ತಿಂಗಳುಗಳ ಹಿಂದೆ ಈ ಪಟ್ಟಣಗೆರೆ ಶೆಡ್ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿತ್ತು. ಅದರಲ್ಲೂ ಈ “ಶೆಡ್ಡಿಗ್ ಬಾ” ಎಂಬ ಪದ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬಗ್ಗೆ ಹೆಚ್ಚಿನವರು ರೀಲ್ಸ್ ವಿಡಿಯೋ ಮಾಡಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಬಡ್ಡಿ ದಂದೆಗೆ ಸಂಬಂಧಿಸಿದ ಕೋರ್ಟ್ ವಿಚಾರಣೆಯ ವೇಳೆ ಬಾಡಿಗೆ ಆಟೋ ಓಡಿಸುವವರ ಸಮಸ್ಯೆಯ ಬಗ್ಗೆ ವಿವರಣೆ ಕೊಡುವ ಸಂದರ್ಭದಲ್ಲಿ ʼಶೆಡ್ಡಿಗ್ ಬಾʼ ಎಂಬ ಪದವನ್ನು ಬಳಸಿದ್ದು, ಈ ಕುರಿತ ಹಾಸ್ಯಮಯ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಲಾಸಿಪಾಳ್ಯದ ಸುತ್ತಮುತ್ತ ನಡೆಯುವ ಬಡ್ಡಿ ದಂಧೆಯ ಬಗ್ಗೆ ನ್ಯಾಯಾಧೀಶರು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿರುವಾಗ ಬಾಡಿಗೆ ಆಟೋ ಓಡಿಸುವವರ ಸಮಸ್ಯೆಯ ಬಗ್ಗೆ ಹೇಳುವ ಸಂದರ್ಭದಲ್ಲಿ ಶೆಡ್ಡಿಗ್ ಬಾ ಎಂಬ ಪದವನ್ನು ಬಳಸಿದ್ದಾರೆ. ಜಡ್ಜ್ ಸಾಹೇಬ್ರ ಬಾಯಲ್ಲಿ ಈ ಡೈಲಾಗ್ ಕೇಳಿ ಅಲ್ಲಿದ್ದವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಬಾಡಿಗೆ ಆಟೋ ಓಡಿಸುವವರು ಟ್ರಾಫಿಕ್ ಇತ್ಯಾದಿ ಸಮಸ್ಯೆಗಳಿಂದ ಕಡಿಮೆ ಸಂಪಾದನೆ ಮಾಡಿದ್ರೂ ಕೂಡಾ ಸಂಜೆಯ ಹೊತ್ತಿಗೆ ಆಟೋ ಬಾಡಿಗೆ ಇಂತಿಷ್ಟು ಅಂತ ಕೊಡಲೇ ಬೇಕು. ಇದ್ರ ಬಗ್ಗೆ ಮಾತನಾಡುತ್ತಾ ಬೆಳಗ್ಗೆ ಬಂದು ಆಟೋ ರಿಕ್ಷಾಗಳನ್ನು ತೆಗೆದುಕೊಂಡು ಹೋಗ್ಬೇಕು, ಸಾಯಂಕಾಲಕ್ಕೆ 250 ಬಾಡಿಗೆ ತಂದು ಕೊಡ್ಬೇಕು. ನೀನು ಎಷ್ಟಾದ್ರೂ ಸಂಪಾದನೆ ಮಾಡು, ಎಷ್ಟಾದ್ರೂ ಫೈನ್ ಕಟ್ಟು ನನಗೆ ಸಾಯಂಕಾಲಕ್ಕೆ 250 ಸಿಗ್ಬೇಕು ಇಲ್ಲಾಂದ್ರೆ ಶೆಡ್ಡಿಗ್ ಬಾ ಎಂದು ಬಾಡಿಗೆ ಆಟೋ ಚಾಲಕರು ಆಟೋ ಬಾಡಿಗೆ ಕೊಡುವ ಸಂದರ್ಭದಲ್ಲಿ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ನ್ಯಾಯಾಧೀಶರು ಹಾಸ್ಯರೂಪದ ವಿವರಣೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ರಜೆಯಲ್ಲಿ ಮಗ ಅರ್ಧ ದಿನ ತಂದೆ ಜತೆ, ಇನ್ನರ್ಧ ದಿನ ತಾಯಿ ಜತೆ, ಡಿವೋರ್ಸ್ಗೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್
ಈ ಕುರಿತ ವಿಡಿಯೋವೊಂದನ್ನು Yasir Arfath Shorts ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಬಾಡಿಗೆ ಆಟೋ ಓಡಿಸುವವರ ಕಷ್ಟಗಳನ್ನು ವಿವರಿಸುತ್ತಾ 250 ಕೊಡಿ ಇಲ್ಲಾಂದ್ರೆ ಶೆಡ್ಡಿಗ್ ಬಾ ಎಂದು ಹೇಳುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ