ಅಮ್ಮ ಕುರ್ಕುರೆ ಕೊಡಿಸಿಲ್ಲವೆಂದು ಪೊಲೀಸರಿಗೆ ದೂರು ನೀಡಿದ 8 ವರ್ಷದ ಬಾಲಕ!
ಮಗನಿಗೆ ಕುರ್ಕುರೆ ಕೊಡಿಸಲು ಒಪ್ಪದ ತಾಯಿಯ ವಿರುದ್ಧ 8 ವರ್ಷದ ಬಾಲಕ ಪೊಲೀಸರಿಗೆ ದೂರು ನೀಡಿರುವ ಶಾಕಿಂಗ್ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಂಗ್ರೌಲಿಯ ಎಂಟು ವರ್ಷದ ಬಾಲಕನೊಬ್ಬ ತನ್ನ ತಾಯಿ ಕುರ್ಕುರೆ ಪ್ಯಾಕೆಟ್ ಕೊಡಿಸಲು ನಿರಾಕರಿಸಿದ ನಂತರ ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ಫೋನ್ ಕರೆಯ ವೀಡಿಯೊ ವೈರಲ್ ಆಗಿದ್ದು, ಪೊಲೀಸರು ಆಮೇಲೆ ಏನು ಮಾಡಿದರು? ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

ನವದೆಹಲಿ, ಅಕ್ಟೋಬರ್ 5: ಮಧ್ಯಪ್ರದೇಶದದಲ್ಲಿ ಆಘಾತಕಾರಿ (Shocking News) ಮತ್ತು ಅಪರೂಪದ ಘಟನೆಯೊಂದು ನಡೆದಿದೆ. ಸಿಂಗ್ರೌಲಿಯ ಚಿತರ್‌ವೈ ಕಲಾ ಗ್ರಾಮದ 8 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಅಕ್ಕ ತನಗೆ ಕುರ್ಕುರೆ ಕೊಡಿಸಿ ಎಂದಿದ್ದಕ್ಕೆ ಹೊಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಅಮ್ಮನ ಮೊಬೈಲ್ ತೆಗೆದುಕೊಂಡು ಪೊಲೀಸ್ ತುರ್ತು ಸಹಾಯವಾಣಿ ನಂಬರ್ 112ಗೆ ಫೋನ್ ಮಾಡಿದ ಬಾಲಕ ಚಿಪ್ಸ್ ಪ್ಯಾಕೆಟ್ ಕೊಡಿಸಿ ಎಂದಿದ್ದಕ್ಕೆ ಅಮ್ಮ ಮತ್ತು ಅಕ್ಕ ಸೇರಿ ನನಗೆ ಹೊಡೆದಿದ್ದಾರೆ ಎಂದು ಹೇಳುತ್ತಾ ಅಳಲಾರಂಭಿಸಿದ್ದಾನೆ.
ಕುರ್ಕುರೆ ಪ್ಯಾಕೆಟ್ ಖರೀದಿಸಲು ಆ ಬಾಲಕ ತನ್ನ ತಾಯಿಯ ಬಳಿ 20 ರೂ. ಕೊಡುವಂತೆ ಕೇಳಿದ. ಅದಕ್ಕೆ ಆಕೆ ಒಪ್ಪಲಿಲ್ಲ. ಆತ ಹಠ ಮಾಡಿದಾಗ ಆ ತಾಯಿ ಮತ್ತು ಅವರ ಮಗಳು ಸೇರಿ ಆ ಬಾಲಕನನ್ನು ಹೊಡೆದಿದ್ದಾರೆ. ಇದರಿಂದ ನೊಂದ ಬಾಲಕ ಭಾರತದ ಪೊಲೀಸ್ ತುರ್ತು ಸಂಖ್ಯೆ 112ಗೆ ಕರೆ ಮಾಡಿದ.
बच्चे ने कुरकुरे की माँग की तो माँ ने कूट दिया। शिकायत पुलिस के पास पहुँची और माँग पूरी हो गई। वायरल वीडियो मध्य प्रदेश के सिंगरौली का है। pic.twitter.com/MqIcRKBB0w
— SANJAY TRIPATHI (@sanjayjourno) October 4, 2025
ಇದನ್ನೂ ಓದಿ: Viral: ಇಲ್ಲಿ ರೊಮ್ಯಾನ್ಸ್ ಮಾಡುವಂತಿಲ್ಲ; ವೈರಲ್ ಆಯ್ತು ಬೆಂಗಳೂರಿನ ಆಟೋದಲ್ಲಿ ಅಂಟಿಸಲಾದ ಪೋಸ್ಟರ್
ಈ ಕರೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯುವಕ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ಶಾಂತವಾಗಿ ಅವನಿಗೆ ಧೈರ್ಯ ತುಂಬುತ್ತಿರುವುದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಆ ಪೊಲೀಸ್ ಬಾಲಕನಿಗೆ ಸಮಾಧಾನ ಮಾಡಿದ್ದು ಮಾತ್ರವಲ್ಲದೆ ಆತನ ಅಮ್ಮನಿಗೆ ಇನ್ಮುಂದೆ ಆ ಮಗುವನ್ನು ಹೊಡೆಯಬೇಡಿ ಎಂದು ಹೇಳಿದ್ದಾರೆ. ನಂತರ ಆ ಮಗುವಿನ ಮನೆಗೆ ಹೋಗಿ ತಾವೇ ಐದಾರು ಕುರ್ಕುರೆ ಪ್ಯಾಕೆಟ್ಗಳನ್ನು ಆತನಿಗೆ ನೀಡಿ ಸರ್ಪ್ರೈಸ್ ಕೊಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




