Viral: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ಸಾಗಿಸುವುದೇ ಕಷ್ಟಕರ. ಬಾಡಿಗೆ ದರಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ಮೂಲದ ಉದ್ಯೋಗಿಯೊಬ್ಬರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಂಡಿದ್ದಾರೆ. 1BHK ಮನೆಗೆ 45,000 ರೂ ಬಾಡಿಗೆಯಂತೆ. ಅವರಿಗೆ ಈ ಮೊತ್ತವು ಹೊರೆಯಾಗುತ್ತಿರುವ ಕಾರಣ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 05, 2026 | 12:08 PM

ಬೆಂಗಳೂರು, ಜೂನ್ 05: ದೂರದ ಊರಿನಿಂದ ಉದ್ಯೋಗಕ್ಕೆಂದು ಬೆಂಗಳೂರಿಗೆ (Bengaluru) ಬರುವ ಯುವಕ ಯುವತಿಯರು ಅಗ್ಗದ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುತ್ತದೆಯೇ ಎಂದು ನೋಡುತ್ತಾರೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿದೆ. ಇದೀಗ ಬೆಂಗಳೂರು ಮೂಲದ ಉದ್ಯೋಗಿಯೊಬ್ಬರು ಎಚ್ ಎಸ್ ಆರ್ ಲೇಔಟ್ (HSR Layout) ತೊರೆಯಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರುವುದೇ ಅವರು 1 BHK ಮನೆಗೆ ಪಾವತಿಸುತ್ತಿರುವ 45000 ರೂ ಬಾಡಿಗೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಬೆಂಗಳೂರು ಮೂಲದ ಪೇಪಾಲ್ ಉದ್ಯೋಗಿಯೊಬ್ಬರು ಗ್ರೇಪ್‌ವೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಗುಡ್‌ಬೈ ಎಚ್‌ಎಸ್‌ಆರ್ ಲೇಔಟ್! 1BHK ಮನೆಗೆ 45 ಸಾವಿರ ಬಾಡಿಗೆ ನೀಡುವುದು ಸಂಪೂರ್ಣ ಹುಚ್ಚುತನ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Viral Post

ಈ ಪೋಸ್ಟ್ ನಲ್ಲಿ, ನಾನು ಅಂತಿಮವಾಗಿ ಎಚ್‌ಎಸ್‌ಆರ್ ಲೇಔಟ್ ತೊರೆಯುವ ನಿರ್ಧಾರ ಮಾಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಇಂದು ತುಂಬಾ ನಿರಾಳವಾಗಿದೆ. ಇದು ನನ್ನ ಹೆಗಲ ಮೇಲಿನ ದೊಡ್ಡ ಭಾರವನ್ನು ಇಳಿಸಿದಂತಾಗುತ್ತದೆ. ಈ ನಿರ್ಧಾರದಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ಆರಂಭದಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಈ ಪ್ರದೇಶದಲ್ಲಿದ್ದಾರೆ. ಹೀಗಾಗಿ ನಾನು ಸಾಮಾಜಿಕ ಒತ್ತಡಕ್ಕೆ ಮಣಿದು ಈ ಸ್ಥಳದಲ್ಲೇ ಉಳಿಯಲು ನಿರ್ಧಾರ ಮಾಡಿದ್ದೆ ಎಂದು ಬರೆದುಕೊಂಡಿದ್ದಾರೆ.

ಹಲವಾರು ಅಪಾರ್ಟ್‌ ಮೆಂಟ್‌ಗಳಿಗೆ ಭೇಟಿ ನೀಡಿದ ನಂತರ, HSR ಲೇಔಟ್‌ನ ಹೊರಗೆ ಕೂಸ ಉತ್ತಮ ಮತ್ತು ಹೆಚ್ಚು ಕೈಗೆಟುಕುವ ಆಯ್ಕೆಗಳಿವೆ ಎಂದು ಅರಿತು ಕೊಂಡೆ. ನನ್ನ ವಾರ್ಷಿಕ 24 ಲಕ್ಷ ರೂಪಾಯಿ ಆದಾಯಕ್ಕೂ ಈ ಬಾಡಿಗೆಯೂ ಹೆಚ್ಚು ಹೊರೆಯಾಗುತ್ತಿದೆ. ಎಚ್‌ಎಸ್‌ಆರ್ ಲೇಔಟ್‌ಗೆ ನನ್ನ ವಿದಾಯ, ಮತ್ತು ಭಯಾನಕ ಟ್ರಾಫಿಕ್‌ಗೆ ವಿದಾಯ, ನನ್ನ ಈ ನಿರ್ಧಾರ ಇನ್ನಷ್ಟು ಸರಳವಾಗಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರ; ಹೊಸ ಬಾಡಿಗೆ ಮನೆಯ ಬಗ್ಗೆ ಮಹಿಳೆ ಹೇಳಿದ್ದೇನು ಗೊತ್ತಾ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ನಿರ್ಧಾರ ನಿಮಗೆ ಸರಿ ಎನಿಸಿದರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನನಗೂ ಈ ಬೆಂಗಳೂರಿನಿಂದ ಹೊರಗೆ ಹೋಗಲು ಸಹಾಯ ಮಾಡಿ ಗೆಳೆಯ ಎಂದು ಕೇಳಿದ್ದಾರೆ. ಮತ್ತೊಬ್ಬರು, ಬೆನ್ನು ನೋವು ಅಥವಾ ಕೆಲಸದ ಒತ್ತಡವಿದ್ದರೆ ಯಾವಾಗಲೂ ಆಫೀಸಿಗೆ ಹತ್ತಿರವಿರುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:08 pm, Fri, 5 June 26

Follow Us