್ಲಿ ಇಡ್ಲಿ ವಡೆ, ಮಸಾಲ ದೋಸೆ, ಖಾರಬಾತ್‌ ಜೊತೆಗೆ ಫ್ರೀಯಾಗಿ ಕೊಟ್ಟ ಚಟ್ನಿಯ ಹೆಸರನ್ನು ಕೂಡಾ ನಮೂದಿಸಿರುವ ದೃಶ್ಯವನ್ನು ಕಾಣಬಹುದು.

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮುಂದೆ ಗಟ್ಟಿ ಚಟ್ನಿಗೆ ಸ್ಪೆಷಲ್‌ ರೇಟ್‌ ಹಾಕಲು ಅನುಕೂಲವಾಗಲಿ ಅಂತ ಹಾಕಿರಬಹುದುʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಫ್ರೀ ಕೊಟ್ಟಿದ್ದೇವೆ ಅಂತ ತೋರಿಸಿಕೊಳ್ಳಲು ಹೀಗೆ ಮಾಡಿದ್ದಾರೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಫ್ರೀ ಇದ್ರೂ ಟಿಕೆಟ್‌ ಕೊಡ್ತಾರೆ ಅಲ್ವಾ, ಬಹುಶಃ ಇದು ಕೂಡ ಹಾಗೇ ಇರ್ಬೇಕುʼ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ