ಬೆಂಗಳೂರಿನಲ್ಲಿ ಬದುಕೋದು ಬಿಡಿ, ಇಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಕಷ್ಟವಂತೆ

ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬರುವ ಅದೆಷ್ಟೋ ಜನರಿಗೆ ಅಲ್ಲಿನ ವಾತಾವರಣ ಹೊಸತು, ಜನರು ಹೊಸಬರು. ಹೀಗಾಗಿ ಪ್ರಾರಂಭದ ದಿನಗಳಲ್ಲಿ ಹೊಸ ಜಾಗ ಹಾಗೂ ಜನರ ಜೊತೆಗೆ ಬೆರೆಯಲು ಕಷ್ಟ ಪಡುತ್ತಾರೆ. ಇದೀಗ ರೆಡ್ಡಿಟ್ ಬಳಕೆದಾರರೊಬ್ಬರು ತನ್ನ ಸ್ನೇಹಿತೆಯೂ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು ಸ್ನೇಹಿತರಿಲ್ಲದೆ ಹೇಗೆ ಒಂಟಿತನವನ್ನು ಅನುಭವಿಸುತ್ತಿದ್ದಾಳೆ ಎಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಾಸ್ತವತೆಯನ್ನು ಒಪ್ಪಿಕೊಂಡಿದ್ದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬದುಕೋದು ಬಿಡಿ, ಇಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಕಷ್ಟವಂತೆ
ಸಾಂದರ್ಭಿಕ ಚಿತ್ರ
Image Credit source: Google
Updated By: ಮಾಲಾಶ್ರೀ ಅಂಚನ್​

Updated on: May 16, 2025 | 1:48 PM

ಬದುಕು (life)  ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು ಎನ್ನುವ ಮಾತಿದೆ. ಹೀಗಾಗಿ ಅನಿವಾರ್ಯ ಕಾರಣಕ್ಕೆ ಬೆಂಗಳೂರಿನಂತಹ (Bengaluru)  ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ಹೋಗುವವರೇ ಹೆಚ್ಚು. ಕೆಲವರಂತೂ ಈ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಒದ್ದಾಡುವುದಿದೆ. ಜಂಜಾಟದ ಬದುಕಿನಲ್ಲಿ ಸ್ನೇಹ, ಪ್ರೀತಿ ಹಾಗೂ ಭಾವನೆಗಳ ಬಗ್ಗೆ ಜನ ತಲೆಕೆಡಿಸಿಕೊಳ್ಳುವುದೇ ಕಡಿಮೆ. ಆದರೆ ಬಳಕೆದಾರರು, ಬೆಂಗಳೂರಿಗೆ ಸ್ಥಳಾಂತರ ಗೊಂಡಿರುವ ತನ್ನ ಸ್ನೇಹಿತೆಯೊಬ್ಬಳು, ಸ್ನೇಹಿತರನ್ನು ಮಾಡಿಕೊಳ್ಳಲು ಎಷ್ಟು ಕಷ್ಟ ಪಡುತ್ತಿದ್ದಾಳೆ. ವಯಸ್ಕರಾದಾಗ ಸ್ನೇಹಿತರನ್ನು ಮಾಡಿಕೊಳ್ಳುವುದು ಎಷ್ಟು ಕಷ್ಟವಿದೆ ಎನ್ನುವ ಬಗೆಗಿನ ಪೋಸ್ಟ್ ವೊಂದನ್ನು ಹಂಚಿ ಕೊಂಡಿದ್ದಾರೆ.

r/Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ವೊಂದು ಹಂಚಿಕೊಂಡಿರುವ ಬಳಕೆದಾರರು, ‘ನೀವು ಸ್ನೇಹಿತರನ್ನು ಅಥವಾ ಗುಂಪುಗಳನ್ನು ಹೇಗೆ ಮಾಡಿಕೊಳ್ಳುತ್ತೀರಿ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಪೋಸ್ಟ್ ನಲ್ಲಿ ಕಳೆದ ವರ್ಷ ನನ್ನ ಸ್ನೇಹಿತೆ ಬೆಂಗಳೂರಿಗೆ ಸ್ಥಳಾಂತರಗೊಂಡಳು. ಅಂದಿನಿಂದ ಇಂದಿನವರೆಗೂ ಅವಳು ಒಂಟಿತನವನ್ನು ಅನುಭವಿಸುತ್ತಿದ್ದಾಳೆ. ವಯಸ್ಕಾರಾದ ಬಳಿಕ ಹೊಸ ಜನರನ್ನು ಭೇಟಿಯಾಗುವುದು ಹಾಗೂ ಸ್ನೇಹ ಬೆಳೆಸಿಕೊಳ್ಳುವುದು ಎಷ್ಟು ಕಷ್ಟ ಎನ್ನುವ ಬಗ್ಗೆ ನಾವು ಆಗಾಗ ಮಾತನಾಡಿಕೊಳ್ಳುತ್ತೇವೆ. ಆದರೆ ಆಕೆ ಈಗೀಗ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಪ್ರಯತ್ನವನ್ನೇ ಬಿಟ್ಟಿದ್ದಾಳೆ.

ಇದನ್ನೂ ಓದಿ : ಈ ಸಲ ಕಪ್​​​ ನಮ್ದೆ, ಈ ಹುಡುಗ ಗುಡ್​​​ ಬ್ಯಾಟ್ಸ್​​​ಮನ್​​ ಆಗುವ ಲಕ್ಷಣ ಕಾಣುತ್ತಿದೆ

ಇದನ್ನೂ ಓದಿ
ಮಗ ಎಲ್ಲ ವಿಷಯದಲ್ಲೂ ಜಸ್ಟ್ ಪಾಸ್, ಸಿಹಿ ಹಂಚಿ ಸಂಭ್ರಮಿಸಿದ ಅಪ್ಪ
ಈ ಹುಡುಗ ಕೊಹ್ಲಿಯಂತೆ ಹಿಟ್​​​ ಕ್ರಿಕೆಟರ್​​ ಆಗುವ ಲಕ್ಷಣ ಕಾಣುತ್ತಿದೆ
ಕೇಕ್ ಕತ್ತರಿಸಿ ಶ್ವಾನದ ಹುಟ್ಟುಹಬ್ಬ ಆಚರಿಸಿದ ಹಿರಿಜೀವ, ವಿಡಿಯೋ ವೈರಲ್
ಬಲೂಚಿಸ್ತಾನಕ್ಕೆ ಕಾಶಿಶ್ ಚೌಧರಿ ಎಂಟ್ರಿ, ಗಡಗಡ ನಡುಗಿದ ಪಾಕ್

ಸದಾ ಕೆಲಸದಲ್ಲಿ ಬ್ಯುಸಿಯಾಗಿದ್ದು, ಅದ್ಭುತ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ  ಜನರಲ್ಲಿ ಅವಳು ಕೂಡ ಒಬ್ಬಳು. ಆದರೆ ತನ್ನ ಭಾವನೆಗಳನ್ನು ಹೊರ ಹಾಕಿಕೊಳ್ಳದೇ ಒಂಟಿತನ ಅನುಭವಿಸುತ್ತ ಬೇಸೆತ್ತು ಹೋಗಿದ್ದಾಳೆ. ಅವಳು ಈ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಒಂಟಿತನದಿಂದ ಮುಕ್ತವಾಗಲು ಮಹಿಳಾ ಸ್ನೇಹಿತರನ್ನು ಹೊಂದಲು ಹಾಗೂ ಸ್ನೇಹಿತರ ಗುಂಪಿನಲ್ಲಿ ತಾನು ಕೂಡ ಭಾಗಿಯಾಗಲು ಇಷ್ಟ ಪಡುತ್ತಾಳೆ. ಹಾಗಾಗಿ ನಾನು ನಿಮ್ಮ ಬಳಿ ಈ ಬಗ್ಗೆ ಕೇಳುತ್ತಿದ್ದು, ಬೆಂಗಳೂರಿನಲ್ಲಿ ನೀವು  ಹೊಸ ಹೊಸ ಜನರನ್ನು (ಮಹಿಳೆ ಯರು ಅಥವಾ ಪುರುಷರು) ಹೇಗೆ ಭೇಟಿಯಾಗುತ್ತೀರಿ. ಸ್ನೇಹಿತರನ್ನು ಹೇಗೆ ಮಾಡಿಕೊಳ್ಳುತ್ತೀರಿ. ನಿಮ್ಮ ಬಳಿ ಯಾವುದೇ ಸಲಹೆಗಳಿದ್ದಲ್ಲಿ, ಸಮುದಾಯಗಳು, ಇವೆಂಟ್ ಗಳು, ಅಪ್ಲಿಕೇಶನ್ ಗಳು ಇದ್ದಲ್ಲಿ ಅದಲ್ಲೆವೂ ಸ್ವಾಗತಾರ್ಹವಾಗಿದೆ. ತನ್ನ ಸಮಯ ಹಾಗೂ ಭಾವನೆಗಳನ್ನು  ಹಂಚಿಕೊಳ್ಳಲು ಯಾರು ಇಲ್ಲದೇ ಆಕೆ ಹೋರಾಡುವುದನ್ನು ನೋಡುವುದು ನಿಜಕ್ಕೂ ನನಗೆ ನೋವನ್ನುಂಟು ಮಾಡುತ್ತದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

How do you guys make friends and groups?
byu/Suspicious-Error5761 inBengaluru

ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಬೆಂಗಳೂರಿನಲ್ಲಿ ಎಷ್ಟೋ ಜನರು ಸ್ನೇಹಿತರಿಲ್ಲದೆ ಒಂಟಿತನ ಅನುಭವಿಸುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು, ‘ ಈ  ರೀತಿ ಅನುಭವಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ವಾಸವಿದ್ದೇವೆ. ಆದರೆ ನಾನು ಇಂದಿಗೂ ಕೂಡ ಒಂಟಿಯಾಗಿಯೇ ಇದ್ದೇನೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಕ್ರೀಡೆ ಹಾಗೂ ವ್ಯಾಯಾಮದಲ್ಲಿ ಟ್ರೇನಿಂಗ್ ಪಡೆಯಿರಿ. ಅದು ಒಂದೇ ರೀತಿಯ ಜನರನ್ನು ನಿರಂತರವಾಗಿ ಭೇಟಿ ಮಾಡುವ ಆರಂಭಿಕ ಹಂತವಾಗಿದೆ. ಈ ರೀತಿ ಅಭ್ಯಾಸವು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ಬೆಂಗಳೂರಿಗೆಂದು ಉದ್ಯೋಗಕೆಂದು ಹೊರಟ ಅದೆಷ್ಟೋ ಜನರ ಒಂಟಿತನದೊಂದಿಗೆ ನಿತ್ಯ ನಿರಂತರ ಹೋರಾಟ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ