Viral: ಬಿಹಾರದ ಹುಡುಗನ ಜತೆಗೆ ಚಿಗುರಿದ ಪ್ರೀತಿ; ಪ್ರೇಮಿಯನ್ನು ವರಿಸಲು ಭಾರತಕ್ಕೆ ಬಂದ ರಷ್ಯನ್ ಯುವತಿ

ಪ್ರೀತಿಯೇ ಹಾಗೆ, ಎರಡು ಮನಸ್ಸು ಇಷ್ಟ ಪಟ್ಟರೆ ಸಾಕು, ಪ್ರೀತಿ ತಾನಾಗಿಯೇ ಚಿಗುರೊಡೆಯುತ್ತದೆ. ಆದರೆ ಇದೀಗ ಗುಡಿಸಲಿನಲ್ಲಿರುವ ಬಿಹಾರದ ಹುಡುಗನನ್ನು ಮದುವೆಯಾಗಲು ರಷ್ಯಾದ ಯುವತಿ ಭಾರತಕ್ಕೆ ಬಂದಿದ್ದಾಳೆ. ಈ ಅಪರೂಪದ ಪ್ರೇಮಕಥೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆಗೆ ಕಾರಣವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬಿಹಾರದ ಹುಡುಗನ ಜತೆಗೆ ಚಿಗುರಿದ ಪ್ರೀತಿ; ಪ್ರೇಮಿಯನ್ನು ವರಿಸಲು ಭಾರತಕ್ಕೆ ಬಂದ ರಷ್ಯನ್ ಯುವತಿ
ರಾಹುಲ್‌ ಯಾಧವ್‌- ಜೂಲಿ
Image Credit source: Twitter

Updated on: Oct 14, 2026 | 4:05 PM

ಪ್ರೀತಿಯೇ ಹಾಗೆ, ಯಾರನ್ನೋ ಇನ್ಯಾರ ಜೊತೆಗೆ ಬೆಸೆಯುತ್ತದೆ. ಈ ಪ್ರೀತಿಗೆ ಜಾತಿ ಧರ್ಮ, ಊರು, ದೇಶ ಇದ್ಯಾವುದು ಬೇಕಿಲ್ಲ. ಇದಕ್ಕೆ ಉದಾಹರಣೆಯಂತಿದೆ ಈ ಅಪರೂಪದ ಪ್ರೇಮ ಕಥೆ. ಬಿಹಾರದ (Bihar) ಭಾಗಲ್ಪುರ ಜಿಲ್ಲೆಯ ಹಳ್ಳಿಯೊಂದರ ಯುವಕ ರಾಹುಲ್ ಯಾದವ್‌ನನ್ನು ಹುಡುಕಿಕೊಂಡು ರಷ್ಯಾದ ಯುವತಿಯೊಬ್ಬಳು ಬಂದಿದ್ದಾಳೆ. ಹೌದು, ಕೆಲಸಕ್ಕಾಗಿ ರಷ್ಯಾಕ್ಕೆ ತೆರಳಿದ್ದ ವೇಳೆ ರಾಹುಲ್‌ ಹಾಗೂ ಜೂಲಿ ನಡುವೆ ಪರಿಚಯವಾಗಿ ಆ ಬಳಿಕ ಪ್ರೀತಿ ಚಿಗುರಿತ್ತು. ಯುವಕ ರಷ್ಯಾದಿಂದ ಹುಟ್ಟೂರಿಗೆ ಮರಳಿದ ಆರು ತಿಂಗಳ ಬಳಿಕ ಈ ರಷ್ಯನ್ ಯುವತಿ ಭಾರತಕ್ಕೆ ಬಂದಿದ್ದು, ಆತನನ್ನೇ ಮದುವೆಯಾಗಲು ಸಜ್ಜಾಗಿದ್ದಾಳೆ. ಸದ್ಯ ಈ ಅಪರೂಪ ಲವ್ ಸ್ಟೋರಿ ವೈರಲ್ ಆಗಿದೆ.

ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ರಷ್ಯನ್ ಯುವತಿ

ಘರ್ ಕೆ ಕಲೇಶ್ (Ghar Ke Kalesh) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಅಪರೂಪದ ಪ್ರೇಮಕಥೆಯನ್ನು ಹಂಚಿಕೊಳ್ಳಲಾಗಿದೆ. ಕೆಲಸದ ಕಾರಣಕ್ಕೆ ರಾಹುಲ್ ಯಾದವ್‌ ರಷ್ಯಾಕ್ಕೆ ತೆರಳಿದ್ದ ವೇಳೆ ಅಲ್ಲಿ ಜೂಲಿ ಪರಿಚಯವಾಗಿದೆ. ಪ್ರಾರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರ ನಡುವೆ ಆ ಬಳಿಕ ಪ್ರೀತಿ ಚಿಗುರಿದೆ. ಹೀಗಿರುವಾಗ ಏಕಾಏಕಿ ರಾಹುಲ್ ತನ್ನ ಹುಟ್ಟೂರಿಗೆ ಮರಳಬೇಕಾದ ಸಂದರ್ಭ ಎದುರಾಯ್ತು. ಆದರೆ ದೂರ ಇದ್ದರೂ ಇವರಿಬ್ಬರ ನಡುವಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ರಾಹುಲ್ ಭಾರತಕ್ಕೆ ಬಂದು ಆರು ತಿಂಗಳು ಆಯ್ತು ಅಷ್ಟೇ. ಹೀಗಿರುವಾಗ ರಷ್ಯನ್ ಯುವತಿ ಜೂಲಿ ರಾಹುಲ್‌ನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಐಷಾರಾಮಿ ಬದುಕಿಗಿಂತ ಖುಷಿ ಮುಖ್ಯ ಎಂದ ರಷ್ಯನ್ ಯುವತಿ

ತನ್ನ ಕುಟುಂಬದವರೊಂದಿಗೆ ಭಾರತಕ್ಕೆ ಬಂದ ಜೂಲಿ ಪ್ರಿಯಕರ ರಾಹುಲ್ ಮನೆಗೆ ತೆರಳಿದ್ದು ಆತನ ಮನಸ್ಸು ಮಾತ್ರವಲ್ಲ, ಮನೆಯನ್ನು ಮನಸಾರೆ ಒಪ್ಪಿಕೊಂಡಿದ್ದಾಳೆ. ಹೌದು, ಈ ರಷ್ಯನ್ ಯುವತಿಗೆ ತನ್ನ ಬಡತನ ಹಾಗೂ ಪ್ರಸ್ತುತ ಸ್ಥಿತಿಯನ್ನು ವಿವರಿಸಿದ್ದಾನೆ. ನನ್ನ ಬಳಿ ವಾಸಿಸಲು ದೊಡ್ಡ ಬಂಗಲೆ ಇಲ್ಲ, ಕೇವಲ ಸರಳವಾದ ಗುಡಿಸಲಿದೆ. ಇದರಲ್ಲಿ ನೀನು ಹೇಗೆ ಇರಲು ಸಾಧ್ಯ? ಎಂದದ್ದಕ್ಕೆ ಈ ಜೂಲಿ, ನಿನ್ನ ಪ್ರೀತಿಗಾಗಿ ಐಷಾರಾಮಿ ಬದುಕನ್ನು ತೊರೆದು ಈ ಪುಟ್ಟ ಗುಡಿಸಲಿನಲ್ಲಿ ಖುಷಿಯಿಂದ ಬಾಳಲು ನಾನು ಸಿದ್ಧ ಎಂದು ಹೇಳಿದ್ದಾಳೆ.

ರಾಹುಲ್ – ಜೂಲಿ ಪ್ರೀತಿಗೆ ಎರಡು ಕುಟುಂಬದಿಂದ ಸಮ್ಮತಿ

ರಾಹುಲ್ ಹಾಗೂ ಜೂಲಿ ಈ ಇಬ್ಬರ ಪ್ರೀತಿಗೆ ಎರಡು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಇಬ್ಬರ ಕುಟುಂಬದವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪತಿಗೆ ಊಟ ತಂದ ಪತ್ನಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಲವ್ ಸ್ಟೋರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ, ಪ್ರೀತಿ ಕುರುಡು ಅನ್ನೋದು ಇದೇ ಕಾರಣಕ್ಕೆ ಎಂದಿದ್ದಾರೆ. ಇನ್ನೊಬ್ಬರು, ನಿಜವಾದ ಪ್ರೀತಿಗೆ ಗಡಿಗಳಿಲ್ಲ. ಇವರಿಬ್ಬರ ದಾಂಪತ್ಯ ಜೀವನದಲ್ಲಿ ಸಂತೋಷವೇ ತುಂಬಿರಲಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಇದೆಲ್ಲಾ ಸಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us