Viral: ಇಲ್ಲಿ ರೊಮ್ಯಾನ್ಸ್ ಮಾಡುವಂತಿಲ್ಲ; ವೈರಲ್ ಆಯ್ತು ಬೆಂಗಳೂರಿನ ಆಟೋದಲ್ಲಿ ಅಂಟಿಸಲಾದ ಪೋಸ್ಟರ್
ಸಾಮಾನ್ಯವಾಗಿ ಆಟೋದ ಹಿಂಬದಿಯಲ್ಲಿ ತಂದೆ ತಾಯಿಯರ ಆಶೀರ್ವಾದ, ತಮ್ಮ ಆತ್ಮೀಯ ವ್ಯಕ್ತಿಗಳ ಹೆಸರು ಇಲ್ಲವಾದ್ರೆ ಮನಸ್ಸು ಮುಟ್ಟುವಂತಹ ಬರಹಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಬೆಂಗಳೂರಿನ ಆಟೋದಲ್ಲಿ ಬರೆಯಲಾದ ವಿಶೇಷ ಪ್ರೇಮಿಗಳಿಗಾಗಿ ಪೋಸ್ಟರ್‌ನ್ನು ಅಂಟಿಸಲಾಗಿದ್ದು, ಅದರಲ್ಲಿ ಕೆಲ ಸಾಲುಗಳನ್ನು ಬರೆಯಲಾಗಿದೆ. ಈ ಪೋಸ್ಟರ್ ನಲ್ಲಿ ಪ್ರೇಮಿಗಳಿಗೆ ಮಿತಿ ಮೀರಿ ವರ್ತಿಸಬೇಡಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಂತಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೆಲ ಪ್ರೇಮಿಗಳಿಗೆ ಎಲ್ಲಿ ಹೇಗೆ ಇರಬೇಕು ಎಂಬ ಕನಿಷ್ಟ ಜ್ಞಾನವು ಇರಲ್ಲ. ಹೀಗಾಗಿ ಜೋಡಿಹಕ್ಕಿಗಳು ಸಾರ್ವಜನಿಕ ಸ್ಥಳಗಳಲ್ಲಿಯೇ ಅಸಹ್ಯಕರ ವರ್ತನೆಗಳನ್ನು ತೋರುತ್ತಿರುತ್ತಾರೆ. ಗೆಳೆತಿಯನ್ನು ಬೈಕ್ ಮೇಲೆ ಕೂರಿಸಿ, ಲಿಪ್ ಕಿಸ್ ಮಾಡುತ್ತಾ ಜಾಲಿ ರೈಡ್ ಹೋಗುವ ಹೀಗೆ ಅತಿರೇಕವೆನಿಸುವ ವರ್ತನೆಗಳು ಆಗಾಗ್ಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಆದರೆ ಇದೀಗ ಬೆಂಗಳೂರಿನ ಆಟೋ ಚಾಲಕರೊಬ್ಬರು (Bengaluru auto driver) ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಆಟೋದಲ್ಲಿ ಪೋಸ್ಟರ್‌ನ್ನು (Poster in auto) ಅಂಟಿಸಿದ್ದಾರೆ. ಇಲ್ಲಿ ರೊಮ್ಯಾನ್ಸ್ ಬೇಡ, ಇದು ಓಯೋ ರೂಮ್ ಅಲ್ಲ ಎಂದು ಪ್ರೇಮಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಆಟೋದಲ್ಲಿದ್ದ ಹಾಕಲಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
r/bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ಆಟೋದಲ್ಲಿ ಬರೆಯಲಾದ ಬರಹವನ್ನು ನೀವಿಲ್ಲಿ ನೋಡಬಹುದು. ಆಟೋದಲ್ಲಿ ಅಂಟಿಸಲಾದ ಪೋಸ್ಟರ್ ನಲ್ಲಿ, ಎಚ್ಚರಿಕೆ, ಇಲ್ಲಿ ರೊಮ್ಯಾನ್ಸ್ ಬೇಡ. ಇದು ಕ್ಯಾಬ್ ನಮ್ಮ ಖಾಸಗಿ ಸ್ಥಳ, OYO ಅಲ್ಲ. ಆದ್ದರಿಂದ ದಯವಿಟ್ಟು ಅಂತರ ಕಾಪಾಡಿಕೊಳ್ಳಿ ಹಾಗೂ ಶಾಂತವಾಗಿರಿ. ಗೌರವ ನೀಡಿ ಮತ್ತು ಗೌರವವನ್ನು ಪಡೆಯಿರಿ. ಆರ್ಟ್ ಮನು ಮಿಲ್ಕಿ ಎಂದು ಬರೆದಿರುವುದನ್ನು ನೀವು ನೋಡಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Spotted in an auto byu/Zealousideal_Pea1095 inBengaluru
ಇದನ್ನೂ ಓದಿ
ಇದನ್ನೂ ಓದಿ:Viral: ‘ಗೋ ಬ್ಯಾಕ್ ಹಿಂದಿ ವಾಲಾ ಆಟೋಸ್’; ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಮಿಲ್ಕಿ ಏನೋ ನೋಡಿದ್ದಾರೆ, ಹೀಗಾಗಿ ಈ ರೀತಿ ಪೋಸ್ಟರ್ ಅಂಟಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರಯಾಣಿಕರು ಅತಿಯಾದ ರೊಮ್ಯಾನ್ಸ್ ಮಾಡುವುದಕ್ಕೂ ಈ ರೀತಿ ಪೋಸ್ಟರ್ ಗೂ ಸಂಬಂಧವಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಬರಹವೂ ಅಸಂಬದ್ಧವಾಗಿಲ್ಲ, ಆದರೆ ಹಾಸ್ಯಮಯವಾಗಿದೆ. ಸಖತ್ ಕ್ರಿಯೇಟಿವಿಟಿಯಿಂದ ಕೂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








